ಒಂದು ದೊಡ್ಡ ಮಳೆಗೆ ಸುಮಾರು ಮೂರು ಇಂಚಿನಷ್ಟು ಮೇಲ್ಮಣ್ಣು ಕೊಚ್ಚಿಹೋಗುವ ಸಾಧ್ಯತೆಯಿದೆ.ಒಂದು ಇಂಚು ಮೇಲ್ಮಣ್ಣು ತಯಾರಾಗಲು 500 ರಿಂದ 1000 ವರ್ಷ ಬೇಕು.ಆದ್ದರಿಂದ ನಮ್ಮ ಜಮೀನಿನ ಮಣ್ಣು ಕೊಚ್ಚಿಹೋಗುವುದನ್ನು ತಡೆಗಟ್ಟುವುದು ಅತೀ ಮುಖ್ಯ.
ಯಾವುದೇ ಕಾರಣಕ್ಕೂ ಭೂಮಿಯನ್ನು ಸಮತಟ್ಟು ಮಾಡುವ ವ್ಯರ್ಥ ಪ್ರಯತ್ನ ಬೇಡ. ಹೀಗೆ ಮಾಡುವಾಗ ಮೇಲಿನ ಮಣ್ಣು ಕೆಳಗೆ ಬೀಳುವುದರಿಂದ ಆಗುವ ನಷ್ಟ ಅಪಾರ. ಪ್ರತಿ 200 ಅಡಿಗೆ ಒಂದು ಬದು ಇರುವಂತೆ ನೋಡಿಕೊಂಡರೆ ಸಾಕು. ಇಳಿಜಾರು ನೋಡಿಕೊಂಡು ಅಗತ್ಯಕ್ಕೆ ತಕ್ಕಂತೆ 100 ಅಡಿ,50 ಅಡಿಗೆ ಬದುಗಳನ್ನು ಹಾಕಿಕೊಳ್ಳಬಹುದು. ಒಟ್ಟಿನಲ್ಲಿ ಬದುಗಳ ನಿರ್ಮಾಣ ಕೃಷಿಯ ಪ್ರಮುಖ ಹೆಜ್ಜೆ. ಬದುಗಳು ಇದ್ದಾಗ ನೀರು ಮತ್ತು ಮಣ್ಣಿನ ಸವಕಳಿ ತಡೆದು,ಎಲ್ಲಾ ಕಡೆ ತೇವಾಂಶ ಸಮಾನವಾಗಿ ಕಾಪಾಡಲ್ಪಡುವುದರಿಂದ,ಜಮೀನಿನ ಎಲ್ಲಾ ಕಡೆ ಸೂಕ್ಷ್ಮಜೀವಿಗಳು ಮತ್ತು ಎರೆಹುಳುಗಳ ಚಟುವಟಿಕೆಗಳು ನಿರಂತರವಾಗಿ ನಡೆಯುವಂತಾಗುತ್ತದೆ.ಬದುಗಳ ಮೇಲೆ ಬಿದಿರು, ಲಾವಂಚ,ಮರಗಿಡಗಳು,ಮೇವಿನ ಹುಲ್ಲು ಮತ್ತು ಗೊಬ್ಬರದ ಬೆಳೆಗಳನ್ನು ಬೆಳೆದುಕೊಳ್ಳಬಹುದು.
ಮಾಹಿತಿ : ಸುಸ್ಥಿರ ಕೃಷಿ ಪಾಠಗಳು , ಎಲ್.ನಾರಾಯಣ ರೆಡ್ಡಿ ಪುಸ್ತಕದಿಂದ.
No comments:
Post a Comment