ಉಪಯುಕ್ತತೆ: ಬೆಳೆ ಪ್ರಚೋದಕವಾಗಿ ಸಾಕಷ್ಟು ರಾಸಾಯನಿಕ ದ್ರಾವಣಗಳು ಮಾರುಕಟ್ಟೆಯಲ್ಲಿ ಲಭ್ಯವಿರುತ್ತವೆ. ರಾಸಾಯನಿಕಗಳ ಬಳಕೆ ಹಾಗೂ ಸಿಂಪರಣೆ ಮಾಡುವುದರಿಂದ ರೈತ ಮಿತ್ರ ಕೀಟಗಳಿಗೆ ಮಾರಕವಾಗಿದ್ದು, ಜೀವ ವೈವಿಧ್ಯ ನಾಶವಾಗಿ, ನೆಲ ಜಲ ವಾಯು ಪರಿಸರ ಮಾಲಿನ್ಯ ಉಂಟಾಗಿ, ಜನ ಜಾನುವಾರುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರಿಂದ ದೀರ್ಘ ಕಾಲೀನ ಆರೋಗ್ಯ ಸಮಸ್ಯೆ ಉಂಟಾಗುವುದು. ಬಿಪಿ ಶುಗರ್ ಕಿಡ್ನಿ ಅವರ್ ಕ್ಯಾನ್ಸರ್ ನಂತಹ ಸಮಸ್ಯೆಗಳು ಹಾಗೂ ಬಂಜೆತನ, ಷಂಡತನ ಬಹು ದೊಡ್ಡ ಪಿಡುಗಾಗಿ ಕಾಡುತ್ತಿದೆ. ರಾಸುಗಳಲ್ಲೂ ಸಹ ಬಂಜೆತನ ಕಂಡಿರುವುದು ದುಃಖಕರ.
ರೈತರ ನೇರ ಸುಪರ್ದಿಯಲ್ಲಿ, ಸ್ವಾವಲಂಬಿಯಾಗಿ ಅತ್ಯಂತ ಸರಳವಾಗಿ ಸ್ಥಳೀಯ ಸಂಪನ್ಮೂಲ ಬಳಸಿ ತಯಾರಿಸಬಹುದಾದ ಪರಿಸರ ಸ್ನೇಹಿಯಾದ ದ್ರಾವಣವನ್ನು ಸುಭಾಷ್ ಪಾಳೇಕರ್ ಗುರುಗಳು ಆವಿಷ್ಕರಿಸಿದ್ದಾರೆ ಅದುವೇ ಸಪ್ತಧಾನ್ಯಾಮೃತ, ಹಣ್ಣಿನ ಗಿಡಗಳ ಕಾಯಿ ಬೆಳವಣಿಗೆಯ ಸಮಯದಲ್ಲಿ, ಬೆಳೆಗಳು ಕಾಳು ಕಟ್ಟುವ ಸಮಯದಲ್ಲಿ ಸಿಂಪರಣೆ ಮಾಡಬೇಕು.ಯಾವುದೇ ಕೃಷಿಕನ ಯಶಸ್ಸನ್ನು ಅಳೆಯುವ ಮಾನದಂಡ ಎಂದರೆ, ಗುಣಮಟ್ಟದ ಕೃಷಿಉತ್ಪನ್ನದ ಉತ್ಪಾದನೆ ಮತ್ತು ಅಧಿಕ ಉತ್ಪಾದನೆ. ಅದು ಈಡೇರಿದಾಗ ಆದಾಯವೂ ಜಾಸ್ತಿಯಾಗಿ ಮನಸ್ಸಿಗೆ ನೆಮ್ಮದಿಯೂ ಬರುವುದು.
ಹೆಚ್ಚಿನ ಉತ್ಪಾದನೆ, ಬಣ್ಣ, ರುಚಿ,ಸುವಾಸನೆ, ಸ್ವಾದಿಷ್ಟವಾದ, ಗುಣಮಟ್ಟದ ಹಾಗೂ ಅಧಿಕ ಉತ್ಪನ್ನ ಪಡೆಯಲು ಸಪ್ತ ಧಾನ್ಯಾಂಕುರ ಸಿಂಪರಣೆ ಮಾಡ ಬೇಕು.
ಒಂದು ಎಕರೆ ಪ್ರದೇಶಕ್ಕೆ
ಬೇಕಾದ ಸಾಮಗ್ರಿಗಳು :-
- ಏಳ್ಳು-100
- ಗೋಧಿ ಕಾಳು-100
ಗ್ರಾಂ
- ಹೆಸರು ಕಾಳು
-100 ಗ್ರಾಂ
- ಉದ್ದಿನ ಕಾಳು
100 ಗ್ರಾಂ
- ಅಲಸಂದೆ ಕಾಳು
-1000
- ಕಡ್ಲೆ ಕಾಳು-100 ಗ್ರಾಂ
- ಅವರೆ ಅಥವಾ
ಬಟಾಣಿ ಕಾಳು-100
ಗ್ರಾಂ
- ಹಳ್ಳಿಕಾರ್ ಗೋಮೂತ್ರ
10 ಲೀಟರ್
ಬೇಕಾದ ಸಾಮಗ್ರಿಗಳು :-
- ತೆಳುವಾದ ಹತ್ತಿ
ಬಟ್ಟೆ ನೆಂದ
ಕಾಳು ಕಟ್ಟಿಡಲು
- ನೀರಿನ ಡ್ರಮ್-
200 ಲೀಟರ್ ಅಳತೆ
- 100
ಗ್ರಾಂ ನೆನಸಿಡಬಹುದಾದ
ಪಾತ್ರೆ
- 4.
ಒಂದು ಕೆಜಿ
ನೆಂದ ಕಾಳು
ಹಿಡಿಯುವ ಪಾತ್ರೆ
- ಹತ್ತು
ಲೀಟರ್ ಗೋಮೂತ್ರ
ಹಿಡಿಯುವ ಪಾತ್ರೆ.
-:ತಯಾರು ಮಾಡುವ ವಿಧಾನ :-
ಮೊದಲನೆಯ ದಿನ: ಒಂದು ಚಿಕ್ಕ ಬಟ್ಟಲಿನಲ್ಲಿ 100 ಗ್ರಾಂ ಎಳ್ಳನ್ನು ಅಷ್ಟೇ ಪ್ರಮಾಣದ ನೀರನ್ನು ಹಾಕಿ ಪೂರ್ಣವಾಗಿ ನೆನಸಿಡಿ.
ಎರಡನೇ ದಿನ: ಒಂದು ಕೆಜಿ ಹಿಡಿಯುವ ದೊಡ್ಡ ಬಟ್ಟಲಿನಲ್ಲಿ ಉಳಿದ ಆರು ಕಾಳುಗಳನ್ನು ಅಷ್ಟೇ ಪ್ರಮಾಣದ ನೀರಿನಲ್ಲಿ ನೆನಸಿಡಿ.
ಮೂರನೇ ದಿನ: ನೆಂದ ಅಷ್ಟೂ ಕಾಳುಗಳನ್ನು ತೆಳುವಾದ ಹತ್ತಿ ಬಟ್ಟೆಯಲ್ಲಿ ಕಬ್ಬಿಟ್ಟು ನೇತುಹಾಕಬೇಕು. ಉಳಿದ ನೀರನ್ನು ಚೆಲ್ಲದೇ ಪಾತ್ರೆಯಲ್ಲಿ ಸುರಕ್ಷಿತ ಜಾಗದಲ್ಲಿ ಜೋಪಾನವಾಗಿ ಶೇಖರಿಸಿಡಿ.
ನಾಲ್ಕನೇ ದಿನ: ಮೊಳಕೆ ಒಂದು ಇಂಚು ಬಂದಿರುತ್ತದೆ.
ಮೊಳಕೆ ಬಂದ ಕಾಳುಗಳನ್ನು ರುಬ್ಬುವ ಕಲ್ಲಿನಲ್ಲಿ ಚೆನ್ನಾಗಿ ನುಣುಪಾಗುವಂತೆ ರುಬ್ಬಬೇಕು.
ಯಾವುದೇ ಕಾರಣಕ್ಕೂ ಮಿಕ್ಸಿಯಲ್ಲಿ ಅಥವಾ ಗ್ರೆಂಡರ್ ನಲ್ಲಿ ರುಬ್ಬಬಾರದು.
ಏಕೆಂದರೆ, ಮಿಕ್ಸಿಯಲ್ಲಿ ಅಥವಾ ಡ್ರೈಂಡರ್ ನಲ್ಲಿ ರುಬ್ಬಿದಾಗ ಬಿಸಿಯ ಶಾಖಕ್ಕೆ
ಉಪಯುಕ್ತ ಹಾರ್ಮೋನ್ ಗಳು ಸುಟ್ಟುಹೋಗುತ್ತವೆ. ಅದರಿಂದ ಸಪ್ತ ಧಾನ್ಯಾಮೃತ ಪರಿಣಾಮಕಾರಿಯಾಗಲಾರದು.
ರುಬ್ಬಿದ ನಂತರ ಪಡೆದ ಮೊಳಕೆ ಕಾಳುಗಳ ರಸವನ್ನು ಒಂದು ಪಾತ್ರೆಯಲ್ಲಿ ಎತ್ತಿಡಿ.
200 ಲೀಟರ್ ನೀರಿನ ಡ್ರಮ್ಮಿಗೆ ಹೊರಗೆ ನೀರು ಉಕ್ಕಿಹೋಗದ ಹಾಗೇ, 180 ರಿಂದ 185 ಲೀಟರ್ ನೀರು ತುಂಬಿ, ಅದಕ್ಕೆ 10 ಲೀಟರ್ ದೇಸೀ ಹಸುವಿನ ಗೋಮೂತ್ರ ಸೇರಿಸಿ. ಗೋಮೂತ್ರ ಸೇರಿಸಿದ ನೀರಿಗೆ ಕಾಳು ನೆನೆ ಹಾಕಿದ್ದ ನೀರನ್ನು ಸೇರಿಸಿ. ನಂತರ ರುಬ್ಬಿದ ಮೊಳಕೆ ಕಾಳು ರಸವನ್ನು ಸೇರಿಸಿ ಕೈಗಳಿಂದ ಚೆನ್ನಾಗಿ ಬೆರೆಸಿರಿ. ನಂತರ ದೊಣ್ಣೆಯಿಂದ ಹತ್ತಾರು ಬಾರಿ ಚೆನ್ನಾಗಿ ನೀರಿನಲ್ಲಿ ತಿರುಗಿಸಿರಿ. ಬ್ಯಾರಲ್ ಅನ್ನು ಗೋಣಿಚೀಲ ದಿಂದ ಮುಚ್ಚಿರಿ.
ಎರಡು ಗಂಟೆಗಳ ಕಾಲ ಹುದುಗುವಿಕೆಯ ರಾಸಾಯನಿಕ ಕ್ರಿಯೆಯಿಂದ ಸಪ್ತಧಾನ್ಯಾಂಕರ ಅಥವಾ ಸಪ್ತಧಾನ್ಯಾಮೃತ ಸಿದ್ಧವಾಗುವುದು.
ನಂತರ ಸಿಂಪರಿಸಿ, 24 ಗಂಟೆಯೊಳಗೆ ಸಿಂಪರಣೆ ಮಾಡಬೇಕು. ಅದಕ್ಕಾಗಿ ಬೆಳಿಗ್ಗೆ 6 ಗಂಟೆಗೆ ಬೆರೆಸಲು ಪ್ರಾರಂಭಿಸಿದರೆ 8 9 ಗಂಟೆಗೆ ಸಿಂಪರಣೆಗೆ ಸಿದ್ಧವಾಗುತ್ತದೆ. ಯಾವುದೇ ಕಾರಣಕ್ಕೂ ನೀರನ್ನು ಬೇರೆಸಲೇಬಾರದು.
ಕಾಯಿ ಅಥವಾ ಬೀಜದ ಬೆಳವಣಿಗೆಯ ಒಂದು ತಿಂಗಳ ನಂತರ ಮೊದಲ ಸಿಂಪರಣೆ ಮಾಡಬೇಕು. ಹಣ್ಣುಗಳ ಬೆಳವಣಿಗೆ ಅಥವಾ ಬೀಜಗಳ ಬೆಳವಣಿಗೆಯ ಹಂತದಿಂದ ಕೊಯ್ಲಿನ ಮುಂಚಿನವರೆಗೆ 21 ದಿನಗಳ ಅಂತರದಲ್ಲಿ 4 ಬಾರಿ ಸಿಂಪರಣೆ ಮಾಡಬೇಕು. ಯವುದೇ ಕಾರಣಕ್ಕೂ ನೀರನ್ನು ಬೆರೆಸಬಾರದು.
ಸಪ್ತಧಾನ್ಯಾಮೃತ ಸಿಂಪಡಿಸಿದ ಗಿಡಗಳಲ್ಲಿ ಕಾಯಿ ಮತ್ತು ಹಣ್ಣುಗಳು ಆಕರ್ಷಕ ಬಣ್ಣದಿಂದ,ಹೊಳಪಿನಿಂದ ಕೂಡಿದ್ದು, ರುಚಿಯಾಗಿ, ಸ್ವಾದಿಷ್ಟವಾಗಿದ್ದು, ಗುಣಮಟ್ಟದಿಂದ ಕೂಡಿದ್ದು, ಹೆಚ್ಚಿನ ಉತ್ಪಾದನೆ ಬರುತ್ತದೆ. ಪೀಚುಗಳು ಮತ್ತು ಹಣ್ಣಿನ ರೆಂಬೆಗಳು ಗಟ್ಟಿಯಾಗುವುದರಿಂದ ಆದರೆ ಕಾಯಿ ಕಟ್ಟುವ ಹಂತದಲ್ಲಿ ಉದುರುವುದಿಲ್ಲ.
ಎಚ್ಚರಿಕೆ: ಯಾವುದೇ ಕಾರಣಕ್ಕೂ ನೀರನ್ನು ಬೆರೆಸಬೇಡಿ. ಎಲ್ಲಾ ರೋಗಗಳನ್ನು ಜೀವಾಮೃತವೇ ನಿಯಂತ್ರಿಸುತ್ತದೆ. ಆದ್ದರಿಂದ, ಹುಳಿ ಮಜ್ಜಿಗೆ ಸಿಂಪರಣೆ ಮಾಡುವುದು ಬೇಡ.
No comments:
Post a Comment