• "ಆರೋಗ್ಯಕರ ದೇಹ ಮತ್ತು ಆರೋಗ್ಯಕರ ಗ್ರಹಕ್ಕಾಗಿ ಸಾವಯವವನ್ನು ಬೆಳೆಯಿರಿ." • "ಸ್ವಚ್ಛ ಮತ್ತು ಹಸಿರನ್ನು ಸೇವಿಸಿ - ಸಾವಯವವನ್ನು ಆರಿಸಿ." • "ಹಣಕ್ಕಾಗಿ ಮಾತ್ರವಲ್ಲ, ಹಲವರ ಆರೋಗ್ಯಕ್ಕಾಗಿ ಸಾವಯವ ಕೃಷಿ." • "ಮಣ್ಣನ್ನು ಪೋಷಿಸಿ, ಆತ್ಮವನ್ನು ಪೋಷಿಸಿ - ಸಾವಯವವಾಗಿ ಬೆಳೆಯಿರಿ." • "ಆರೋಗ್ಯಕರ ಭೂಮಿ, ಆರೋಗ್ಯಕರ ಸಸ್ಯಗಳು, ಆರೋಗ್ಯಕರ ಜನರು." • "ನಿಮ್ಮ ರೈತನನ್ನು ತಿಳಿದುಕೊಳ್ಳಿ, ನಿಮ್ಮ ಆಹಾರವನ್ನು ತಿಳಿದುಕೊಳ್ಳಿ - ಸಾವಯವಕ್ಕೆ ಹೋಗಿ." • "ರಾಸಾಯನಿಕ-ಮುಕ್ತ ಮತ್ತು ಆರೋಗ್ಯಕರ - ಅದು ಸಾವಯವ ಭರವಸೆ." • "ಪ್ರಕೃತಿಯ ಉದ್ದೇಶದಂತೆ ಸಾವಯವ ಬೆಳೆ ಬಿತ್ತಿ, ಬೆಳೆಸಿ ಮತ್ತು ತಿನ್ನಿರಿ." • "ಸಾವಯವ: ಪ್ರಕೃತಿಗೂ ಒಳ್ಳೆಯದು, ನಿಮಗೂ ಇನ್ನೂ ಒಳ್ಳೆಯದು." • "ಭೂಮಿಯಿಂದ ಭೂಮಿಗೆ - ಸಾವಯವ ಕೃಷಿ." • "ಸಾವಯವವನ್ನು ಆರಿಸಿ, ಜೀವನವನ್ನು ಆರಿಸಿ." • "ಭೂಮಿಯನ್ನು ಸಂರಕ್ಷಿಸಿ, ಸಾವಯವ ಪದ್ಧತಿಗೆ ಹೋಗಿ." • "ಪೌಷ್ಠಿಕಾಂಶಕ್ಕಾಗಿ ಕ್ರಮ ಕೈಗೊಳ್ಳಿ - ಸಾವಯವ ಕೃಷಿಯನ್ನು ಬೆಂಬಲಿಸಿ." • "ಸುಸ್ಥಿರ ವಿಕಾಸಕ್ಕಾಗಿ ಸಾವಯವ ಕ್ರಾಂತಿಯಲ್ಲಿ ಸೇರಿ." • "ಈಗಲೇ ಕಾರ್ಯನಿರ್ವಹಿಸಿ, ಬುದ್ಧಿವಂತಿಕೆಯಿಂದ ಕೃಷಿ ಮಾಡಿ - ಸಾವಯವಕ್ಕೆ ಹೋಗಿ." • "ರಾಸಾಯನಿಕಗಳನ್ನು ಬಳಸಲು ನಿರಾಕರಿಸು, ಇಂದೇ ಸಾವಯವವನ್ನು ಆರಿಸಿಕೊಳ್ಳಿ!" • "ಭಯಪಡಬೇಡಿ, ಇದು ಸಾವಯವ!" • "ಸಾಂಪ್ರದಾಯಿಕ ಪದ್ಧತಿ ಸ್ವೀಕಾರಾರ್ಹ, ಸಾವಯವ ಪದ್ಧತಿ ಸುಸ್ಥಿರ." • "ವಿಷಕಾರಿಯನ್ನು ತಿರಸ್ಕರಿಸಿ. ಸಾವಯವವನ್ನು ಅಳವಡಿಸಿಕೊಳ್ಳಿ." • "ಶುದ್ಧ ಆಹಾರ ಬೇಕು - ಸಾವಯವ ಆಹಾರ ಬೇಕು." • "ನಮ್ಮ ಗ್ರಹವನ್ನು ಒಂದೊಂದೇ ಜಮೀನಿನಿಂದ ಉಳಿಸಿ - ಸಾವಯವವನ್ನು ಆರಿಸಿ." • "ಸಾವಯವ ಕೃಷಿ: ಭೂಮಿಯನ್ನು ಗುಣಪಡಿಸುವುದು, ಅದರ ಜನರಿಗೆ ಆಹಾರ ನೀಡುವುದು." • "ಉಸಿರಾಡುವ ಗ್ರಹಕ್ಕಾಗಿ ಸಾವಯವವಾಗಿ ಬೆಳೆಯಿರಿ." • "ಸಾವಯವ ಕೈಗಳಿಂದ ಭೂಮಿಯನ್ನು ಬೆಳೆಸಿ." • "ಹಸಿರು ಕೃಷಿ, ಶುದ್ಧ ಆಹಾರ - ಅದು ಸಾವಯವ ಜೀವನ." • "ಸಾವಯವ ಜೇನುಗೂಡುಗಳಿಂದ ಸಮುದಾಯಗಳು ಅಭಿವೃದ್ಧಿ ಹೊಂದುತ್ತವೆ." • "ಒಟ್ಟಾಗಿ, ನಾವು ಸಾವಯವವಾಗಿ ಆರೋಗ್ಯಕರ ಜಗತ್ತನ್ನು ಬೆಳೆಸಬಹುದು." • "ಸ್ಥಳೀಯ, ಸಾವಯವ ಮತ್ತು ಅಭಿವೃದ್ಧಿ ಹೊಂದುತ್ತಿರುವ - ಸಮುದಾಯ ಕೃಷಿ ಅತ್ಯುತ್ತಮವಾಗಿದೆ." • "ಸಾವಯವ ರೈತರು ಭೂಮಿಯ ರಕ್ಷಕರು - ಅವರನ್ನು ಬೆಂಬಲಿಸಿ." • "ಸಮುದಾಯದೊಂದಿಗೆ ಒಗ್ಗಟ್ಟಿನಿಂದ - ಸಾವಯವವಾಗಿ ಕೃಷಿ ಮಾಡೋಣ." • "ನಿಮ್ಮ ತಟ್ಟೆಯಲ್ಲಿ ಸಾವಯವ, ನೀವು ಮೆಚ್ಚಬಹುದಾದ ಆರೋಗ್ಯ." • "ನಿಮ್ಮ ಆರೋಗ್ಯವು ಒಂದು ಹೂಡಿಕೆ, ಖರ್ಚಲ್ಲ. ಸಾವಯವ ಪದ್ಧತಿಯನ್ನು ಅನುಸರಿಸಿ." • "ಬುದ್ಧಿವಂತಿಕೆಯಿಂದ ತಿನ್ನಿರಿ - ಆರೋಗ್ಯಕರ ನಾಳೆಗಾಗಿ ಸಾವಯವವನ್ನು ಆರಿಸಿ." • "ಶುದ್ಧ ಆಹಾರವು ಉತ್ತಮ ಮನಸ್ಥಿತಿಗೆ ಸಮಾನವಾಗಿದೆ - ಸಾವಯವ ಆಹಾರ ಸೇವಿಸಿ." • "ಬಲವಾದ ರೋಗನಿರೋಧಕ ಶಕ್ತಿಗಾಗಿ, ಸಾವಯವಕ್ಕೆ ಹೋಗಿ." • "ಸಾವಯವ ಅಭಿಮಾನಿಯಾಗಿರಿ." • "ಸಾವಯವ: ಏಕೆಂದರೆ ಪ್ರಕೃತಿಗೆ ಚೆನ್ನಾಗಿ ತಿಳಿದಿದೆ." • "ಹೊಸ ಎಲೆಯನ್ನು ತಿರುಗಿಸಿ, ಸಾವಯವ ಕವಲುಗಳನ್ನು ಬಳಸಿ." • "ಅದನ್ನು ನೈಜವಾಗಿಡಿ, ಸಾವಯವವಾಗಿಡಿ." • "ಸಾವಯವವನ್ನು ಕಚ್ಚಿ, ಆರೋಗ್ಯವನ್ನು ಕಚ್ಚಿ." • "ಸಾವಯವ ಕೃಷಿಯಿಂದ ಸುಸ್ಥಿರತೆ ಪ್ರಾರಂಭವಾಗುತ್ತದೆ." • "ಭವಿಷ್ಯವನ್ನು ಕೊಯ್ಲು ಮಾಡಿ - ಇಂದು ಸಾವಯವವಾಗಿ ಗಿಡ ನೆಡಿ." • "ಸುಸ್ಥಿರ, ಜವಾಬ್ದಾರಿಯುತ ಮತ್ತು ಸಾವಯವ." • "ಸುಸ್ಥಿರ ದೃಶ್ಯಕ್ಕಾಗಿ ಹಸಿರು ಬೆಳೆಸಿ, ಸಾವಯವ ಬೆಳೆಸಿ." • "ಬೀಜದಿಂದ ಮೇಜಿಗೆ, ಸುಸ್ಥಿರವಾಗಿ ಸ್ಥಿರ - ಅದು ಸಾವಯವ." down!

ಅಡಿಕೆ ಕೃಷಿ ಸಮಗ್ರ ಮಾಹಿತಿ

ಭಾರತದಲ್ಲಿ ಸುಮಾರು ೩.೧೩ ಲಕ್ಷ ಹೆಕ್ಟೇರುಗಳಲ್ಲಿ ಅಡಿಕೆಯನ್ನು ಬೆಳೆಯಲಾಗುತ್ತಿದ್ದು ಒಟ್ಟು ಉತ್ಪಾದನೆ ಸುಮಾರು ೩.೭೯ ಲಕ್ಷ ಟನ್ನುಗಳಷ್ಟಿದೆ. ಪ್ರಮುಖವಾಗಿ ಕರ್ನಾಟಕ, ಕೇರಳ, ಅಸ್ಸಾಂ, ಮಹಾರಾಷ್ಟ್ರ ಹಾಗೂ ಪಶ್ಚಿಮ ಬಂಗಾಳದಲ್ಲಿ ಅಡಿಕೆಯನ್ನು ಬೆಳೆಯಲಾಗುತ್ತದೆ. ಪ್ರಪಂಚದಲ್ಲಿ ಹೆಚ್ಚು ಅಡಿಕೆ ಬೆಳೆಯುವ ದೇಶಗಳೆಂದರೆ ಭಾರತ, ಚೀನಾ, ಬಾಂಗ್ಲಾದೇಶ, ಇಂಡೋನೇಶಿಯಾ ಮತ್ತು ಮಯನ್‌ಮಾರ್‌. ಅಡಿಕೆ  ಬೆಳೆಯಲ್ಲಿ ಭಾರತ ಮೊದಲನೆಯ ಸ್ಥಾನದಲ್ಲಿದ್ದರೆ, ಚೀನಾ ಮತ್ತು ಬಾಂಗ್ಲಾದೇಶ ನಂತರದ ಸ್ಥಾನದಲ್ಲಿವೆ. ಅಡಿಕೆಯಿಂದ ಹೆಚ್ಚಿನ ಲಾಭವನ್ನುಗಳಿಸಲು ಅದನ್ನು ಬೆಳೆಸುವ ವೈಜ್ಞಾನಿಕ ಕೃಷಿ ವಿಧಾನಗಳನ್ನು ತಿಳಿದುಕೊಂಡು ಅವುಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ.

ಹವಾಗುಣ ಮತ್ತು ಮಣ್ಣು.

ಅಡಿಕೆಗೆ ಧಾರಾಳವಾದ ಹಾಗೂ ದೀರ್ಫ್ಥಕಾಲದ ಮಳೆ ಅವಶ್ಯಕ. ಇದಕ್ಕೆ ಅನುಕೂಲಕರವಾದ ಉಷ್ಣಾಂಶ  ೧೪ರಿಂದ ೩೬ಸೆಂ. ನೀರು ಹರಿದುಹೋಗಬಲ್ಲ ಆಳವಾದ ಹರವು ಉಳ್ಳ ಮಣ್ಣಿದ್ದರೆ ಇದನ್ನು ಸಮುದ್ರ ಮಟ್ಟದಿಂದ ಸುಮಾರು ೧೦೦೦ ಮೀ. ಎತ್ತರದವರೆಗೂ ಬೆಳೆಯಬಹುದು. ಮುರ ಮಣ್ಣು ಜೆಂಬಿಟ್ಟಿಗೆ ಮಣ್ಣು, ಕೆಂಪು ಸೂಸಲು ಮಣ್ಣು ಮತ್ತು ಜಲಪ್ರವಾಹ ತಂದ ಮೆಕ್ಕಲು ಮಣ್ಣು ಅಡಿಕೆ ಬೆಳೆಗೆ ಯೋಗ್ಯವಾಗಿದೆ.

ತಳಿಗಳು

ಕೋಷ್ಟಕ ೧. ಅಡಿಕೆಯ ವಿವಿಧ ತಳಿಗಳು ಹಾಗೂ ಅವುಗಳ ಗುಣಧರ್ಮ

ತಳಿ

ಬೆಳವಣಿಗೆ

ಅಡಿಕೆಯ ಆಕಾರ ಹಾಗೂ ಗಾತ್ರ

ಚಾಲಿ ಇಳುವರಿ  (ಕಿ.ಗ್ರಾಂ. ಪ್ರತಿ ಮರಕ್ಕೆ)

ಶಿಫಾರಸು ಮಾಡಲಾದ ಪ್ರದೇಶಗಳು

ದ.ಕ. ಸ್ಥಳೀಯ

ಎತ್ತರ

ವೃತ್ತಾಕಾರ, ದಪ್ಪ

2.00

ಕರಾವಳಿ ಕರ್ನಾಟಕ
ಮತ್ತು ಕೇರಳ

ಮಂಗಳ*

ಮಧ್ಯಮ

ಎತ್ತರ, ವೃತ್ತಾಕಾರ, ಸಣ್ಣ

3.00

ಕರಾವಳಿ ಕರ್ನಾಟಕ
ಮತ್ತು ಕೇರಳ

ಸುಮಂಗಳ *

ಎತ್ತರ

ಅಂಡಾಕಾರ, ಮಧ್ಯಮ

3.20

ಕರ್ನಾಟಕ ಮತ್ತು ಕೇರಳ

ಶ್ರೀಮಂಗಳ*

ಎತ್ತರ

ವೃತ್ತಾಕಾರ, ದಪ್ಪ

3.28

ಕರ್ನಾಟಕ ಮತ್ತು ಕೇರಳ

ಮೋಹಿತ್ನಗರ*

ಎತ್ತರ

ಅಂಡಾಕಾರದಿಂದ ವೃತ್ತಾಕಾರ, ಮಧ್ಯಮ

3.67

ಕರ್ನಾಟಕ ಮತ್ತು ಕೇರಳ

ಎಸ್‌-ಎ-ಎಸ್‌ 1

ಎತ್ತರ

ಅಂಡಾಕಾರ, ಮಧ್ಯಮ

4.60

ಕರ್ನಾಟಕದ ಉತ್ತರ
ಕನ್ನಡ ಜಿಲ್ಲೆ

ತೀರ್ಥಹಳ್ಳಿ

ಎತ್ತರ

ಉದ್ದ, ಸಣ್ಣ

2.60

ಕರ್ನಾಟಕದ
ಮಲೆನಾಡು ಪ್ರದೇಶ

ಶ್ರೀವರ್ಧನ

ಎತ್ತರ

ಮೊಟ್ಟೆಯಾಕಾರ

2.20

ಮಹಾರಾಷ್ಟ್ರದ
ಮಧ್ಯಮ ರಾಯಗಢ ಹಾಗೂ
ರತ್ನಗಿರಿ ಪ್ರದೇಶ

* ಸಿಪಿ.ಸಿ.ಆರ್‌.ಐ. ಬಿಡುಗಡೆಗೊಳಿಸಿದ ತಳಿಗಳು.

 ಸಸಿಗಳನ್ನು ಬೆಳೆಸುವ ವಿಧಾನ

ಶೀಘ್ರ ಇಳುವರಿ ಕೊಡಲು ಪ್ರಾರಂಭಿಸಿರುವ, ಹತ್ತು ವರ್ಷಕ್ಕಿಂತಲೂ ಹೆಚ್ಚು ಪ್ರಾಯದ ಹಾಗೂ ಉತ್ತಮ ಕಾಯಿ ಕಚ್ಚುವಿಕೆ ಹೊಂದಿರುವ ಮರಗಳನ್ನು ತಾಯಿಮರ ಎಂದು ಆಯ್ಕೆ ಮಾಡಿಕೊಳ್ಳಬೇಕು. ಈ ತಾಯಿಮರಗಳಿಂದ ಸುಮಾರು ೩೫ ಗ್ರಾಂಗಿಂತಲೂ ಹೆಚ್ಚು ತೂಕವಿರುವ ಪೂರ್ಣವಾಗಿ ಹಣ್ಣಾದ ಅಡಿಕೆಗಳನ್ನು ಬೀಜದ ಅಡಿಕೆ ಎಂದು ಆಯ್ದುಕೊಳ್ಳಬೇಕು. ಹೀಗೆ ಆಯ್ಕೆ ಮಾಡಿದ ಅಡಿಕೆಗಳನ್ನು ಅವುಗಳ ತೊಟ್ಟಿನ ಭಾಗ ಮೇಲೆ ಬರುವಂತೆ ಮರಳು ಮಣ್ಣಿನ ಪಾತಿಯಲ್ಲಿ ೫ ಸೆಂ.ಮೀ. ಅಂತರದಲ್ಲಿ ಹೂಳಬೇಕು. ಪಾತಿಯನ್ನು ಅಡಿಕೆ ಸೋಗೆ ಅಥವಾ ಭತ್ತದ ಹುಲ್ಲಿನಿಂದ  ತೆಳುವಾಗಿ ಮುಚ್ಚಬೇಕು. ಪ್ರತಿದಿನವೂ ಪಾತಿಗಳಿಗೆ ನೀರು ಕೊಡಬೇಕು.

ಮೂರು ತಿಂಗಳ ನಂತರ ಮೊಳಕೆಗಳನ್ನು ಎರಡನೇ ಹಂತದ ಪಾತಿಗೆ ವರ್ಗಾಯಿಸಬೇಕು. ಈ ಪಾತಿಯ ಅಗಲ ೧.೫ ಮೀ. ಇದ್ದು ಉದ್ದವನ್ನು ಅನುಕೂಲಕ್ಕೆ ತಕ್ಕಂತೆ ಇಟ್ಟುಕೊಳ್ಳಬೇಕು. ಪ್ರತಿಯೊಂದು ಪಾತಿಗೂ ಹೆಕ್ಟೇರಿಗೆ ೫ ಟನ್ನುಗಳ ಪ್ರಮಾಣದಲ್ಲಿ ಹಟ್ಟಿಗೊಬ್ಬರವನ್ನು ಕೊಡಬೇಕು. ನಂತರ ಮಳೆಗಾಲದ ಪ್ರಾರಂಭದಲ್ಲಿ ೩೦ ಸೆಂ.ಮೀ. ೬ ೩೦ ಸೆಂ. ಮೀ. ಅಂತರವಿರುವಂತೆ ಮೊಳಕೆಗಳನ್ನು ನಾಟಿ ಮಾಡಬೇಕು. ಪಾತಿಗಳಿಗೆ ಅಂಶಿಕ ನೆರಳನ್ನು ಒದಗಿಸಬೇಕು. ಡಿಸೆಂಬರ್ನಿಂದ ಮೇ ತಿಂಗಳವರೆಗೆ ದಿನಕ್ಕೆ ಎರಡು ಬಾರಿಯಂತೆ ನೀರು ಕೊಡಬೇಕು. ಮುಳೆಗಾಲದಲ್ಲಿ ನೀರು ಹರಿದು ಹೋಗುವಂತ ಕಾಲುವೆಗಳನ್ನುಮಾಡಿಕೊಡಬೇಕು. ಕಾಲ ಕಾಲಕ್ಕೆ ಕಳೆಗಳನ್ನು ಕಿತ್ತು ಪಾತಿಗಳನ್ನು ಸ್ವಚ್ಛಗೊಳಿಸುತ್ತಿರಬೇಕು. ಈ ಮೊಳಕೆಗಳನ್ನು ಪಾಲಿತಿನ್ ಚೀಲ (೨೫ ಸೆಂ.ಮೀ. x ೧೫ ಸೆಂ.ಮೀ., ೧೫೦ ಗೇಜ್) ಗಳಲ್ಲಿ ೭:೩:೨ ಪ್ರಮಾಣದಲ್ಲಿ ಮಣ್ಣು, ಗೊಬ್ಬರ ಹಾಗೂ ಮರಳಿನ ಮಿಶ್ರಣ ಹಾಕಿಯೂ ಬೆಳೆಸಬಹುದು.

 ಗಿಡಗಳ ಆಯ್ಕೆ

 ಹನ್ನೆರಡರಿಂದ ಹದಿನೆಂಟು ತಿಂಗಳ, ಐದಕ್ಕಿಂತ ಹೆಚ್ಚು ಎಲೆಗಳಿರುವ, ಸಮ ಪ್ರಮಾಣದ ಎತ್ತರವಿರುವ ಗಿಡಗಳನ್ನು ಆಯ್ದುಕೊಳ್ಳಬೇಕು.

 ಗಿಡ ನೆಡುವ ಸಮಯ

 ಉತ್ತಮ ಬಸಿಯುವಿಕೆ ಇರುವ ಮಣ್ಣಿನಲ್ಲಿ ಮೇ-ಜೂನ್ ತಿಂಗಳಲ್ಲಿಗಿಡಗಳನ್ನುನೆಡಬಹುದು. ನೀರು ನಿಲ್ಲುವ ಸಾಧ್ಯತೆ ಇರುವ ಜೇಡಿ ಮಣ್ಣಿನಲ್ಲಿ ಹಾಗೂ ಅಧಿಕ ಮಳೆ ಬೀಳುವ ಪ್ರದೇಶಗಳಲ್ಲಿ ಆಗಸ್ಟ್ - ಸಪ್ಟೆಂಬರ್ ತಿಂಗಳಲ್ಲಿ ಗಿಡಗಳನ್ನು ನೆಡಬಹುದು.

 ಅಂತರ ಹಾಗೂ ಸಾಲು ಮಾಡುವಿಕೆ

 ಗಿಡಗಳ ನಡುವಿನ ಅಂತರ ೨.೭ ಮೀ. X ೨.೭ ಮೀ. ನಷ್ಟಿರಬೇಕು. ಗಿಡಗಳನ್ನುಉತ್ತರ-ದಕ್ಷಿಣ ಸಾಲಿನಲ್ಲಿ ೩೫% ಪಶ್ಚಿಮಕ್ಕೆ ಇರುವಂತೆ ನೆಡಬೇಕು. ಇದರಿಂದ ಸೂರ್ಯನ ಶಾಖದ ತೀವ್ರತೆಯನ್ನು ತಡೆಗಟ್ಟಲು ಸಹಾಯವಾಗುವುದು. ನೈಜುತ್ಕಹಾಗೂ ದಕ್ಷಿಣ ಭಾಗದಲ್ಲಿ ಅಡಿಕೆ ಮರವನ್ನು ಅಡಿಕೆ ಸೋಗೆ ಅಥವಾ ಹಾಳೆಯಿಂದ ಮುಚ್ಚಿ ಅಥವಾ ಉದ್ದವಾಗಿ ಮತ್ತು ಶೀಘ್ರವಾಗಿ ಬೆಳೆಯುವ ಮರಗಳನ್ನು ಬೆಳೆಸಿ ಸೂರ್ಯನ ಶಾಖದ ತೀವ್ರತೆಯನ್ನು ತಡೆಯಬಹುದು. ಅಡಿಕೆ ತೋಟವನ್ನು ಮಿಶ್ರಬೆಳೆಗಳನ್ನು ಬೆಳೆಯಲು ಉಪಯೋಗಿಸುವುದಾದರೆ ಅಡಿಕೆಯನ್ನು ೩.೩ ಮೀ. ೬೩.೩ ಮೀ. ಅಂತರದಲ್ಲಿ ನೆಡಬಹುದು.

 ಗಿಡ ನೆಡುವ ಪದ್ಧತಿ

 ಆಳವಾದ ಹಾಗೂ ಉತ್ತಮ ಬಸಿಯುವಿಕೆ ಇರುವ ಮಣ್ಣಿನಲ್ಲಿ ೯೦ x ೯೦ x ೯೦ ಸೆಂ.ಮೀ. ನಷ್ಟು ಆಳದ ಹೊಂಡಗಳನ್ನು ತೆಗೆಯಬಹುದು. ಗಟ್ಟಿಯಾದ ಮಣ್ಣು

 ರಸಗೊಬ್ಬರದ ಬಳಕೆ

 ಅಡಿಕೆಗೆ ಬೇಕಾಗುವ ರಾಸಾಯನಿಕ ಗೊಬ್ಬರಗಳ ಪ್ರಮಾಣ ಈ ಕೆಳಗಿನಂತಿದೆ.

 ಕೋಷ್ಟಕ ೨. ಅಡಿಕೆಗೆ ಬೇಕಾಗುವ ರಾಸಾಯನಿಕ ಗೊಬ್ಬರಗಳ ಪ್ರಮಾಣ (ಒಂದು ಮರಕ್ಕೆ ಗ್ರಾಂ. ನಲ್ಲಿ)

ರಸಗೊಬ್ಬರ

ಮೊದಲನೇ ವರ್ಷ

ಮೊದಲನೇ ವರ್ಷ

ಮೊದಲನೇ ವರ್ಷ

ಸಾರಜನಕ

೩೩

೬೬

೧೦೦

ರಂಜಕ

೧೩

೨೬

೪೦

ಪೊಟಾಷ್‌

೪೬

೯೨

೧೪೦

ಯೂರಿಯಾ

೭೨

೧೪೪

೨೨೦

ರಾಕ್‌ ಫಾಸ್ಫೇಟ್‌

೬೫

೧೩೦

೨೦೦

ಮ್ಯೂರೇಟ್‌

೭೭

೧೫೪

೨೩೦

ಮತ್ತು ನೀರಿನ ಪಾತಳಿ ಮೇಲೆ ಇರುವ ಭೂಮಿಯಲ್ಲಿ ಬಸಿಗಾಲುವೆ ಒದಗಿಸಲು ತೊಂದರೆ ಆಗುವುದರಿಂದ ಹೊಂಡದ ಅಳತೆ ೬೦ x ೬೦ x ೬೦ ಸೆಂ.ಮೀ. ನಷ್ಟು ಇಡಬಹುದು. ಹೊಂಡವನ್ನು ಹಟ್ಟಿಗೊಬ್ಬರ ಹಾಗೂ ಮರಳಿನಿಂದ ೫೦ ಸೆಂ.ಮೀ. ವರೆಗೆ ತುಂಬಬೇಕು. ಗಿಡವನ್ನು ಹೊಂಡದ ಮಧ್ಯದಲ್ಲಿ ನೆಟ್ಟು ಕಾಂಡದವರೆಗೆ ಮಣ್ಣು ಮುಚ್ಚಬೇಕು. ನಂತರ ಮಣ್ಣಿನ ಮೇಲೆ ಎಲೆಗಳನ್ನು ಮುಚ್ಚಬೇಕು. ನೆರಳಿಗಾಗಿ ಬಾಳೆಗಿಡಗಳನ್ನು ಅಡಿಕೆ ಗಿಡಗಳ ಮಧ್ಯೆ ಅಂತರ ಬೆಳೆಯಾಗಿ ಬೆಳೆಯಬಹುದು.

 ಇದಲ್ಲದೆ ಪ್ರತಿ ಮರವೊಂದಕ್ಕೆ ವರ್ಷಕ್ಕೆ ೧೨ ಕಿ.ಗ್ರಾಂ. ನಂತೆ ಹಟ್ಟಿಗೊಬ್ಬರ ಹಾಗೂ ಹಸಿರೆಲೆ ಗೊಬ್ಬರ ಕೊಡಬೇಕು. ಶಿಫಾರಸು ಮಾಡಲಾದ ರಾಸಾಯನಿಕ ಗೊಬ್ಬರದ ೨/೩ ರಷ್ಟನ್ನು ಹಾಗೂ ಸಂಪೂರ್ಣ ಸಾವಯವ ಗೊಬ್ಬರವನ್ನು ಸಪ್ಫೆಂಬರ್-ಅಕ್ಟೋಬರ್ ತಿಂಗಳಲ್ಲಿಯೂ, ಉಳಿದ ೧/೩ ರಷ್ಟು ರಾಸಾಯನಿಕ ಗೊಬ್ಬರವನ್ನು ಎಪ್ರಿಲ್-ಮೇ ತಿಂಗಳಲ್ಲಿಯೂ ಕೊಡಬೇಕು. ನೀರಾವರಿ ಪ್ರದೇಶಗಳಲ್ಲಿ ಎಪ್ರಿಲ್-ಮೇ ತಿಂಗಳಲ್ಲಿ ಕೊಡುವ ಗೊಬ್ಬರವನ್ನು ಫೆಬ್ರವರಿ ತಿಂಗಳಲ್ಲಿ ಕೊಡಬಹುದು. ಸಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಗಿಡದ ಸುತ್ತಲೂ ೭೫-೧೦೦ ಸೆಂ.ಮೀ. ಸುತ್ತಳತೆಯಲ್ಲಿ ೧೫-೨೦ ಸೆಂ.ಮೀ. ಆಳದವರೆಗೆ ಮಣ್ಣನ್ನು ತೆಗೆದು ಅಲ್ಲಿಗೊಬ್ಬರಗಳನ್ನುಹಾಕಿ ಮಣ್ಣಿನಿಂದ ಮುಚ್ಚಬೇಕು. ನಂತರ ಮೇಲಿನಿಂದ ಸೊಪ್ಪನ್ನು ಮುಚ್ಚಬೇಕು. ಫೆಬ್ರವರಿ ಅಥವಾ ಎಪ್ರಿಲ್-ಮೇ ತಿಂಗಳಲ್ಲಿ ಗಿಡದ ಬುಡವನ್ನು ಸ್ವಚ್ಛಗೊಳಿಸಿ ಗೊಬ್ಬರವನ್ನು ಹರಡಿ ಮಣ್ಣಿನಲ್ಲಿ ಮಿಶ್ರ ಮಾಡಬೇಕು.

 ಸಾವಯವ ವಸ್ತುಗಳ ಪುನರ್ಬಳಕೆ

 ಅಡಿಕೆ ತೋಟಗಳಲ್ಲಿ ಪ್ರತಿ ವರ್ಷ ಸುಮಾರು ೫.೫ ರಿಂದ ೬.೦ಟನ್ನುಗಳಷ್ಟು ತ್ಕಾಜ್ಯವಸ್ತುಗಳು ದೊರೆಯುತ್ತವೆ. ಇವುಗಳ ನೇರ ಬಳಕೆಯಿಂದ ಅಡಿಕೆ ಮರಗಳಿಗೆ ಬೇಕಾಗುವ. ಪೋಷಕಾಂಶಗಳು ಕೂಡಲೇ ದೊರೆಯುವುದಿಲ್ಲ. ಇವನ್ನು ಎರೆಹುಳು ಗೊಬ್ಬರವಾಗಿ ಪರಿವರ್ಶಿಸಿ ಮತ್ತೆ ಅಡಿಕೆ ತೋಟಗಳಲ್ಲಿ ಬಳಸುವುದರಿಂದ ಅಡಿಕೆಗೆ ಉತ್ತಮ ಗುಣಮಟ್ಟದ ಸಾವಯವ ಗೊಬ್ಬರವು ದೊರೆಯುವುದಾಗಿ ಕಂಡುಬಂದಿದೆ. ಗೊಬ್ಬರ ತಯಾರಿಕೆಯನ್ನು ಸಿಮೆಂಟ್ ತೊಟ್ಟಿಗಳಲ್ಲಿ ಅಥವಾ ಹೊಂಡಗಳಲ್ಲಿ ಮಾಡಬಹುದು. ಒಂದು ಹೆಕ್ಟೇರ್ ತೋಟದಿಂದ ಸಿಗುವ ತ್ಕಾಜ್ಯವನ್ನು ಗೊಬ್ಬರ ಮಾಡಲು ೨.೫ ಮೀ. X ೧.೫ ಮೀ. X ೦.೫ ಮೀ. ಅಳತೆಯ ಸಿಮೆಂಟ್ ತೊಟ್ಟಿ ಸಾಕು. ಅಡಿಕೆ ತ್ಕಾಜ್ಯಗಳನ್ನು ೫- ೧೦ ಸೆಂ.ಮೀ. ಅಳತೆಗೆ ತುಂಡು ಮಾಡಿ ತೊಟ್ಟಿಯಲ್ಲಿ ತುಂಬಿಸಬೇಕು. ಎರೆಹುಳುಗಳು ತಾಜಾ ತ್ಕಾಜ್ಯಗಳನ್ನು ತಿನ್ನಲಾರವು. ಅವು ಅರ್ಧ ಕೊಳೆತ ಸ್ತಿತಿಯಲ್ಲಿರಬೇಕು. ತ್ಯಾಜ್ಯಗಳನ್ನು  ಎರೆಹುಳುಗಳು ತಿನ್ನಲು ಅನುಕೂಲವಾಗುವಂತೆ ಅವಕ್ಕೆ ೧೦೦ ಕೆ.ಜಿ. ತ್ಕಾಜ್ಯಕ್ಕೆ ೧೦ ಕೆ.ಜಿ. ಯಷ್ಟು ಸಗಣಿ ನೀರನ್ನು ಮಿಶ್ರ ಮಾಡಬೇಕು. ಈ ಮಿಶ್ರಣವನ್ನು ೨-೩ ವಾರದವರೆಗೆ ನೀರಿನ ಪಸೆ ಆರದಂತೆ ಇಡಬೇಕು. ಅನಂತರ ೧೦೦೦ ಕೆ.ಜಿ. ತ್ಯಾಜ್ಯಕ್ಕೆ ೧ಕೆ.ಜಿ. ಯಂತೆ ಎರೆಹುಳುಗಳನ್ನು ಬಿಡಬೇಕು. ಸುಮಾರು ೬೦ ದಿವಸಗಳ ಒಳಗೆ ಶೇಕಡಾ ೮೮ ರಷ್ಟು ತ್ಯಾಜ್ಯಗಳು ಕಾಳಿನಂತಹ ವಾಸನೆರಹಿತ ಗೊಬ್ಬರವಾಗಿ ಪರಿವರ್ತಿತವಾಗುತ್ತವೆ. ಇದೇ ಸಮಯದಲ್ಲಿ ಎರೆಹುಳುಗಳ ಸಂಖ್ಯೆ ಎರಡು ಪಟ್ಟು ಹೆಚ್ಚಾಗಿರುತ್ತದೆ. ಯೂಡ್ರಿಲಸ್ಯೂಜಿನೇ ಮತ್ತು ಐಸಿನ ಫೊಟಿಡಾಎಂಬ ಎರಡು ಜಾತಿಯ ಎರೆಹುಳುಗಳು ಅಡಿಕೆಯ ತ್ಕಾಜ್ಯಗಳನ್ನು ಗೊಬ್ಬರ ಮಾಡಲು ಉಪಯುಕ್ತ ಎಂದು ಕಂಡುಬಂದಿದೆ.

 ನೀರಿನ ನಿರ್ವಹಣೆ ಮತ್ತು ಬಸಿಗಾಲುವೆಗಳು

 ದಕ್ಷಿಣ ಕನ್ನಡ ಜಿಲ್ಲೆಯ ಹವಾಗುಣಕ್ಕೆ ನವೆಂಬರ್-ಡಿಸೆಂಬರ್ ತಿಂಗಳಲ್ಲಿ ೭ ದಿನಕ್ಕೊಮ್ಮೆ ಜನವರಿ-ಫೆಬ್ರವರಿ ತಿಂಗಳಲ್ಲಿ ೬ ದಿನಗಳಿಗೊಮ್ಮೆ ಹಾಗೂ ಮಾರ್ಚ್-ಮೇ ತಿಂಗಳಲ್ಲಿ ೪ ದಿನಗಳಿಗೊಮ್ಮೆ ನೀರು ಕೊಡಬೇಕು. ಪ್ರತಿ ಬಾರಿಯೂ ಗಿಡವೊಂದಕ್ಕೆ ಸುಮಾರು ೧೭೫ ಲೀ. ನೀರನ್ನು ಕೊಡಬೇಕು. ಹನಿ ನೀರಾವರಿ ಪದ್ದ ತಿಯಲ್ಲಿ ಗಿಡವೊಂದಕ್ಕೆ ಪ್ರತಿದಿನ ೧೬-೨೦ ಲೀ. ನೀರು ಕೊಡಬೇಕು. ಹನಿ ನೀರಾವರಿ ಪದ್ದತಿಯಲ್ಲಿ ಸುಮಾರು ಪ್ರತಿಶತ ೪೪ರಷ್ಟು ನೀರಿನ ಉಳಿತಾಯವಾಗುವುದೆಂದು ಕಂಡುಬಂದಿದೆ. ಪ್ರತಿಯೊಂದು ಮರದ ಬುಡದಲ್ಲಿ ೨-೩ ನಳಿಕೆ/ಹನಿ ಸಾಧನಗಳನ್ನುವಿರುದ್ದ ದಿಕ್ಕುಗಳಲ್ಲಿ ಇಡಬೇಕು.

 ತೋಟದಲ್ಲಿ ಮಳೆಗಾಲದಲ್ಲಿ ನೀರು ನಿಲ್ಲದಂತೆ ಮಾಡಲು ಬಸಿಗಾಲುವೆಗಳ ನಿರ್ಮಾಣ ಅತಿ ಅವಶ್ಯ. ಮಣ್ಣಿನ ಗುಣಧರ್ಮಕ್ಕೆ ತಕ್ಕಂತೆ ಬಸಿಗಾಲುವೆಗಳನ್ನು ನಿರ್ಮಿಸಬೇಕು. ಈ ಕಾಲುವೆಗಳು ೭೫ ರಿಂದ ೧೦೦ ಸೆಂ. ಮೀ. ಆಳದವರೆಗೆ ಇರಬೇಕು. ಮಳೆಗಾಲದ ಪ್ರಾರಂಭದಲ್ಲಿ ಈ ಕಾಲುವೆಗಳನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ನೋಡಿಕೊಳ್ಳಬೇಕು.

ತೋಟದಲ್ಲಿ ವ್ಯವಸಾಯ

 ಮಳೆಗಾಲದ ನಂತರ ಮಣ್ಣು ಬಿಗಿಯಾದಲ್ಲಿ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಮಣ್ಣನ್ನು ಅಗೆದು ಸಡಿಲಗೊಳಿಸಬೇಕು. ಭೂಮಿಯು ಇಳಿಜಾರಾಗಿದ್ದಲ್ಲಿ ಮಣ್ಣಿನ ಕೊರೆತವನ್ನು ತಡೆಯಲು ಇಳಿಜಾರಿಗೆ ಅಡ್ಡವಾಗಿ ತಟ್ಟುಗಳನ್ನು ಮಾಡಬೇಕು. .

 ಹೊದಿಕೆ ಬೆಳೆಗಳು

 ಮೈಮೋಸಾ (Mimosa  invisa), ಸ್ಟೈಲೋಸಾಂಥಿಸ್ (Stylosanthes gracilis), ಕ್ಕಾಲೋಪೋಗೋನಿಯಮ್ (Caulapogonium), ಪ್ಯೂರೇರಿಯಾ (Pueraria javanica) ಇವುಗಳನ್ನು ಅಡಿಕೆ ತೋಟದಲ್ಲಿ ಹೊದಿಕೆ ಬೆಳೆಗಳಾಗಿ ಬೆಳೆಯಬಹುದು. ಒಂದು. ಹೆಕ್ಟೇರಿಗೆ ಬೇಕಾಗುವ ಬೀಜದ ಪ್ರಮಾಣ ಮೈಮೋಸಾ, ಸ್ಟೈಲೋಸಾಂಧಿಸ್, ಕ್ಕಾರೋಪೋಗೋನಿಯಮ್ ಹಾಗೂ ಪ್ಯೂರೇರಿಯಾಗಳಿಗೆ ಕ್ರಮವಾಗಿ ೧೫, ೯, ೧೧ ಮತ್ತು ೧೧ ಕಿ.ಗ್ರಾಂ. ಈ ಬೆಳೆಗಳನ್ನು ಮೇ-ಜೂನ್ ತಿಂಗಳಲ್ಲಿ ಬಿತ್ತನೆ ಮಾಡಿ ಅಕ್ಟೋಬರ್ ತಿಂಗಳಲ್ಲಿ ಕಟಾವು ಮಾಡಿ ಮಣ್ಣಿನಲ್ಲಿ ಕೂಡಿಸಬೇಕು.

 ಅಡಿಕೆಯಲ್ಲಿ ಮಿಶ್ರಬೆಳೆ

 ಅಡಿಕೆ ತೋಟಗಳಲ್ಲಿ ದೊರೆಯುವ ನೈಸರ್ಗಿಕ ಸಂಪತ್ತುಗಳ ಸಮರ್ಪಕ ಬಳಕೆಗಾಗಿ ಕೆಲವೊಂದು ಬೆಳೆಗಳನ್ನು ಅಡಿಕೆಯೊಂದಿಗೆ ಮಿಶ್ರಬೆಳೆಯಾಗಿ ಬೆಳೆಯಬಹುದೆಂದು ಕಂಡುಬಂದಿದೆ. ಇವು ಅಡಿಕೆ ಬೆಳೆಯ ಇಳುವರಿ ಕಡಿಮೆ ಮಾಡದೆ ಅತಿರಿಕ್ತ ಆದಾಯ ನೀಡುತ್ತವೆ. ಕರಾವಳಿ ಕರ್ನಾಟಕ, ಕೇರಳಗಳಲ್ಲಿ ಬಾಳೆ, ಕೋಕೋ, ಕಾಳುಮೆಣಸುಗಳನ್ನು ಮಿಶ್ರಬೆಳೆಯಾಗಿ ಬೆಳೆಯಬಹುದು. ಪಶ್ಚಿಮ ಬಂಗಾಳ ಮತ್ತು ಕರ್ನಾಟಕದ ಮೈದಾನ ಪ್ರದೇಶಗಳಲ್ಲಿ ವೀಳ್ಕದೆಲೆ ಮತ್ತು ಲಿಂಬು ಸೂಕ್ತ ಮಿಶ್ರಬೆಳೆಗಳು ಎಂದು ಕಂಡುಬಂದಿದೆ.

 

ಅಡಿಕೆಯ ಜೊತೆಯಾಗಿ ಬಾಳೆ

ನಾಲ್ಕು ಅಡಿಕೆ ಗಿಡಗಳ ಮಧ್ಯದಲ್ಲಿ ಅಡಿಕೆಯ ಜೊತೆಯಾಗಿ ಬಾಳೆ ಗಿಡಗಳನ್ನು ನೆಡಬಹುದು. ಮುಖ್ಯ ಬೆಳೆಯಲ್ಲದೇ ಎರಡು ಉಪ ಬೆಳೆಗಳನ್ನೂ ಸಹ ಬಾಳೆಯಿಂದ ಪಡೆಯಬಹುದು. ಮೂರು ವರ್ಷಗಳ ನಂತರ ಬಾಳೆಯನ್ನು ಹೊಸದಾಗಿ ನೆಡಬೇಕು. ಅಡಿಕೆ ಗಿಡಕ್ಕೆ ೬-೮ ವರ್ಷ ಆದ ಮೇಲೆ ಕಾಳು ಮೆಣಸಿನ ಬಳ್ಳಿಯನ್ನು ಉತ್ತರ ದಿಕ್ಕಿನಲ್ಲಿ ಗಿಡದಿಂದ ೭೫ ಸೆಂ.ಮೀ. ದೂರದಲ್ಲಿ ನೆಡಬೇಕು. ಅಡಿಕೆ ತೋಟದಲ್ಲಿ ಕೊಕ್ಕೋ ಗಿಡಗಳನ್ನು ನೆಡುವುದರಿಂದ ಹೆಚ್ಚಿನ ಲಾಭ ಪಡೆಯಬಹುದು.

 ಅತಿಸಾಂದ್ರ ಬಹುಬೆಳೆ ಪದ್ಧತಿ

 ಒಂದಕ್ಕಿಂತ ಹೆಚ್ಚು ಮಿಶ್ರಬೆಳೆಗಳನ್ನು ಒಂದೇ ಬಾರಿಗೆ ಅಡಿಕೆ ತೋಟದಲ್ಲಿ ಬೆಳೆಯುವುದಕ್ಕೆ ಅತಿಸಾಂದ್ರ ಬಹುಬೆಳೆ ಪದ್ದತಿ ಎನ್ನುತ್ಮಾರೆ. ಕರಾವಳಿ ಕರ್ನಾಟಕ ಹಾಗೂ ಕೇರಳಗಳಲ್ಲಿ ಬಾಳೆ, ಕಾಳು ಮೆಣಸು ಹಾಗೂ ಕೊಕ್ಕೋ ಬೆಳೆಗಳನ್ನು ಒಟ್ಟಾಗಿ ಅಡಿಕೆ ತೋಟದಲ್ಲಿ ಬೆಳೆಯಬಹುದು. ಮೈದಾನ ಪ್ರದೇಶಗಳಲ್ಲಿ ಬಾಳೆ ಹಾಗೂ ಕಾಳು ಮೆಣಸಿನ ಜೊತೆಯಲ್ಲಿ ಲಿಂಬು ಬೆಳೆಯನ್ನು ಲಾಭದಾಯಕವಾಗಿ ಬೆಳೆಯಬಹುದು. ಪಶ್ಚಿಮ ಬಂಗಾಳದಲ್ಲಿ ಬಾಳೆ, ವೀಳ್ಯದೆಲೆ ಹಾಗೂ ಲಿಂಬು ಬೆಳೆಗಳನ್ನು ಒಟ್ಟಾಗಿ ಅಡಿಕೆ. ತೋಟಗಳಲ್ಲಿ ಬೆಳೆಯಬಹುದು.

 

ಸಸ್ಯ ಸಂರಕ್ಷಣೆ

 ಕೀಟಗಳು

 ಜೇಡ ಜಾತಿಯ ಹುಳು (ಕೆಂಪು ಮತ್ತು ಬಿಳಿ) (ಮೈಟ್ಸ್‌)


ಇವು ಹೆಚ್ಚಾಗಿ ಬೇಸಿಗೆ ಕಾಲದಲ್ಲಿ ಅಡಿಕೆ ಎಲೆಯ ಕೆಳ ಭಾಗದಲ್ಲಿ ಕಂಡುಬರುತ್ತವೆ. ಎಲೆಯ ಮೇಲ್ಬಾಗ ಹಳದಿಯಾಗುತ್ತದೆ. ಹುಳುಗಳು ಜೇಡರ ಬಲೆಯೊಳಗೆ ಕಂಡುಬರುತ್ತವೆ. ಇವುಗಳ ನಿಯಂತ್ರಣಕ್ಕೆ ಕೆಲಥೇನ್ (ಡೈಕೋಫೋಲ್) ೨ ಮಿ.ಲೀ. ಒಂದು ಲೀಟರ್ ನೀರಿನಲ್ಲಿ ಬೆರೆಸಿ ಎಲೆಗಳ ಕೆಳ/ಅಡಿ ಭಾಗಕ್ಕೆ ಸಿಂಪಡಿಸಬೇಕು. ಪುನಃ ಕೀಟಗಳು ಕಂಡುಬಂದರೆ ೧೫-೨೦ ದಿನಗಳ ನಂತರ ಮತ್ತೊಮ್ಮೆಸಿಂಪಡಿಸಬೇಕು.

ಸುಳಿ (ತಿರಿ) ತಿಗಣೆ

 ಇದು ಸುಳಿ (ತಿರಿ) ಗಳ ಒಳ ಭಾಗದಲ್ಲಿ ವಾಸವಾಗಿರುತ್ತದೆ. ಎಳೆಯ ಎಲೆಗಳ ರಸ ಹೀರಿ ಇದು ಬೆಳೆಯುತ್ತದೆ. ತೆರೆದುಕೊಳ್ಳುವ ಎಲೆಯ ಮೇಲೆ ಸಣ್ಣ ಸಣ್ಣ ಚುಕ್ಕೆಗಳು ಕಂಡು ಬರುತ್ತವೆ. ಕೊನೆಯಲ್ಲಿ ಎಲೆಗಳು ಒಣಗಿ ಹೋಗುತ್ತವೆ.

ಈ ಕೀಟಗಳು ಇರುವ ಪ್ರದೇಶಗಳಲ್ಲಿ ಸುಳಿಗೆ ೧೫ ಮಿ.ಲೀ. ಡೈಮಿಥೋಯೇಟ್ ೧೦ ಲೀ. ನೀರಿನಲ್ಲಿ ಬೆರೆಸಿ ಸಿಂಪಡಿಸುವುದರಿಂದ ಅವುಗಳನ್ನು ನಿಯಂತ್ರಿಸಬಹುದು. ಈ ಕೀಟದ ಬಾಧೆ ಅಧಿಕವಾಗಿದ್ದಲ್ಲಿ ಎಪ್ರಿಲ್ ತಿಂಗಳಲ್ಲಿ ೨ ಗ್ರಾಂ ಫೋರೇಟ್ ಹರಳುಗಳನ್ನು ಸಣ್ಣಗೆ ರಂದ್ರ ಮಾಡಿದ ಚಿಕ್ಕಪಾಲಿತಿನ್ ಚೀಲದಲ್ಲಿ ಹಾಕಿ ಅಡಿಕೆ ಮರದ ಸುಳಿಯ ಹತ್ತಿರ ಇಡಬೇಕು. ಇದರಿಂದ ಈ ಕೀಟದ ಬಾಧೆಯನ್ನು ತಡೆಯಬಹುದು. ಈ ಔಷಧದ ಪರಿಣಾಮವು ಎಂಟು ತಿಂಗಳುಗಳ ಕಾಲ ಇರುತ್ತದೆ.

ಬೇರುಹುಳು

ಈ ಹುಳುಗಳು ಬೆಳೆಯುತ್ತಿರುವ ಬೇರುಗಳನ್ನು ತಿನ್ನುತ್ತವೆ. ಗಿಡಗಳು ರೋಗಗ್ರಸ್ಟವಾದಂತೆ ಕಂಡುಬರುತ್ತವೆ. ಎಲ್ಲಾ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಕಾಂಡವು ತೆಳುವಾಗುತ್ತ ಹೋಗುತ್ತದೆ. ಇಳುವರಿ ಕಡಿಮೆಯಾಗುತ್ತದೆ. ಕೀಟದ ನಿಯಂತ್ರಣಕ್ಕೆ ಈ ಕೆಳಗೆ ತಿಳಿಸಿದ ಕ್ರಮಗಳನ್ನು ಅನುಸರಿಸಬೇಕು.

  • ತೋಟದಲ್ಲಿ ಬಸಿಗಾಲುವೆಗಳನ್ನು ನಿರ್ಮಿಸುವುದು
  • ಮೇ ತಿಂಗಳಲ್ಲಿ ಬೇಸಿಗೆ ಮಳೆ ಬಿದ್ದ ೮-೧೦ ದಿನಗಳ ಮೇಲೆ ಸಂಜೆ ೬.೩೦ ರಿಂದ 2.20 ರ ವರೆಗೆ ಹೊರಬರುವ ದುಂಬಿಗಳನ್ನು ಹಿಡಿದು ನಾಶಮಾಡಬೇಕು.
  • ವರ್ಷಕ್ಕೆ ಎರಡು ಬಾರಿ ಅಂದರೆ ಮೇ ಹಾಗೂ ಸಪ್ಟೆಂಬರ್‌-ಅಕ್ಟೋಬರ್‌ ತಿಂಗಳುಗಳಲ್ಲಿ ಸುಮಾರು ೧೫ ಗ್ರಾಂ ನಷ್ಟು ಪೋರೇಟ್‌ನ್ನು (ಥಿಮೇಟ್‌ ೧೦ ಜಿ) ಪ್ರತಿ ಮರದ ಬುಡಕ್ಕೆ ಹಾಕಬೇಕು. ಈ ರೀತಿ ೨ರಿಂದ ೩ ವರ್ಷಗಳವರೆಗೆ ಮಾಡಬೇಕು. ಇದಲ್ಲದೇ ಬೇವಿನ ಹಂಡಿಯಂತಹ ಸಾವಯವ ಗೊಬ್ಬರಗಳನ್ನು ಒಂದು ಮರಕ್ಕೆ ೨  ಕಿ.ಗ್ರಾಂ. ನಂತೆ ಹಾಕಬೇಕು. ಇದರಿಂದ ಬೇರಿನ ಬೆಳವಣಿಗೆ ಉತ್ತಮವಾಗುತ್ತದೆ. 

ಎಳೆ ಕಾಯಿ ಉದುರುವುದು

 ಎಳೆ ಕಾಯಿ ಉದುರಲು ಒಂದು ಕಾರಣ ತಿಗಣೆಯ ಜಾತಿಗೆ ಸೇರಿದ ಒಂದು ಕೀಟ. ಇದು ಅಡಿಕೆಯ ತೊಟ್ಟಿನ ಭಾಗದಲ್ಲಿ ರಸ ಹೀರುತ್ತದೆ. ಕೆಳಕ್ಕೆ ಬಿದ್ದ ಕಾಯಿಗಳ ತೊಟ್ಟಿನ ಭಾಗದಲ್ಲಿ ಸೂಜಿಯಿಂದ ಚುಚ್ಚಿದಂತಹ ಗುರುತು ಇರುತ್ತದೆ. ಇದರ ನಿವಾರಣೆಗೆ ಶೇಕಡಾ ೦.೦೫ ಎಂಡೋಸಲ್ಫಾನ್ (೧೦ ಲೀ. ನೀರಿನಲ್ಲಿ ೧೫ ಮಿ.ಲೀ.) ಔಷಧವನ್ನು ಕೀಟ ತಗುಲಿದ ಮರ ಮತ್ತು ಸುತ್ತಲಿನ ನಾಲ್ಕು ಮರಗಳಿಗೆ ಮಾತ್ರ ಸಿಂಪಡಿಸಬೇಕು.

 ಕಜ್ಜಿ ಕೀಟ

 ಈ ಕೀಟಗಳು ಅಡಿಕೆ ಕಾಯಿ, ಗೊನೆ ಹಾಗೂ ಎಲೆಗಳ ರಸ ಹೀರುತ್ತವೆ. ರಸ ಹೀರುವಿಕೆ ಹೆಚ್ಚಾದಾಗ ಆ ಭಾಗಗಳು ಹಳದಿ ಬಣ್ಣಕ್ಕೆ ತಿರುಗುತ್ತದೆ. ಕಾಯಿಗಳು ಉದುರುತ್ತವೆ. ಈ ಕೀಟದ ಮೇಲೆ ಒಂದು ಕವಚ ಇರುವುದರಿಂದ ಯಾವುದೇ ಔಷಧದ ಪರಿಣಾಮ ಇದರ ಮೇಲೆ ಆಗುವುದಿಲ್ಲ. ಒಂದು ಬಗೆಯ ಗುಲಗಂಜಿ ಹುಳು ಈ ಕೀಟವನ್ನುತಿಂದು ನಾಶಮಾಡುತ್ತದೆ. ಈ ಹುಳುಗಳನ್ನು ತೋಟಗಳಲ್ಲಿ ಬಿಡುವುದರಿಂದ ಕಜ್ಜಿ ಕೀಟದ ಭಾದೆಯನ್ನು ತಡೆಗಟ್ಟಬಹುದು.

 ಸಿಂಗಾರ ಶಿನ್ನುವ ಹುಳು

ಈ ಹುಳುಗಳು ಸಿಂಗಾರವನ್ನೇ ತಿಂದು ನಾಶಮಾಡುತ್ತವೆ. ಇದರ ನಿಯಂತ್ರಣಕ್ಕೆ ಹೊಂಬಾಳೆಯನ್ನು ಒಡೆದು ಸಿಂಗಾರವನ್ನು ಬಿಡಿಸಬೇಕು.

 ರೋಗಗಳು

 ಕೊಳೆರೋಗ ಅಥವಾ ಮಹಾಳಿ

 ಅಡಿಕೆ ಕಾಯಿಯ ತೊಟ್ಟಿನ ಭಾಗದಲ್ಲಿ ಕೊಳೆಯುವುದು ಪ್ರಾರಂಭವಾಗುತ್ತದೆ. ನಿಧಾನವಾಗಿ ಇದು ಇಡಿಯ ಕಾಯಿಯನ್ನು ಆವರಿಸುತ್ತದೆ. ಕಾಯಿಗಳು ದಟ್ಟ ಹಸಿರು ಬಣ್ಣಕ್ಕೆ ತಿರುಗಿ ಬೀಳತೊಡಗುತ್ತದೆ. ಈ ರೋಗದ ನಿಯಂತ್ರಣಕ್ಕೆ ಈ ಕೆಳಗೆ ತಿಳಿಸಿದ ಕ್ರಮಗಳನ್ನು ಅನುಸರಿಸಬೇಕು.

  •  ಸುಮಾರು ೪೦-೪೫ ದಿವಸಗಳ ಅಂತರದಲ್ಲಿ ಕನಿಷ್ಟ ಎರಡು ಬಾರಿ ಶೇಕಡಾ ೧.೦ ರ ಬೋಡೋ ದ್ರಾವಣವನ್ನು ಅಡಿಕೆ ಗೊನೆಗಳ ಮೇಲೆ ಸಿಂಪಡಿಸಬೇಕು. ಮೊದಲನೆಯ ಸಿಂಪರಣೆಯನ್ನು ಮಳೆಗಾಲದ ಪ್ರಾರಂಭದಲ್ಲಿ ಮಾಡಬೇಕು. ಮಳೆಗಾಲ ಮುಂದುವರಿದರೆ ಮೂರನೇ ಬಾರಿ ಸಹ ಈ ಔಷಧಿಯನ್ನು ಸಿಂಪಡಿಸಬೇಕು.
  • ರೋಗ ಶಗುಲಿದ ಕಾಯಿ ಹಾಗೂ ಮರದ ಇತರ ಭಾಗಗಳನ್ನು ನಾಶಪಡಿಸಬೇಕು. ಮಳೆಗಾಲದ ಪ್ರಾರಂಭದಲ್ಲಿ ಪಾಲಿತಿನ್ ಶೀಟ್ 1 ಹಾಳೆಗಳನ್ನು (೬೦ x ೭೫ ಸೆಂ.ಮೀ., ೧೦೦ ಗೇಜ್) ಅಡಿಕೆ ಗೊನೆಗಳಿಗೆ ಕಟ್ಟುವುದರಿಂದ ಸಹ ಈ ರೋಗವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು.

 ಸುಳಿ (ತಿರಿ) ಕೊಳೆಯುವ ಮತ್ತು ಚಂಡೆ ಕೊಳೆಯುವ ರೋಗ

ಸುಳಿ (ತಿರಿ) ಕೊಳೆಯುವ ರೋಗದಲ್ಲಿ ಸುಳಿ (ತಿರಿ) ಹಳದಿ ಬಣ್ಣಕ್ಕೆ ತಿರುಗುತ್ತದೆ. ಅದರ ಬುಡಭಾಗ ಕೊಳೆಯುತ್ತ ಬರುತ್ತದೆ ಹಾಗೂ ಕೆಟ್ಟ ವಾಸನೆ ಬರುತ್ತದೆ. ಕಂಡೆ ಕೊಳೆಯುವ ರೋಗವು ಮಳೆಗಾಲದಲ್ಲಿ ಹೊರಭಾಗದ ಅಡಿಕೆ ಹಾಳೆಯ ಬುಡದಿಂದ ಪ್ರಾರಂಭವಾಗಿ ಸುಳಿ (ತಿರಿ) ಭಾಗಕ್ಕೆ ಹರಡುತ್ತದೆ. ರೋಗ ತೀವ್ರವಾದಲ್ಲಿ ಮರ ಸಾಯುತ್ತದೆ. ಈ ಎರಡೂ ರೋಗಗಳು ಮಳೆಗಾಲದಲ್ಲಿ ಮತ್ತುನಂತರದ ದಿನಗಳಲ್ಲಿ ಫೆಬ್ರವರಿ ತಿಂಗಳವರೆಗೆ ಕಾಣಿಸಿಕೊಳ್ಳುತ್ತದೆ.

ಇದರ ನಿವಾರಣೆಗೆ ರೋಗ ತಗುಲಿದ ಭಾಗವನ್ನು ಸಂಪೂರ್ಣವಾಗಿ ತೆಗೆದು ಆ ಭಾಗಕ್ಕೆ ಬೋರ್ಡೋ ಪೇಸ್ಟ್ನ್ನು ಹಚ್ಚಬೇಕು. ರೋಗ ತಗುಲಿದ ಮರಗಳ ಬಳಿ ಇರುವ ಮರಗಳ ಚಂಡೆಗಳಿಗೆ ಶೇಕಡಾ ೧.೦ ರ ಬೋರ್ಡೊ ದ್ರಾವಣವನ್ನು ಸಿಂಪಡಿಸಬೇಕು.

 ಸಿಂಗಾರ ಒಣಗುವುದು ಹಾಗೂ ಮೊಗ್ಗು ಉದುರುವುದು

 ಸಿಂಗಾರವು ತುದಿಯಿಂದ ಹಳದಿಯಾಗಿ ಒಣಗುತ್ತ ಬರುತ್ತದೆ. ನಂತರ ಹೆಣ್ಣು ಹೂಗಳು ಹಾಗೂ ಚಿಕ್ಕ ಮೊಗ್ಗೆಗಳು ಉದುರುತ್ತವೆ. ಇದಕ್ಕೆ ಶಿಲೀಂದ್ರವೂ ಒಂದು ಕಾರಣ. ಈ ರೋಗದ ನಿವಾರಣೆಗೆ ಬಹುತೇಕ ಸಿಂಗಾರಗಳಲ್ಲಿ ಹೆಣ್ಣು ಹೂ ಅರಳುವ ಸಮಯಕ್ಕೆ Oe. ನೀರಿನಲ್ಲಿ ೩ ಗ್ರಾಂ ಡೈಥೇನ್ ಎಮ್-೪೫ ಅಥವಾ ೪ ಗ್ರಾಂ ಡೈಥೇನ್ ರುಡ್-೭೮ನ್ನು ಕರಗಿಸಿ ಸಿಂಪಡಿಸಬೇಕು. ಅವಶ್ಯಕತೆ ಇದ್ದರೆ ಎರಡನೆಯ ಬಾರಿ ೨೫ ದಿನಗಳ ನಂತರ ಮತ್ತೊಮ್ಮೆ ಇದೇ ಔಷಧವನ್ನು ಸಿಂಪಡಿಸಬೇಕು. ಸಂಪೂರ್ಣ ರೋಗ ತಗುಲಿದ ಸಿಂಗಾರಗಳನ್ನು ನಾಶಪಡಿಸಬೇಕು.

 ಅಣಬೆ ರೋಗ ಅಥವಾ ಬುಡ ಕೊಳೆಯುವುದು

 ಅಡಿಕೆ ಮರದ ಹೊರಭಾಗದ ಎಲೆಗಳು ಹಳದಿಯಾಗುತ್ತದೆ. ನಂತರ ಇದು ಒಳಭಾಗಕ್ಕೂ ಹರಡುತ್ತದೆ. ಕಾಂಡದಿಂದ ಒಂದು ರೀತಿಯ ಕೆಂಪು ರಸ ಸುರಿಯುತ್ತಿರುತ್ತದೆ. ರೋಗದ ಉಲ್ಬಣಾವಸ್ಥೆಯಲ್ಲಿ ಎಲೆಗಳು ಬಾಗಿ ಬಿದ್ದುಹೋಗುತ್ತವೆ. ಸಿರಿ (86) ಯ ಜೊತೆಗೆ ಒಂದು ಅಥವಾ ಎರಡು ಎಲೆಗಳು ಮಾತ್ರ ಉಳಿಯುತ್ತವೆ. ಬೇರುಗಳು ಕೊಳೆತು ಹೋಗುತ್ತವೆ ಹಾಗೂ ಬುಡಭಾಗದ ಆಂತರಿಕ ಭಾಗಗಳೂ ಸಹ ಕೊಳೆತು ಹೋಗುತ್ತವೆ. ತೋಟಗಳ ಉತ್ತಮ ನಿರ್ವಹಣೆಯಿಂದ ಈ ರೋಗ ಬರದಂತೆ ತಡೆಯಬಹುದು. ರೋಗ ಬಂದ ಮರಗಳನ್ನು ಉಳಿದ ಮರಗಳಿಂದ ೩೦ ಸೆಂ.ಮೀ. ಅಗಲ ಹಾಗೂ ೬೦ ಸೆಂ.ಮೀ. ಆಳದ ಕಾಲುವೆಗಳ ಮೂಲಕ ಬೇರ್ಪಡಿಸಬೇಕು. ಮರದ ಬುಡಕ್ಕೆ ಶೇಕಡಾ ೦.೩ ರಷ್ಟು ಕ್ಯಾಲಿಕ್ಸಿನ್ (೧ಲೀ. ನೀರಿನಲ್ಲಿ a ಮಿ.ಲೀ.) ದ್ರಾವಣವನ್ನು ೧೫ರಿಂದ ೨೦ ಲೀ. ನಂತೆ ಮೂರು ತಿಂಗಳಿಗೊಮ್ಮೆ ಹಾಕಬೇಕು. ಇದಲ್ಲದೆ ಶೇಕಡಾ ೧.೫ ರ ಕ್ಯಾಲಿಕ್ಸಿನ್ (೧ ಲೀ. ನೀರಿನಲ್ಲಿ ೧೫ ಮಿ.ಲೀ.) ದ್ರಾವಣವನ್ನು ಬೇರಿನ ಮೂಲಕ ಮರವೊಂದಕ್ಕೆ ಮೂರು ತಿಂಗಳಿಗೊಮ್ಮೆ೧೨೫ ಮಿ.ಲೀ. ನಂತೆ ಜನವರಿ, ಮಾರ್ಚ್, ಜುಲೈ ಹಾಗೂ ಅಕ್ಟೋಬರ್ಗಳಲ್ಲಿ ಕೊಡಬೇಕು. ಪ್ರತಿವರ್ಷ ಒಂದು ಮರಕ್ಕೆ ೨ ಕಿ.ಗ್ರಾಂ. ನಷ್ಟು ಬೇವಿನ ಹಿಂಡಿ ಗೊಬ್ಬರವನ್ನು ಕೊಡಬೇಕು. ಸತ್ತಗಿಡಗಳನ್ನು ಬೇರುಸಹಿತ ಕಿತ್ತು ಸುಟ್ಟು ಹಾಕಬೇಕು.

 ಹಿಡಿಮುಂಡಿಗೆ ಅಥವಾ ಬಂದ್‌ ರೋಗ/ಮೊಂಡು ತಿರಿ

 ಸಣ್ಣದಾದ ತಿರುಚಿದಂತಹ ಎಲೆಗಳು ಕಂಡುಬರುತ್ತವೆ. ಕಾಂಡವು ತೆಳ್ಳಗಾಗುತ್ತ ಹೋಗುತ್ತದೆ. ಗಿಣ್ಣುಗಳ ಅಂತರ ಕಡಿಮೆಯಾಗುತ್ತದೆ. ಸರಿಯಾದ ಬಸಿಗಾಲುವೆಗಳು ಇಲ್ಲದಿರುವುದು ಹಾಗೂ ಕೆಲವೊಂದು (ಮುಖ್ಯವಾಗಿ ಬೋರಾನ್) ಪೋಷಕಾಂಶಗಳ ಕೊರತೆಯಿಂದ ಈ ರೋಗ ಕಂಡುಬರುತ್ತದೆ. ಬೇರಿನ ಬೆಳವಣಿಗೆಗೆ ಸಮರ್ಪಕ ಪರಿಸ್ಥಿತಿಯನ್ನು ಒದಗಿಸಿಕೊಡುವುದರಿಂದ ಹಾಗೂ ಒಂದು ಗಿಡಕ್ಕೆ ಸುಮಾರು ೨೫ ಗ್ರಾಂ ನಷ್ಟು ಬೋರಾಕ್ಸ್ ಮಣ್ಣಿನಲ್ಲಿ ಕೊಡುವುದರಿಂದ ಈ ಕಾಯಿಲೆಯನ್ನುತಡೆಗಟ್ಟಬಹುದು. ಇದಲ್ಲದೆ ಸಮಪ್ರಮಾಣದಲ್ಲಿ ಮೈಲುತುತ್ತ ಮತ್ತು ಸುಣ್ಣ (ಒಟ್ಟೂ ೨೨೫ ಗ್ರಾಂ) ವನ್ನು ಮಣ್ಣಿನಲ್ಲಿ ಮರದ ಬುಡಕ್ಕೆ ಕೊಡುವುದರಿಂದ ಮರಗಳ ಆರೋಗ್ಯವನ್ನು ಸುಧಾರಿಸಬಹುದು.

 ಕಾಯಿ ಒಡೆಯುವುದು

 ಹಣ್ಣಾಗುವ. ಮೊದಲೇ ಕಾಯಿಗಳು ಹಳದಿಯಾಗುತ್ತವೆ ಹಾಗೂ ತುದಿ ಅಥವಾ ಬುಡದ ಭಾಗದಲ್ಲಿ ಒಡೆಯುತ್ತವೆ. ಪೋಷಕಾಂಶಗಳ ಕೊರತೆ ಇದಕ್ಕೆ ಮುಖ್ಯ ಕಾರಣ. ಪೊಟಾಷ್ ಪೋಷಕಾಂಶದ ಬಳಕೆ ಹಾಗೂ ೧ ಲೀ. ನೀರಿನಲ್ಲಿ ೨ ಗ್ರಾಂ ಬೋರಾಕ್ಸ್ನ ಪ್ರಮಾಣದಂತೆ ಗೊನೆಗಳಿಗೆ ಸಿಂಪಡಿಸುವುದರಿಂದ ಈ ರೋಗವನ್ನು ಸಮರ್ಪಕವಾಗಿ ನಿಯಂತ್ರಿಸಬಹುದು.

 ಎಲೆ ಚುಕ್ಕೆ ರೋಗ

 ಸಾಮಾನ್ಯವಾಗಿ ಈ ರೋಗವು ಮಳೆಗಾಲದಲ್ಲಿ ಕಂಡುಬರುತ್ತದೆ. ಹತ್ತು ವರ್ಷದ ಒಳಗಿನ ಗಿಡಗಳಲ್ಲಿ ಈ ರೋಗವು ಹೆಚ್ಚಾಗಿ ಕಂಡುಬರುತ್ತದೆ. ಎಲೆಗಳ ಮೇಲೆ ಕಂದು ಬಣ್ಣದಿಂದ ದಟ್ಟ ಕಂದು ಬಣ್ಣ ಅಥವಾ ಕಪ್ಪು ಬಣ್ಣದ ಚುಕ್ಕೆಗಳು ಕಂಡುಬರುತ್ತವೆ. ರೋಗ ತೀವ್ರವಾದಲ್ಲಿ ಸಸಿಗಳು ಗಿಡ್ಡವಾಗುತ್ತವೆ.

 ರೋಗದ ಪ್ರಾರಂಭದಲ್ಲಿ ರೋಗ ತಗುಲಿದ ಎಲೆಗಳನ್ನು ತೆಗೆದು ನಾಶಪಡಿಸಬೇಕು. ಶೇಕಡಾ ೧ರ ಬೋರ್ಡೋ ಮಿಶ್ರಣ ಅಥವಾ ಶೇಕಡಾ ೦.೩ ರ ಡೈಥೇನ್ ಎಮ್-೪೫ (೧ ಲೀ. ನೀರಿನಲ್ಲಿ ೩ ಗ್ರಾಂ) ದ್ರಾವಣದ ಸಿಂಪರಣೆಯಿಂದ ಈ ರೋಗವನ್ನು ನಿಯಂತ್ರಿಸಬಹುದು.

ಎಲೆ ಹಳದಿ ರೋಗ

 ಈ ರೋಗಕ್ಕೆ ಮೂಲ ಕಾರಣ ಒಂದು ಜಾತಿಯ ಜಿಗಿ ಹುಳದಿಂದ (ಪ್ರೊಟಿಸ್ಟ ಮೊಯಿಸ್ಟ) ಹರಡಲ್ಬಡುವ ಫೈಟೋಪ್ಲಾಸ್ಮಾ ಎನ್ನುವ ಸೂಕ್ಷ್ಮಾಣು. ಹೊರಸುತ್ತಿನ ಎಲೆಯ ತುದಿ ಭಾಗ ಹಳದಿಯಾಗುತ್ತದೆ. ನಂತರ ಇದು ಎಲೆಯ ಮಧ್ಯಭಾಗಕ್ಕೂಹರಡುತ್ತದೆ. ಪ್ರಾರಂಭದಲ್ಲಿ ಈ ಹಳದಿಯಾಗುವಿಕೆ ಅಕ್ಟೋಬರ್ನಿಂದ ಫೆಬ್ರವರಿಯ ವರೆಗೆ ಮಾತ್ರ ಇರುತ್ತದೆ. ರೋಗ ತೀವ್ರವಾದಂತೆ ಎಲ್ಲಾಎಲೆಗಳು ಹಳದಿಯಾಗಿ, ಒಣಗಿ ಕೆಳಗೆ ಬೀಳುತ್ತವೆ. ಅಡಿಕೆಯ ಒಳಭಾಗ ಮೃದುವಾಗಿ ಕಪ್ಪಗಾಗುತ್ತದೆ. ಪ್ರಚಲಿತದಲ್ಲಿರುವ ಯಾವುದೇ ಔಷಧಗಳಿಂದ ಈ ರೋಗದ ನಿವಾರಣೆ ಸಾಧ್ಯವಿಲ್ಲ.

 ಈ ರೋಗದ ಸಮರ್ಪಕ ನಿರ್ವಹಣೆಗೆ ಕೆಳಗೆ ತಿಳಿಸಿದ ಕ್ರಮಗಳನ್ನು ಅನುಸರಿಸಬೇಕು.

  •  ಅಡಿಕೆಗೆ ಶಿಫಾರಸು ಮಾಡಲಾದ ರಸಗೊಬ್ಬರಗಳನ್ನು ತಪ್ಪದೇ ಕೊಡಬೇಕು. ಪ್ರತಿ ಮರಕ್ಕೂ ಒಂದು ಕಿ.ಗ್ರಾಂ. ನಷ್ಟು ಸೂಪರ್ ಫಾಸ್ಬೇಟ್ನ್ನು ಕೊಡಬೇಕು. ಇದರ ಜೊತೆ ಧಾರಾಳವಾಗಿ ಸಾವಯವ ಗೊಬ್ಬರಗಳ್ನು ಕೊಡುತ್ತಿರಬೇಕು. ಬೇಸಿಗೆಯಲ್ಲಿ ನೀರು ಉಣಿಸುವುದಲ್ಲದೇ, ಮಳೆಗಾಲದಲ್ಲಿ ತೋಟದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು.
  • ರೋಗವು ಪ್ರಾರಂಭದ ಹಂತದಲ್ಲಿದ್ದರೆ ರೋಗ ಹರಡುವುದನ್ನು ತಡೆಯಲು ರೋಗ ಕಾಣಿಸಿಕೊಂಡ ಮರಗಳನ್ನು ತೆಗೆದು ನಾಶಮಾಡಬೇಕು.

 ಅಡಿಕೆಯ ಕೊಯ್ದು ಮತ್ತು ಸಂಸ್ಕರಣೆ

 ಉತ್ತಮ ಗುಣಮಟ್ಟದ ಅಡಿಕೆಯನ್ನು ಪಡೆಯಲು ಸರಿಯಾದ ಕಾಲಕ್ಕೆ ಅವುಗಳನ್ನು ಕೊಯ್ಯುವುದು oss, ಚಾಲಿಯ ತಯಾರಿಕೆಗೆ ಸಂಪೂರ್ಣ ಹಣ್ಣಾದ ಅಡಿಕೆಯನ್ನು ಮಾತ್ರ ಕೊಯ್ಯಬೇಕು. ಅಡಿಕೆಯನ್ನು ಕೊಯ್ದ ನಂತರ ಸುಮಾರು ೪೫ ದಿವಸಗಳವರೆಗೆ ಸೂರ್ಯನ ಬಿಸಿಲಿನಲ್ಲಿ ಒಣಗಿಸಬೇಕು. ಹಣ್ಣುಗಳು ಸರಿಯಾಗಿ ಒಣಗಲು ಅವನ್ನು ಒಂದೇ ಪದರದಲ್ಲಿ ಒಣಗಿಸಬೇಕು. ವಾರಕ್ಕೊಮ್ಮೆ ಅವುಗಳನ್ನು ತಿರುವಿ ಹಾಕುತ್ತಿರಬೇಕು.

 ಎಳೆ ಅಡಿಕೆಯ ಸಂಸ್ಕರಣೆ

 ಎಳೆ ಅಡಿಕೆಯ ಸಂಸ್ಕರಣೆಗೆ ಸುಮಾರು ೬ ತಿಂಗಳು ಬೆಳೆದ ಅಡಿಕೆಯನ್ನು ಕೊಯ್ಯಬೇಕು. ಅಡಿಕೆಯನ್ನು ಕೊಯ್ದ ನಂತರ ಸಿಪ್ಸೆ ಸುಲಿಯಬೇಕು. ಅನಂತರ ಅಡಿಕೆಯನ್ನು ಎರಡು ಅಥವಾ ಹೆಚ್ಚು ಭಾಗಮಾಡಿ ನೀರಿನಲ್ಲಿ ಅಥವಾ ಚೊಗರಿನಲ್ಲಿ ಬೇಯಿಸಬೇಕು. ಅನಂತರ ಇದನ್ನು ಬಿಸಿಲಿನಲ್ಲಿ ಅಥವಾ ಬೆಂಕಿಯ ಮೇಲೆ ಒಣಗಿಸಬೇಕು. ಉತ್ತಮ ಬಣ್ಣ ಬರಲು ಅಡಿಕೆಯನ್ನು ಸ್ವಲ್ಪ ಪ್ರಮಾಣದ ಚೊಗರಿನೊಂದಿಗೆ ಮಿಶ್ರ ಮಾಡಬಹುದು.

No comments:

Post a Comment