ಬೇಕಾಗುವ ಸಾಮಗ್ರಿಗಳು
- 5 ಕಿ.ಗ್ರಾಂ ಬೇವಿನ ಎಲೆ
- 2 ಕಿ.ಗ್ರಾಂ ಹಾಗಲ ಎಲೆ
- 2 ಕಿ.ಗ್ರಾಂ ಲಕ್ಕಿ ಎಲೆ
- 2 ಕಿ.ಗ್ರಾಂ ಔಡಲ ಎಲೆ
- 2 ಕಿ.ಗ್ರಾಂ ಪೇರಲ ಎಲೆ
- 2 ಕಿ.ಗ್ರಾಂ ಪಾರ್ಥೇನಿಯಂ ಎಲೆ
- 2 ಕಿ.ಗ್ರಾಂ ಹೊಂಗೆ ಎಲೆ
- 2 ಕಿ.ಗ್ರಾಂ ಸೀತಾಫಲ ಎಲೆ
- 2 ಕಿ. ಗ್ರಾಂ ಲಂಟಾನ (ಚದರಂಗಿ) ಎಲೆ
- 2 ಕಿ.ಗ್ರಾಂ ದತ್ತೂರಿ (ಮದರಂಗಿ) ಎಲೆ
- 2 ಕಿ.ಗ್ರಾಂ ದಾಳಿಂಬೆ ಎಲೆ
- 11 ಎಲೆಗಳ ಪೈಕಿ ಲಭ್ಯವಾಗುವ 5 ಬಗೆಯ ಎಲೆಗಳನ್ನು ರುಬ್ಬಿ ಚಟ್ನ ಮಾಡಿ 40 ರಿಂದ 50 ಕಿ.ಗ್ರಾಂ ಪದಾರ್ಥ ಕುದಿಯುವಂತಹ ದೊಡ್ಡ ಮಣ್ಣಿನ ಹರಿವೆಯಲ್ಲಿ ಅಥವಾ ತಾಮ್ರ ಹೊರತುಪಡಿಸಿ ಮುಚ್ಚಳ ಇರುವ ಯಾವದೇ ಲೋಹದ ಪಾತ್ರೆಯಲ್ಲಿ 20 ಲೀ. ದೇಶಿ ಆಕಳ ಗಂಜಲ ಹಾಕಿ 5 ಎಲೆಗಳ ಚಟ್ಟಿಯನ್ನು ಬೆರೆಸಿ ಚೆನ್ನಾಗಿ 4 ಉಕ್ಕುಗಳು ಬರುವ ತನಕ ಕುದಿಸಬೇಕು. ಹೀಗೆ ಕುದಿಸುವುದರಿಂದ 15 ಲೀ. ದ್ರಾವಣ ಮಾತ್ರ ಉಳಿಯುತ್ತದೆ.
- ನಂತರ ಹರವಿಯನ್ನು ಒಲೆಯಿಂದ ಕೆಳಗೆ ಇಳಿಸಬೇಕು.
- 2 ರಿಂದ 4 ದಿನಗಳ ಕಾಲ ತಂಪಾಗಲು ಬಿಟ್ಟು ಪ್ರತಿ ದಿನ 3 ಬಾರಿ ಕಟ್ಟಿಗೆಯಿಂದ ಪ್ರದಕ್ಷಿಣಾಕಾರವಾಗಿ ಚೆನ್ನಾಗಿ ತಿರುಗಿಸಬೇಕು.
- ನಂತರ ಈ ಮಿಶ್ರಣವನ್ನು ಬಟ್ಟೆಯಿಂದ ಸೋಸಿ ಇನ್ನೊಂದು ಪಾತ್ರೆಯಲ್ಲಿ ಹಾಕಿ 3 ತಿಂಗಳುಗಳ ಕಾಲ ಸಂಗ್ರಹಿಸಿಡಬಹುದು.
- ಬೆಳೆಯ ಎಲೆಗಳ ಕೆಳೆಗೆ ಹುಳುಗಳ / ತತ್ತಿ ಕಂಡಾಗ 200 ಲೀ. ನೀರು + 6 ಲೀ. ಬ್ರಹ್ಮಾಸ್ತ್ರ ಬೆರೆಸಿ ಸಿಂಪಡಿಸಬೇಕು.
No comments:
Post a Comment