ಬೇಕಾದ ಸಾಮಗ್ರಿಗಳು:-
- ನೀರಿನ ಡ್ರಾಂ - 250 ಲೀಟರ್ ಸಾಮರ್ಥ್ಯ-1
- ನೀರಿನ ಡ್ರಾಂ - 30 ಲೀಟರ್ ಸಾಮರ್ಥ್ಯ-1
- ನೀರಿನ ಪಾತ್ರೆ - 2 ಲೀಟರ್ ಸಾಮರ್ಥ್ಯ 2
- ಗೋಣಿಚೀಲ 1
ಬೇಕಾದ ಪದಾರ್ಥಗಳು:-
- ಹಳ್ಳಿಕಾರ್ ತಾಜಾ ಸಗಣಿ 10ಕೆಜಿ
- ಹಳ್ಳಿಕಾರ್ ಗೋಮೂತ್ರ -6 ಲೀಟರ್
- ವಿಷಮುಕ್ತ ಬೆಲ್ಲ - 1 ಕೆಜಿ
- ದ್ವಿದಳಧಾನ್ಯದ ಹಿಟ್ಟು -1 ಕೆಜಿ
- ಜಮೀನಿನ ಮಣ್ಣು- ಒಂದು ಮುಷ್ಟಿ
ಹಾಲು ಕರೆಯುವ ಗೋವುಗಳಿಗಿಂತ ಬಂಜೆಯಾದ ತಾಯಿಯಾಗದ ಅಥವಾ ಮುದಿಯಾದ ಹಳ್ಳಿಕಾರ್ ಅಥವಾ ದೇಸೀ ಗೋವುಗಳು ತಮ್ಮ ಸಂಪೂರ್ಣ ಶಕ್ತಿಯನ್ನು ಬಳಕೆ ಮಾಡಿ ಹಾಲು ಕರೆಯುವ ಗೋವುಗಳಿಗಿಂತಾ ಉತ್ಕೃಷ್ಟ ಗುಣಮಟ್ಟದ ಸಗಣಿ ಮತ್ತು ಗೋಮೂತ್ರವನ್ನು ನೀಡಬಲ್ಲುದು. ಆದ್ದರಿಂದ ಬಂಜೆಯಾದ ಅಥವಾ ಮುದಿಯಾದ ಗೋವುಗಳನ್ನು ಕಸಾಯಿಗೆ ಅಟ್ಟುವ ಬದಲಿಗೆ ರೈತರು ತಾವೇ ಸಲಹಿ ಉತ್ಕೃಷ್ಟ ಗುಣಮಟ್ಟದ ಸಗಣಿ ಮತ್ತು ಗೋಮೂತ್ರ ಪಡೆಯುವುದು ಜಾಣತನ, ಸಾಯುವ 4 ದಿನ ಮುಂಚಿತವಾಗಿ ಮಾತ್ರ ದೇಸೀ ಗೋವುಗಳು ನೆಲ ಹಿಡಿಯುತ್ತವೆ. ತಿಂಗಳಾನುಗಟ್ಟಲೆ ಮಲಗುವದಿಲ್ಲ, ಹಾಗಾಗಿ ದೇಸೀ ಗೋವುಗಳನ್ನು ಸಾಯುವವರೆಗೆ ಸಾಕುವುದು ಒಳ್ಳೆಯದು.
-: ಒಂದನೇ ಬಾರಿ ಮೊದಲ ತಯಾರಿಕೆಯ ವಿಧಾನ :-
ಘಟ್ಟ 1:
- ಜೀವಾಮೃತ ತಯಾರಿಕೆಯ 8 ಗಂಟೆ ಮುಂಚಿತವಾಗಿ 30 ಲೀಟರ್ ಸಾಮರ್ಥ್ಯದ ಡ್ರಮ್ ನಲ್ಲಿ 10 ಲೀಟರ್ ನೀರು ಹಾಕಿ 10 ಕೆಜಿ ಹಳ್ಳಿಕಾರ್ ತಾಜಾ ಸಗಣಿ ಹಾಗೂ 6 ಲೀಟರ್ ಗೋಮೂತ್ರ ವನ್ನು ನೆನೆಹಾಕಿ.
- ಜೀವಾಮೃತ ತಯಾರಿಕೆಯ 8 ಗಂಟೆ ಮುಂಚಿತವಾಗಿ 2 ಲೀಟರ್ ಸಾಮರ್ಥ್ಯದ ಪಾತ್ರೆ ಅಥವಾ ಜಗ್ ನಲ್ಲಿ ಒಂದೂವರೆ ಲೀಟರ್ ನೀರಿಗೆ ಒಂದು ಕೆಜಿ ವಿಷಮುಕ್ತ ಬೆಲ್ಲವನ್ನು ನೆನೆಹಾಕಿ.
- ಜೀವಾಮೃತ ತಯಾರಿಕೆಯ 2 ಗಂಟೆ ಮುಂಚಿತವಾಗಿ ದ್ವಿದಳಧಾನ್ಯದ ಪುಡಿಯನ್ನು ಒಂದೂವರೇ ಲೀಟರ್ ನೀರಿನಲ್ಲಿ ನೆನೆಹಾಕಿ.
ಘಟ್ಟ 2:
- 250 ಲೀಟರ್ ನೀರು ಹಿಡಿಯುವ ಬ್ಯಾರಲ್ ನಲ್ಲಿ 200 ಲೀಟರ್ ನೀರನ್ನು ಸುರಿಯಿರಿ.
- 30 ಲೀಟರ್ ಬ್ಯಾರಲ್ ಒಳಗೆ 8 ಗಂಟೆಗಳ ಮುಂಚಿತವಾಗಿ ನೆನೆಹಾಕಿದ ತಾಜಾ ಸಗಣಿ ಮತ್ತು ಗೋಮೂತ್ರವನ್ನು ಚೆನ್ನಾಗಿ ಬೆರೆಸಿ, ಅದರ ಬಗ್ಗಡವನ್ನು 250 ಲೀಟರ್ ಸಾಮರ್ಥ್ಯದ ನೀರು ಶೇಖರಿಸಿದ ಬ್ಯಾರಲ್ ಗೆ ಸುರಿದು ಚೆನ್ನಾಗಿ ಬೆರೆಸಿರಿ.
- ನೆನೆಸಿದ ದ್ರವರೂಪದ ವಿಷಮುಕ್ತ ಬೆಲ್ಲದ ನೀರನ್ನು ದೊಡ್ಡ ಬ್ಯಾರಲ್ ಗೆ ಬೆರೆಸಿರಿ.
- ನೆನೆಸಿದ ದ್ವಿದಳಧಾನ್ಯದ ಪುಡಿಯನ್ನು ನೀರಿನಲ್ಲಿ ಚೆನ್ನಾಗಿ ಕಲಸಿ ದೊಡ್ಡ ಬ್ಯಾರಲ್ ಗೆ ಸುರಿದು ಬೆರೆಸಿರಿ.
- ದೊಡ್ಡ ಬ್ಯಾರಲ್ ನಲ್ಲಿ ಮೂಲ ಪದಾರ್ಥಗಳನ್ನು ಬೆರೆಸಿದ ಮೇಲೆ ದೊಣ್ಣೆಯಿಂದ ಎಡ ಭಾಗದಿಂದ ಬಲಭಾಗಕ್ಕೆ ವೃತ್ತಾಕಾರವಾಗಿ ಚೆನ್ನಾಗಿ ತಿರುಗಿಸಿ ಎಲ್ಲವೂ ಸಂಪೂರ್ಣವಾಗಿ ಬೆರೆಯುವಂತೆ ಮಾಡಿರಿ.
- ಮೇಲಿನ ಮಿಶ್ರಣವನ್ನು ದಿನಕ್ಕೆ ಬೆಳಿಗ್ಗೆ ಓಮ್ಮೆ ಸಂಜೆ ಒಮ್ಮೆ ಎರಡು ಹೊತ್ತು ದೊಣ್ಣೆಯಿಂದ ಬಲಮುಖವಾಗಿ ಹತ್ತಾರು ಬಾರಿ ಚೆನ್ನಾಗಿ ತಿರುಗಿಸಿ
ಘಟ್ಟ 3:
ಬೆರೆಸಿದ ದ್ರಾವಣವು ಜೀವಾಮೃತವಾಗುವ ವಿಧಾನ ಹಾಗೂ ಉಪಯೋಗಿಸಬಹುದಾದ ಅವಧಿ |
||
ಪ್ರಕ್ರಿಯೆ |
ಬೇಸಿಗೆಕಾಲ |
ಚಳಿಗಾಲ |
ಹುದುಗುವಿಕೆ |
2 ದಿನ ಗಳು |
4 ದಿನಗಳು |
ಉಪಯೋಗಿಸಬಹುದಾದ ಗರಿಷ್ಠ ಅವಧಿ |
15 ದಿನಗಳು |
15 ದಿನಗಳು |
ಒಟ್ಟು ದಿನಗಳು |
17 ದಿನಗಳು |
19 ದಿನಗಳು |
ಜೀವಾಮೃತದಲ್ಲಿ ಗರಿಷ್ಠ ಸಂಖ್ಯೆಯ ಜೀವಾಣುಗಳು ದೊರೆಯಬಹುದಾದ ದಿನಗಳು |
||
ಹುದುಗುವಿಕೆ |
2 ದಿನಗಳು |
4 ದಿನಗಳು |
ಉಪಯೋಗಿಸಬಹುದಾದ ದಿನಗಳು |
7ನೇ ದಿನದಿಂದ 12ನೇ ದಿನ |
7ನೇ ದಿನದಿಂದ 12ನೇ ದಿನ |
9ನೇ ದಿನದಿಂದ 14ನೇ ದಿನ |
11ನೇ ದಿನದಿಂದ 16ನೇ ದಿನ |
No comments:
Post a Comment