ಮಣ್ಣು ಮತ್ತು ಹವಾಗುಣ
ನೀರು ಚೆನ್ನಾಗಿ ಬಸಿದು ಹೋಗುವಂತಹ ಮಣ್ಣುಗಳಾದ ಮರಳು ಮಿಶ್ರಿತಗೋಡು, ಜೇಡಿಗೋಡು, ಕೆಂಪು ಗೋಡು ಅಥವಾ ಜೆಂಬಿಟ್ಟಿಗೆ ಗೋಡು ಮಣ್ಣುಗಳಲ್ಲಿ ಶುಂಠಿಯು ಹುಲುಸಾಗಿ ಬೆಳೆಯುತ್ತದೆ. ಸಾವಯವ ಪದಾರ್ಥ ಅಧಿಕವಾಗಿರುವ ಹುಡಿಹುಡಿಯಾಗಿರುವ ಗೋಡು ಮಣ್ಣು ಸೂಕ್ತ. ಈ ಬೆಳೆಯು ಬಹಳ ಪೋಷಕಾಂಶಗಳನ್ನು ತೆಗೆದುಕೊಳ್ಳುವ ಬೆಳೆಯಾಗಿರುವುದರಿಂದ ಪ್ರತಿ ವರ್ಷವೂ ಸತತವಾಗಿ ಶುಂಠಿ ಬೆಳೆಯನ್ನೇ ಬೆಳೆಯುವುದು ಸೂಕ್ತವಲ್ಲ.
ಶುಂಠಿಯು ಬೆಚ್ಚಗಿನ ಮತ್ತು ಆರ್ದ ಹವಾಗುಣದಲ್ಲಿ ಸಮುದ್ರ ಮಟ್ಟದಿಂದ 1500 ಮೀ. ಎತ್ತರದವರೆಗಿನ ಪ್ರದೇಶಗಳಲ್ಲಿ ಬೆಳೆಯಬಹುದು. ಶುಂಠಿಯನ್ನು ನೀರಾವರಿ ಮತ್ತು ಮಳೆಯಾಶ್ರಯಗಳೆರಡರಲ್ಲಿಯೂ ಬೆಳೆಯಲಾಗುತ್ತದೆ. ಈ ಬೆಳೆಯನ್ನು ಯಶಸ್ವಿಯಾಗಿ ಸಾಗುವಳಿ ಮಾಡಲು. ಬಿತ್ತನೆ ಸಮಯದಿಂದ ಗಡ್ಡೆಗಳು ಮೊಳಕೆ ಬರುವವರೆಗೆ ಸಾಧಾರಣ ಮಳೆಯೂ, ಬೆಳವಣಿಗೆಯ ಅವಧಿಯಲ್ಲಿ ಚೆನ್ನಾಗಿ ಹಂಚಿಕೆಯಾಗಿ ಬೀಳುವ ಅಧಿಕ ಮಳೆಯು ಹಾಗೂ ಕೊಯಿಲು ಮಾಡುವುದಕ್ಕಿಂತ ಮುಂಚೆ ಒಂದು ತಿಂಗಳವರೆಗೆ ಒಣ ಹವೆಯೂ ಅವಶ್ಯಕವಾಗಿ ಬೇಕಾಗುತ್ತದೆ.
ತಳಿಗಳು
ಬೇರೆ ಬೇರೆ ಪ್ರದೇಶಗಳಲ್ಲಿ ಹಲವಾರು ಸ್ಥಳೀಯ ಶುಂಠಿ ತಳಿಗಳನ್ನು ಬೆಳೆಯಲಾಗುತ್ತಿದ್ದು, ಅವುಗಳನ್ನು ಬೆಳೆಯಲಾಗುತ್ತಿರುವ ಸ್ಥಳಗಳ ಹೆಸರುಗಳಿಂದಲೇ ಕರೆಯಲಾಗುತ್ತದೆ. ಮಾರನ್, ಕುರುಪ್ಪಂಪಾಡಿ, ಎರ್ನಾಡ್, ವೈನಾಡ್, ಹಿಮಾಚಲ ಮತ್ತು ನಾಡಿಯಾ ಇವುಗಳು ಪ್ರಮುಖವಾದ ದೇಶೀಯ ತಳಿಗಳು, ರಿಯೊ-ಡಿ-ಜನೈರೋದಂತಹ ವಿದೇಶೀ ತಳಿಗಳೂ ಸಹ ಬೆಳೆಗಾರರಲ್ಲಿ ಜನಪ್ರಿಯವಾಗಿವೆ. ಶುಂಠಿ ಬೆಳೆಯ ಸುಧಾರಿತ ತಳಿಗಳನ್ನೂ ಹಾಗೂ ಅವುಗಳ ವಿಶಿಷ್ಟ ಗುಣಲಕ್ಷಣಗಳನ್ನು ಕೋಷ್ಟಕ 1 ಮತ್ತು ಕೋಷ್ಟಕ 2 ರಲ್ಲಿ ಕೊಡಲಾಗಿದೆ
ಕೋಷ್ಟಕ 1. ಶುಂಠಿಯ ಸುಧಾರಿತ ತಳಿಗಳು
ಕ್ರ.ಸ |
ತಳಿ |
ಹಸಿ ಶುಂಠಿ |
ಕೊಯಿಲಿಗೆ ಬರುವುದು (ದಿನಗಳು) |
ಒಣಗಿದ ಶುಂಠಿ (ಶೇ) |
ಕಚ್ಚಾ ನಾರು (ಶೇ) |
ಓಲಿಯೋರೆಸೊನ್ (ಶೇ) |
ಸುಗಂಧ ತೈಲ (ಶೇ) |
1 |
ಐಐಎಸ್ ಆರ್-ವರದಾ |
22.6 |
200 |
20.7 |
4.5 |
6.7 |
1.8 |
2 |
ಸುಪ್ರಭಾ |
16.6 |
229 |
20.5 |
4.4 |
8.9 |
1.9 |
3 |
ಸುರುಚಿ |
11.6 |
218 |
23.5 |
3.8 |
10 |
2 |
4 |
ಸುರವಿ |
17.5 |
225 |
23.5 |
4 |
10.2 |
2.1 |
5 |
ಹಿಮಗಿರಿ |
13.5 |
230 |
20.8 |
6.4 |
4.3 |
1.6 |
6 |
ಐಐಎಸ್ ಆರ್-ಮಹಿಮಾ |
23.2 |
200 |
23.0 |
3.26 |
4.48 |
1.72 |
7 |
ಐಐಎಸ್ ಆರ್-ರೇಜತಾ |
22.4 |
200 |
19.0 |
4 |
6.3 |
2.36 |
ಕೋಷ್ಟಕ 2. ಶುಂಠಿಯ ಸ್ಥಳೀಯ ತಳಿಗಳು
ಕ್ರ.ಸ |
ತಳಿ |
ಹಸಿ ಶುಂಠಿ |
ಕೊಯಿಲಿಗೆ ಬರುವುದು (ದಿನಗಳು) |
ಒಣಗಿದ ಶುಂಠಿ (ಶೇ) |
ಕಚ್ಚಾ ನಾರು (ಶೇ) |
ಓಲಿಯೋರೆಸೊನ್ (ಶೇ) |
ಸುಗಂಧ ತೈಲ (ಶೇ) |
1 |
ಚೀನಾ |
9.5 |
200 |
21.0 |
3.4 |
7 |
1.9 |
2 |
ಅಸ್ಸಾಂ |
11.78 |
210 |
18.0 |
5.8 |
7.9 |
2.2 |
3 |
ಮಾರನ್ |
25.21 |
200 |
20.0 |
6.1 |
10 |
1.9 |
4 |
ಹಿಮಾಚಲ್ |
7.27 |
200 |
22.1 |
3.8 |
5.3 |
0.5 |
5 |
ನಾಡಿಯ |
28.55 |
200 |
22.6 |
3.9 |
5.4 |
1.4 |
6 |
ರಿಯೋಡಿ ಜನೈರೊ |
17.65 |
190 |
20.0 |
5.6 |
10.5 |
2.3 |
ಬಿತ್ತನೆ ಸಮಯ (ಹಂಗಾಮ)
ಭಾರತದ ಪಶ್ಚಿಮ ತೀರ ಪ್ರದೇಶದಲ್ಲಿ ಮಳೆಗಾಲ ಆರಂಭವಾದಾಗ ಮೇ ತಿಂಗಳ ಆರಂಭದ 15 ದಿನಗಳವರೆಗೆ ಬಿತ್ತನೆ ಗೆಡ್ಡೆಗಳನ್ನು ಬಿತ್ತನೆ ಮಾಡಲು ಅತ್ಯಂತ ಸೂಕ್ತ ಸಮಯ. ನೀರಾವರಿಯಾಶ್ರಯದಲ್ಲಿ, ಫೆಬ್ರವರಿ ಮಧ್ಯದಲ್ಲಿ ಅಥವಾ ಮಾರ್ಚ ಆರಂಭದಲ್ಲಿ ನಾಟಿ ಮಾಡಬಹುದು. ಬಿತ್ತನೆಗೆ ಮುಂಚೆ ಮಡಿಗಳ ಮೇಲಿರುವ ಮಣ್ಣನ್ನು ತರಗೆಲೆ ಹರಡಿ ಸುಡುವುದರಿಂದ ಹಾಗೂ ಬೇಸಿಗೆ ಮಳೆ ಬಂದಾಗ ಬಿತ್ತನೆ ಮಾಡುವುದರಿಂದ ಅಧಿಕ ಇಳುವರಿ ಪಡೆಯುವುದರ ಜೊತೆಗೆ ರೋಗಗಳ ಬಾಧೆ ಕಡಿಮೆ ಮಾಡಬಹುದು.
ಜಮೀನು ತಯಾರಿಸುವುದು
ಬೇಸಿಗೆ ಕಾಲದ ಮಳೆ ಬಂದಾಗ ನಾಲ್ಕರಿಂದ ಐದು ಬಾರಿ ಉಳುಮೆ ಮಾಡುವುದರ ಅಥವಾ ಅಗತ ಮಾಡುವುದರ ಮೂಲಕ ಮಣ್ಣನ್ನು ಪುಡಿ ಪುಡಿ ಮಾಡಿ, ಹದ ಮಾಡಬೇಕು. ಒಂದು ಮೀಟರ್ ಆಗಲದ, 15 ಸೆಂ.ಮೀ. ಎತ್ತರದ ಮತ್ತು ಅನುಕೂಲಕ್ಕೆ ತಕ್ಕಂತೆ ಉದ್ದವಿರುವ ಸಸಿಮಡಿಗಳನ್ನು (ಸಸಿ ಮಡಿಗಳ ಮಧ್ಯ 50 ಸೆಂ. ಮೀ. ಅಂತರವಿರುವಂತೆ) ತಯಾರು ಮಾಡಬೇಕು. ನೀರಾವರಿ ಆಶ್ರಯದ ಬೆಳೆಯಾದಲ್ಲಿ 40 ಸೆಂ.ಮೀ. ಅಂತರದಲ್ಲಿ ಏರುಗಳನ್ನು ಮಾಡಬೇಕು. ಗಡ್ಡೆ ಕೊಳೆ ರೋಗ ಮತ್ತು ದಂಡಾಣುಗಳ ಬಾಧೆ ಹೆಚ್ಚಾಗಿರುವ ಪ್ರದೇಶಗಳಲ್ಲಿ ಪಾರದರ್ಶಕ ಪಾಲಿಥೀನ್ ಹಾಳೆಗಳನ್ನು ಸಸಿಮಡಿಗಳ ಮೇಲೆ 40 ದಿನಗಳವರೆಗೆ ಹರಡುವುದರ ಮೂಲಕ ಮಣ್ಣು ಬಿಸಿಯಾಗುವಂತೆ (ಸೋಲರೈಜೇಷನ್) ಮಾಡಬೇಕು.
ಹೊದಿಕೆ ಹಾಕುವುದು
ಹೆಚ್ಚಿಗೆ ಮಳೆ ಬಂದಾಗ ಮಡಿಗಳ ಮೇಲಿರುವ ಮಣ್ಣು ಚದುರುವುದು ಮತ್ತು ಕೊಚ್ಚಿ ಹೋಗುವುದನ್ನು ತಡೆಗಟ್ಟಲು ಮಡಿಗಳ ಮಣ್ಣಿನ ಮೇಲೆ ಹಸಿರು ಎಲೆ/ಸಾವಯವ ತ್ಯಾಜ್ಯ ವಸ್ತುಗಳನ್ನು ಹರಡಿ. ಹೊದಿಕೆ ಹಾಕಬೇಕು. ಇದರಿಂದ ಮಣ್ಣಿಗೆ ಸಾವಯವ ಪದಾರ್ಥ ಸೇರಿಸಲ್ಪಡುತ್ತದೆ. ಕಳೆಗಳನ್ನು ನಿಯಂತ್ರಿಸುತ್ತದೆ ಮತ್ತು ಶುಂಠಿ ಬೆಳೆಯ ಬೆಳವಣಿಗೆಯ ಅವಧಿಯಲ್ಲಿ ತೇವಾಂಶ ಸಂರಕ್ಷಿಸಲ್ಪಡುತ್ತದೆ. ಮೊದಲನೆಯ ಹೊದಿಕೆಯನ್ನು ಶುಂಠಿ ನಾಟಿ ಮಾಡಿದಾಗ ಹಸಿರೆಲೆ (10-12 ಟನ್ / ಹೆಕ್ಟೇರ್) ಗಳಿಂದ ಹಾಕಬೇಕು. ನಾಟಿ ಮಾಡಿದ 40 ಮತ್ತು 90 ದಿನಗಳಿಗೊಮ್ಮೆ (ಕಳೆ ತೆಗೆದು, ರಸಗೊಬ್ಬರಗಳನ್ನು ಮೇಲು ಗೊಬ್ಬರವಾಗಿ ಹಾಕಿ, ಮಣ್ಣು ಏರು ಹಾಕಿದ ಸಮಯದಲ್ಲಿ) (7.5 ಟನ್ / ಹೆಕ್ಟೇರ್) ಹೊದಿಕೆಗಳನ್ನು ಹಾಕಬೇಕು.
ಅಂತರ ಬೇಸಾಯ
ರಸಗೊಬ್ಬರಗಳನ್ನು ಹಾಕುವುದಕ್ಕಿಂತ ಮತ್ತು ಹೊದಿಕೆ ಹಾಕುವುದಕ್ಕಿಂತ ಮುಂಚೆ ಕಳೆ ತೆಗೆಯಬೇಕು. ಕಳೆಗಳ ಬೆಳವಣಿಗೆಯನ್ನು ಆಧರಿಸಿ ಎರಡು-ಮೂರು ಬಾರಿ ಕಳೆ ತೆಗೆಯಬೇಕು. ಜಮೀನಿನಲ್ಲಿ ನೀರು ಹೆಚ್ಚು ನಿಂತಾಗ ನೀರು ಬಸಿದು ಹೋಗುವಂತೆ ಬಸಿ ಕಾಲುವೆಗಳನ್ನು ತೆಗೆಯಬೇಕು.
ಮಣ್ಣಿನಲ್ಲಿ ಗಡ್ಡೆಗಳು ಹೊರಗೆ ಕಾಣದಂತೆ ಮುಚ್ಚಲು ಮತ್ತು ಗಡ್ಡೆಗಳು" ಚೆನ್ನಾಗಿ ಬೆಳೆದು ಅಭಿವೃದ್ಧಿಯಾಗಲು ಅನುಕೂಲವಾಗುವಂತೆ ಮಣ್ಣು ಏರು ಹಾಕಬೇಕು. ನಾಟಿ ಮಾಡಿದ 40 ಮತ್ತು 90 ದಿನಗಳಲ್ಲಿ (ಕಳೆ ತೆಗೆದು ರಸಗೊಬ್ಬರಗಳನ್ನು ಹಾಕಿದಾಗ) ಕಳೆಗಳನ್ನು ಕೀಳಬೇಕು.
ಬೆಳೆ ಪರ್ಯಾಯ ಮತ್ತು ಮಿತ್ರ ಬೆಳೆ
ಬೆಳೆ ಪರಿವರ್ತನೆಯನ್ನು ಶುಂಠಿಯಲ್ಲಿ ಮಾಡಲಾಗುತ್ತದೆ. ಮರಗೆಣಸು, ರಾಗಿ, ಭತ್ತ, ಎಳ್ಳು, ಮುಸುಕಿನ ಜೋಳ ಮತ್ತು ತರಕಾರಿ ಬೆಳೆಗಳನ್ನು ಶುಂಠಿ ಬೆಳೆದ ನಂತರ ಪರ್ಯಾಯ ಬೆಳೆಗಳಾಗಿ ಬೆಳೆಯಲಾಗುತ್ತದೆ. ಕರ್ನಾಟಕದಲ್ಲಿ ಶುಂಠಿ ಬೆಳೆಯನ್ನು ರಾಗಿ, ತೊಗರಿ ಮತ್ತು ಹರಳು ಬೆಳೆಗಳ ಜೊತೆಗೆ ಮಿಶ್ರ ಬೆಳೆಯಾಗಿ ಬೆಳೆಯಲಾಗುತ್ತದೆ. ಕೇರಳ ಮತ್ತು ಕರ್ನಾಟಕದಲ್ಲಿ ಶುಂಠಿ ಬೆಳೆಯನ್ನು ತೆಂಗು, ಅಡಿಕೆ, ಕಾಫಿ ಮತ್ತು ಕಿತ್ತಳೆ ತೋಟಗಳಲ್ಲಿ ಅಂತರ ಬೆಳೆಯಾಗಿಯೂ ಬೆಳೆಯಲಾಗುತ್ತದೆ. ಟೊಮೆಟೊ, ಆಲೂಗೆಡ್ಡೆ, ಮೆಣಸಿನಕಾಯಿ, ಬದನೆಕಾಯಿ ಮತ್ತು ಶೇಂಗಾ ಬೆಳೆಗಳನ್ನು ಶುಂಠಿ ಬೆಳೆಯ ನಂತರ ಬೆಳೆಯಬಾರದು ಏಕೆಂದರೆ ಈ ಬೆಳೆಗಳು
ಬೇಸಾಯ ಸಾಮಗ್ರಿಗಳು
ಕ್ರ.ಸಂ |
ವಿವರಗಳು |
ಪ್ರತಿ ಹೆಕ್ಟೇರಿಗೆ |
1 |
ಬಿತ್ತನೆ ಶುಂಠಿ |
1500 ಕಿ.ಗ್ರಾಂ |
2 |
ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟ್ |
25 ಟನ್ |
3 |
ಸಾರಜನಕ |
100 ಕಿ.ಗ್ರಾಂ |
4 |
ರಂಜಕ |
50 ಕಿ ಗ್ರಾಂ |
5 |
ಪೋಟ್ಯಾಷ್ |
50 ಕಿ ಗ್ರಾಂ |
ನಾಟಿ ಮಾಡುವುದು
ಭೂಮಿಯನ್ನು ಉಳುಮೆ ಮಾಡುವಾಗ ಸಾವಯವ ಗೊಬ್ಬರಗಳನ್ನು ಮಣ್ಣಿನಲ್ಲಿ ಸೇರಿಸಬೇಕು. ಮರಳುಗೋಡು ಮಣ್ಣಿನ ಪ್ರದೇಶವಾದಲ್ಲಿ ಸಮತಟ್ಟಾದ ಮಡಿಗಳನ್ನು, ಜೇಡಿ ಮಣ್ಣಿನ ಪ್ರದೇಶದಲ್ಲಿ ಎತ್ತರದ ಮಡಿಗಳನ್ನು ತಯಾರಿಸಬೇಕು. ಈ ಮಡಿಗಳ ಉದ್ದ 3-5 ಮೀ. ಅಗಲ 90 ಸೆಂ.ಮೀ. ಇರಬೇಕು. ಈ ರೀತಿ ಮಡಿಗಳನ್ನು ತಯಾರಿಸಿದ ಮೇಲೆ ಕೊಡಬೇಕಾದ ರಂಜಕ ಮತ್ತು ಪೊಟ್ಯಾಷ್ ಗೊಬ್ಬರಗಳನ್ನು ಪೂರ್ತಿಯಾಗಿ ಮಣ್ಣಿನಲ್ಲಿ ಬೆರೆಸಬೇಕು. ಬಿತ್ತನೆಯ ಶುಂಠಿಯನ್ನು (ಕನಿಷ್ಠ 15-25 ಗ್ರಾಂ ತೂಕವಿರುವ ತುಂಡುಗಳನ್ನು) ಮಡಿಗಳಲ್ಲಿ 30 ಸೆಂ.ಮೀ. ಅಂತರದಲ್ಲಿ ನಾಟಿ ಮಾಡಬೇಕು. ಬಿತ್ತನೆಗಿಂತ ಮುಂಚೆ ಬೀಜದ ಗಡ್ಡೆಗಳನ್ನು 2 ಗ್ರಾಂ ಬ್ರಿಚಿಂಗ್ ಪೌಡರ್, 1 ಗ್ರಾಂ ಮೆಟಲಾಕ್ಸಿಲ್ ಎಂಝಡ್-72. 1 ಗ್ರಾಂ ಸ್ಪೆಸ್ಟೋಸೈಕ್ಲಿನ್ ಮತ್ತು 2 ಮಿ.ಲೀ. ಎಂಡೋಸಲ್ಫಾನ್ ಕೀಟನಾಶಕಗಳನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ತಯಾರಿಸಿದ ದ್ರಾವಣದಲ್ಲಿ 30 ನಿಮಿಷ ನೆನೆಸಿ ನೆರಳಿನಲ್ಲಿ ಹರಡಿ ನಾಟಿಗೆ ಬಳಸಿ. ಇದರಿಂದ ಗಡ್ಡೆ ಕೊಳೆ ರೋಗ ಮತ್ತು ಶಲ್ಯ ಕೀಟಗಳ ಬಾಧೆಯಿಂದ ರಕ್ಷಿಸಿಕೊಳ್ಳಬಹುದಾಗಿದೆ. ಶೇ. 50ರ ಸಾರಜನಕವನ್ನು ನಾಟಿ ಮಾಡಿದ 30 ರಿಂದ 40 ದಿನಗಳ ನಂತರವೂ, ಉಳಿದ ಶೇ. 50 ಸಾರಜನಕವನ್ನು ನಾಟಿ ಮಾಡಿದ 60 ರಿಂದ 70 ದಿನಗಳ ನಂತರವೂ ಕೊಡಬೇಕು.
ನೀರಾವರಿ ಹಾಗೂ ಅಂತರ ಬೇಸಾಯ
ಮಣ್ಣು ಮತ್ತು ಹವಾಗುಣವನ್ನಾಧರಿಸಿ 6-8 ದಿನಗಳಿಗೊಮ್ಮೆ ನೀರು ಹಾಯಿಸಬೇಕು. ಜಮೀನಿನಲ್ಲಿ 2 ರಿಂದ 3 ಬಾರಿ ಕಳೆಗಳನ್ನು ತೆಗೆದು ಕಳೆಗಳಿಂದ ಮುಕ್ತವಾಗಿಡಬೇಕು. ಶುಂಠಿಯನ್ನು ಒಂದೇ ಸ್ಥಳದಲ್ಲಿ ಸತತವಾಗಿ ಬೆಳೆಯಬಾರದು. ಬೆಳೆ ಪರಿವರ್ತನೆ ಅನುಸರಿಸಬೇಕು. ರಾಗಿ, ತೊಗರಿ, ಶೇಂಗಾ, ತರಕಾರಿ ಬೆಳೆಗಳನ್ನು ಪರಿವರ್ತನೆಗೆ ಬಳಸಬಹುದು. ಶುಂಠಿಯನ್ನು ತೆಂಗು, ಅಡಿಕೆ, ಕಾಫಿ, ಕಿತ್ತಳೆ, ತೋಟಗಳಲ್ಲಿ ಅಂತರ ಬೆಳೆಯಾಗಿ ಬೆಳೆಯಬಹುದು.
ಸಸ್ಯಸಂರಕ್ಷಣೆ
ಕ್ರ.ಸಂ |
ಕೀಟಗಳು |
ಹಾನಿಯ ಲಕ್ಷಣಗಳು |
ನಿರ್ವಹಣಾ ಕ್ರಮ |
1 |
ಕಾಂಡ ಕೊರೆ ಯುವ ಹುಳು |
ಮರಿಹುಳು ಹಸಿ ಕಾಂಡವನ್ನು ಸೇರಿ ಸುರಂಗವನ್ನು ಕೊರೆದು ತಿನ್ನುತ್ತದೆ. ಮಧ್ಯದ ಎಲೆಗಳ ಮೇಲೆ ಅಡ್ಡಲಾಗಿ ಸಾಲಾದ ರಂಧ್ರಗಳನ್ನು ಕಾಣಬಹುದು. ನಂತರ ಸುಳಿ ಒಣಗಿ ಸಾಯುವುದು |
ಎಲೆ ತಿನ್ನುವ ಹುಳು, ಕಾಂಡ ಕೊರೆಯುವ ಹುಳುವಿನ ಹತೋಟಿಗೆ 1.7 ಮಿ. ಲೀ. ಡೈಮಿಥೋಯೇಟ್ 30 ಇ.ಸಿ. ಅಥವಾ 1 ಮಿ. ಲೀ. ಮೊನೋಕ್ರೋಟೋಫಾಸ್ 36 ಎಸ್.ಎಲ್. ಅಥವಾ 2 ಮಿ. ಲೀ. ಮೆಲಾಥಿಯಾನ್ 50 ಇ.ಸಿ.ಪ್ರತಿ ಲೀಟರ್ ನೀರಿನಲ್ಲಿ ಸೇರಿಸಿ ಸಿಂಪಡಿಸಬೇಕು. |
2 |
ಎಲೆ ತಿನ್ನುವ ಹುಳು |
ಮರಿಹುಳುಗಳು ಎಲೆಗಳನ್ನು ತಿಂದು ಹಾಳು ಮಾಡುತ್ತವೆ. |
|
ಕ್ರ.ಸಂ |
ರೋಗಗಳು |
ರೋಗದ ಲಕ್ಷಣಗಳು |
ನಿರ್ವಹಣಾ ಕ್ರಮಗಳು |
1 |
ಎಲೆ ಚುಕ್ಕೆ ರೋಗ |
ಸಣ್ಣನೆಯ ವೃತ್ತಾಕಾರದ
ಅಥವಾ ಗೋಲಾಕಾರದ ತಿಳಿಹಳದಿ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ನಂತರ ಚುಕ್ಕೆಗಳು
ವೃದ್ಧಿಗೊಂಡು ಆಮೇಲೆ ಎಲೆಗಳು ಒಣಗಲು ಪ್ರಾರಂಭವಾಗುತ್ತವೆ. |
ಆಕ್ಸಿಕ್ಲೋರೈಡ್ 50 ಡಬ್ಲೂ.ಪಿ. ಪ್ರತಿ ಲೀಟರ್ ನೀರಿನಲ್ಲಿ ಸೇರಿಸಿ ಸಿಂಪಡಿಸಬೇಕು,
ಎಲೆ ಚುಕ್ಕೆ ರೋಗ ನಿಯಂತ್ರಣಕ್ಕೆ ಶೇ. 1 ರ ಬೋರ್ಡೊ ದ್ರಾವಣ ಸಿಂಪಡಿಸಬಹುದಾಗಿದೆ. |
2 |
ಗಡ್ಡೆ ಕೊಳೆ ರೋಗ |
ರೋಗಕ್ಕೆ ತುತ್ತಾದ ಗಿಡಗಳ ಎಲೆಗಳ ತುದಿ ಭಾಗವು ಹಳದಿ ಬಣ್ಣಕ್ಕೆ ತಿರುಗಿ ಕ್ರಮೇಣ ಎಲೆ ಹಳದಿಯಾಗುತ್ತದೆ. ಆಮೇಲೆ ಗಿಡಗಳು ಬಾಡಿ ಒಣಗುತ್ತವೆ. ಗಿಡದ ಬುಡ ಭಾಗವು ತೇವಾಂಶ ಯುಕ್ತ ಕಂದು ಬಣ್ಣದಿಂದ ಕೂಡಿರುತ್ತದೆ ಆಮೇಲೆ ಮೃದುವಾಗಿ ನಂತರ ಕೊಳೆಯುತ್ತವೆ |
1. ನಾಟಿಗಾಗಿ ರೋಗರಹಿತ ಗಡ್ಡೆಯಲ್ಲಿನ
ಆರೋಗ್ಯವಂತ ಗಡ್ಡೆಗಳನ್ನು
ಬಳಸುವುದು ಅತಿ ಮುಖ್ಯ. 2. ಬೀಜದ ಗಡ್ಡೆಗಳನ್ನು
ಶೇಖರಿಸುವ ಮೊದಲು ಶುಂಠಿಯ ಕೊಂಬುಗಳನ್ನು 3 ಗ್ರಾಂ ಮ್ಯಾಂಕೋಜೆಬ್ 75 4. 23 eo đơ ತಯಾರಿಸಿದ ದ್ರಾವಣದಲ್ಲಿ ಸುಮಾರು 30 ನಿಮಿಷಗಳ ಕಾಲ ನೆನಿಸಬೇಕು. ನಂತರ ನೆರಳಿನಲ್ಲಿ ಹರಡಿ ಆರಲು ಬಿಡಬೇಕು. ನಂತರ ಉಪಚರಿಸಿದ ಬೀಜಗಳನ್ನು ಶೇಖರಿಸಬೇಕು. 3. ಗಡ್ಡೆಕೊಳೆ
ರೋಗದ ತೀವ್ರತೆ ಹೆಚ್ಚಿರುವ ಪ್ರದೇಶಗಳಲ್ಲಿ ಮಾರ್ಚ್ ತಿಂಗಳಲ್ಲಿ ನಾಟಿ ಮಾಡುವುದು ಸೂಕ್ತ. 4. ನಾಟಿಗಾಗಿ ಚೆನ್ನಾಗಿ ನೀರು ಬಸಿದು ಹೋಗುವಂತಹ ಭೂಮಿಯನ್ನು ಆಯ್ಕೆ ಮಾಡಬೇಕು. 5. ನಾಟಿ ಮಾಡುವ ಮೊದಲು ಬೀಜದ ಗಡ್ಡೆಗಳನ್ನು 6 ಗ್ರಾಂ ಮೆಟಲಾಕ್ಸಲ್ ಎಮ್. ಝಡ್ 72 ಡಬ್ಲ್ಯೂ.ಪಿ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ತಯಾರಿಸಿ ದ್ರಾವಣದಲ್ಲಿ 30 ನಿಮಿಷಗಳ ಕಾಲ ನೆನೆಸಿ ನಂತರ ನಾಟಿ ಮಾಡಬೇಕು, 6. ನಾಟ ಮಾಡುವಾಗ | ಕ್ವಿಂಟಾಲ್ ಬೇವಿನ ಹಿಂಡಿ ಜೊತೆಗೆ 1 ಕಿ. ಗ್ರಾಂ ಟ್ರೈಕೋಡರ್ಮಾ ಜೈವಿಕ ಶಿಲೀಂಧ್ರನಾಶಕ ಪ್ರತಿ ಎಕರೆಗೆ ಭೂಮಿಯಲ್ಲಿ ನಾಟಿ ಮಾಡುವಾಗ ಬೆರೆಸಬೇಕು. 7. ಶುಂಠಿ ಬೆಳೆಗೆ ನೆರಳು ಒದಗಿಸುವಂತಹ ಎತ್ತರ ಬೆಳೆಗಳಾದ ಔಡಲ ಅಥವಾ ತೊಗರಿ ಬೆಳೆಗಳನ್ನು ಮಿಶ್ರ ಬೆಳೆಯಾಗಿ ತೆಗೆದುಕೊಳ್ಳಬೇಕು. ೫. ಶುಂಠಿಯ ಬೆಳೆಯಲ್ಲಿಯ ರೋಗಗ್ರಸ್ಥ
ಗಡ್ಡೆಗಳನ್ನು ತೆಗೆದು ಹಾಕಿ, ನಂತರ 3 ಗ್ರಾಂ ಕಾಪರ್ ಆಕ್ಸಿಕ್ಲೋರೈಡ್ 50 ಡಬ್ಲ್ಯೂ, ಪಿ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ತಯಾರಿಸಿದ ದ್ರಾವಣವನ್ನು ರೋಗ ಬಂದ ಮಡಿಗೆ ಹಾಗೂ ಸುತ್ತಮುತ್ತಲಿನ
ಮಡಿಗಳಿಗೆ ಹಾಕಬೇಕು. |
ಸಾವಯವ ಉತ್ಪಾದನೆ
ಸಾವಯವ ಶುಂಠಿ ಉತ್ಪಾದನೆಗೆ. ಸ್ಥಳೀಯ ಮಣ್ಣು ಮತ್ತು ಹವಾಗುಣ ಪರಿಸ್ಥಿತಿಗಳಿಗೆ ಹೊಂದಿಕೊಂಡಿರುವ, ರೋಗಗಳಿಗೆ ಕೀಟಗಳಿಗೆ ಮತ್ತು ದಂಡಾಣುಗಳನ್ನು ಎದುರಿಸುವ ಅಥವಾ ಸಹಿಷ್ಣುತೆ ಹೊಂದಿರುವ ಸ್ಥಳೀಯ ತಳಿಗಳನ್ನೇ ಉಪಯೋಗಿಸಬೇಕು. ಹೊಲದಲ್ಲಿಯೇ ದೊರೆಯುವ ಬೆಳೆಗಳ ತ್ಯಾಜ್ಯ ಪದಾರ್ಥ ಮತ್ತು ಬೆಳೆಗಳ ಶೇಷ ಪದಾರ್ಥಗಳಾದ ನೆರಳಿನ ಮರಗಳನ್ನು ಅಥವಾ ಇನ್ನಾವುದೇ ಗಿಡಗಳನ್ನು ಸವರಿದಾಗ ಸಿಗುವ ಹಸಿರೆಲೆಗಳು, ಬೆಳೆಗಳ ಶೇಷ ಪದಾರ್ಥಗಳು, ದನಗಳ ಸಗಣಿ ರಾಡಿ, ಕೋಳಿಗಳು ವಿಸರ್ಜಿಸಿದ ಹಿಕ್ಕೆ ಇತ್ಯಾದಿಗಳನ್ನು ಕಾಂಪೋಸ್ಟ್ ಮಡುವುದರ ಮೂಲಕ ಅಥವಾ ಎರೆಹುಳು ಗೊಬ್ಬರ ತಯಾರಿಸುವುದರ ಮೂಲಕ ಪುನಃ ಮಣ್ಣಿಗೆ ಸೇರಿಸುವುದರಿಂದ ಮಣ್ಣಿನ ಫಲವತ್ತತೆಯನ್ನು ಹೆಚ್ಚಿನ ಮಟ್ಟದಲ್ಲಿ ಇಡಬೇಕು. ಸಾವಯವ ಪದ್ಧತಿಯಲ್ಲಿ ಯಾವುದೇ ಕೃತಕ ರಾಸಾಯನಿಕ ಗೊಬ್ಬರಗಳನ್ನಾಗಲೀ, ಪೀಡೆನಾಶಕಗಳನ್ನಾಗಲೀ ಅಥವಾ ಶಿಲೀಂದ್ರನಾಶಕಗಳನ್ನಾಗಲೀ ಬಳಸಲೇ ಬಾರದು. ಕೊಟ್ಟಿಗೆ ಗೊಬ್ಬರ (25-30 ಟನ್ / ಹೆಕ್ಟೇರ್) ವನ್ನು ಎರೆಹುಳು ಗೊಬ್ಬರ (5 ಟನ್ / ಹೆಕ್ಟೇರ್) ದ ಜೊತೆಗೆ ಹಾಕಬೇಕು ಮತ್ತು 45 ದಿನಗಳ ಅಂತರಗಳಲ್ಲಿ ಮಡಿಗಳ ಮೇಲೆ ಹಸಿರೆಲೆ (12-15 ಟನ್/ಹೆಕ್ಟೇರ್)ಗಳಿಂದ ಹೊದಿಕೆ ಹಾಕಬೇಕು. ಮಣ್ಣು ಪರೀಕ್ಷೆಯ ಫಲಿತಾಂಶಗಳ ಆಧಾರದ ಮೇಲೆ ಸುಣ್ಣ / ಡೋಲೋಮೈಟ್, ಶಿಲಾ ರಂಜಕ ಮತ್ತು ಮರದ ಬೂದಿಗಳನ್ನು ಮಣ್ಣಿಗೆ ಸೇರಿಸುವುದರಿಂದ ಅಗತ್ಯವಿರುವಷ್ಟು ಪ್ರಮಾಣದ ರಂಜಕ ಹಾಗೂ ಪೊಟ್ಯಾಷ್ ಪೋಷಕಾಂಶಗಳನ್ನು ಒದಗಿಸಿದಂತಾಗುತ್ತದೆ. ಲಘು ಪೋಷಕಾಂಶದ ಕೊರತೆಯಿಂದ ಇಳುವರಿ ಕಡಿಮೆಯಾಗುವಂತಹ ಸಂದರ್ಭಗಳಲ್ಲಿ, ಲಘು ಪೋಷಕಾಂಶಗಳನ್ನು ಒದಗಿಸುವ ಖನಿಜ/ರಾಸಾಯನಿಕ ಮೂಲಗಳನ್ನು ಕಡಿಮೆ ಪ್ರಮಾಣದಲ್ಲಿ ಮಣ್ಣಿಗೆ ಸೇರಿಸುವುದಕ್ಕೆ ಅಥವಾ ಎಲೆಗಳ ಮೇಲೆ ಸಿಂಪರಿಸುವುದಕ್ಕೆ (ಪ್ರಮಾಣೀಕರಿಸುವ ಸಂಸ್ಥೆಗಳಿಂದ ನಿಗಧಿಪಡಿಸಿದ ನಿರ್ಧಿಷ್ಟ ಪ್ರಮಾಣಗಳ ಮಿತಿಗೆ ಒಳಪಟ್ಟು) ಅನುಮತಿ ನೀಡಲಾಗಿದೆ. ಇದರ ಜೊತೆಗೆ, ಬೇವಿನ ಹಿಂಡಿ (2 ಟನ್ / ಹೆಕ್ಟೇರ್) ಯಂತಹ ಹಿಂಡಿಗಳನ್ನೂ, ತೆಂಗಿನ ನಾರಿನ ಹುಡಿ ಕಾಂಪೋಸ್ಟ್ (5 ಟನ್ / ಹೆಕ್ಟೇರ್) ಮತ್ತು ಅಜೋಸ್ಪೆರಿಲಮ್ ಮತ್ತು ಫಾಸ್ಪೇಟ್ ಸಾಲುಬಲೈಜಿಂಗ್ ಬ್ಯಾಕ್ಟಿರಿಯಾಗಳ ಸೂಕ್ಷ್ಮಾಣು ಜೀವಿಗಳನ್ನು ಸಾಕಿ ವೃದ್ಧಿಗೊಳಿಸಿದ ಜೀವಾಣು ರಾಶಿಯನ್ನು ಮಣ್ಣಿಗೆ ಸೇರಿಸುವುದರಿಂದ ಮಣ್ಣಿನ ಫಲವತ್ತತೆ ಸುಧಾರಿಸುವುದರ ಜೊತೆಗೆ ಇಳುವರಿ ಹೆಚ್ಚಿಸಬಹುದು.
ಜೈವಿಕ ಪೀಡೆನಾಶಕಗಳು, ಜೈವಿಕ ನಿಯಂತ್ರಕ ವಾಹಕಗಳು, ಸಾಗುವಳ ಕ್ರಮಗಳು ಮತ್ತು ಸ್ವಚ್ಛತೆಯನ್ನು ಕಾಪಾಡುವ ಕ್ರಮಗಳನ್ನು ಆನುಸರಿಸುವ ಮೂಲಕ ಕೀಟ-ಪೀಡೆ ಮತ್ತು ರೋಗಗಳ ನಿರ್ವಹಣೆ ಮಾಡುವುದು ಸಾವಯವ ಪದ್ಧತಿಯಲ್ಲಿ ಪ್ರಮುಖವಾದ ಅಂಶವಾಗಿದೆ. ಕಾಂಡ ಕೊರಕ ಹುಳುಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಆಗತಾನೇ ಬಾಧೆಗೊಳಗಾದ ದಂಟುಗಳನ್ನು ಕತ್ತರಿಸುವುದು ಹಾಗೂ ನಾಶ ಮಾಡುವುದು (ಜುಲೈ - ಆಗಸ್ಟ್‌ನಲ್ಲಿ : 15 ದಿನಗಳಿಗೊಮ್ಮೆ) ಮತ್ತು ಶೇಕಡಾ 0.5 ನೀಮ್ ಆಯಿಲ್ (ಸೆಪ್ಟೆಂಬರ್ ಅಕ್ಟೋಬರ್ : 21 ದಿನಗಳ ಅಂತರಗಳಲ್ಲಿ) ಅಥವಾ ಬ್ಯಾಸಿಲೆಸ್ ಹುರಿಂಜಿಯೆನ್ಸಿಯಸ್ ತಯಾರಿಕೆ (ಜುಲೈ-ಅಕ್ಟೋಬರ್) ಅನ್ನು ಸಿಂಪರಿಸುವುದು ಇವೇ ಮುಂತಾದ ಸಮಗ್ರ ನಿಯಂತ್ರಣ ಕ್ರಮಗಳನ್ನು ಅನುಸರಿಸಬೇಕು.
ಬಿತ್ತನೆಗೆ ಆರೋಗ್ಯವಂತ ಗೆಡ್ಡೆಗಳನ್ನು ಆಯ್ಕೆ ಮಾಡುವುದು, ಮಣ್ಣಿನ ಮೇಲೆ ಪಾಲಿಥೀನ್ ಹಾಳೆ ಹರಡುವುದು (ಸೊಲರೈಜೇಷನ್). ಟ್ರೈಕೋಡೆರ್ಮಾವನ್ನು ಮಣ್ಣಿಗೆ ಸೇರಿಸುವುದು, ಜೈವಿಕ ನಿಯಂತ್ರಕ ವಾಹಕಗಳಾದ ಟ್ರೈಕೋಡರ್ಮಾ ಅಥವಾ ಸೂಡೋಮೊನಾಸ್ ಗಳನ್ನು ತೆಂಗಿನ ನಾರಿನಹುಡಿ ಕಾಂಪೋಸ್ಟ್, ಚೆನ್ನಾಗಿ ಕಳಿತ ಗೊಬ್ಬರ ಅಥವಾ ಗುಣಮಟ್ಟದ ಬೇವಿನ ಹಿಂಡಿಗಳ ಮೇಲೆ ವೃದ್ಧಿ ಮಾಡಿ, ಈ ರೀತಿ ವೃದ್ಧಿ ಮಾಡಿದ ಟ್ರೈಕೋಡೆರ್ಮಾ ಅಥವಾ ಸೂಡೋಮಾನಾಸ್‌ಗಳಿಂದ ಬೀಜೋಪಚಾರ ಮಾಡುವುದರಿಂದ (ಬಿತ್ತನೆ ಸಮಯದಲ್ಲಿ) ಮತ್ತು ಮಣ್ಣಿಗೆ (ಆಗಿಂದಾಗ್ಗೆ ಕಂತುಗಳಲ್ಲಿ ಸೇರಿಸುವುದರಿಂದ ಗೆಡ್ಡೆ ಕೊಳೆಯುವ ರೋಗವನ್ನು ನಿಯಂತ್ರಣದಲ್ಲಿಡಬಹುದು. ಇತರೆ ಎಲೆಗಳ ರೋಗಗಳನ್ನು ನಿಯಂತ್ರಣದಲ್ಲಿಡಲು ಶೇಕಡಾ ಒಂದು ಸಾಮರ್ಥ್ಯದ ಬೋರ್ಡೋ ಮಿಶ್ರಣವನ್ನು (ವರ್ಷಕ್ಕೆ ಹೆಕ್ಟೇರಿಗೆ ಎಂಟು ಕಿ. ಗ್ರಾಂ. ಕಾಪರ್ ಸಲ್ವೇಟ್ ಮೀರದಂತೆ) ಸಿಂಪರಿಸಬೇಕು. ಗುಣಮಟ್ಟದ ಬೇವಿನ ಹಿಂಡಿಯನ್ನು ಜೈವಿಕ ವಾಹಕ (ಪೊಚೋನಿಯಾ ಕ್ಲಾಮೈಡೋಸ್ಪೋರಿಯಾ) ದ ಜೊತೆಗೆ ಮಿಶ್ರ ಮಾಡಿ, ಹಾಕುವುದರಿಂದ ದಂಡಾಣುಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದು.
ಕೊಯಿಲು ಮತ್ತು ಸಂಸ್ಕರಣೆ
ಶುಂಠಿಯು ನಾಟಿ ಮಾಡಿದ ಸುಮಾರು ಎಂಟು ತಿಂಗಳುಗಳಲ್ಲಿ (ಎಲೆಗಳು ಹಳದಿ ಬಣ್ಣಕ್ಕೆ ತಿರುಗಿದಾಗ ಮತ್ತು ಕ್ರಮೇಣ ಒಣಗಲು ಪ್ರಾರಂಭವಾಗುತ್ತಿರುವಾಗ) ಕೊಯಿಲು ಮಾಡಲು ಸಿದ್ಧವಾಗುತ್ತದೆ. ಗಿಡಗಳನ್ನು ಸಲಿಕೆ ಅಥವಾ ಆಗಿಯುವ ಸಲಕರಣೆಯಿಂದ ಎಚ್ಚರಿಕೆಯಿಂದ ಅಗೆದು, ಮಣ್ಣಿನಿಂದ ಹೊರಗೆ ತೆಗೆಯಬೇಕು. ನಂತರ ಒಣಗಿರುವ ಎಲೆಗಳು, ಬೇರುಗಳು ಮತ್ತು ಅಂಟಿಕೊಂಡಿರುವ ಮಣ್ಣಿನಿಂದ ಗಡ್ಡೆಗಳನ್ನು ಬೇರ್ಪಡಿಸಬೇಕು.
ಹಸಿ ಶುಂಠಿಯನ್ನು ತರಕಾರಿಯಾಗಿ ಉಪಯೋಗಿಸಬೇಕೆಂದಾಗ, ಆರು ತಿಂಗಳ ನಂತರ ಕೊಯಿಲು ಮಾಡಲಾಗುವುದು, ಗೆಡ್ಡೆಗಳನ್ನು ನೀರಿನಲ್ಲಿ ಚೆನ್ನಾಗಿ ತೊಳೆದು, ಸೂರ್ಯನ ಬಿಸಿಲಿನಲ್ಲಿ ಒಂದು ದಿನ ಒಣಗಿಸಬೇಕು.
ಒಣಗಿದ ಶುಂಠಿಯನ್ನು ತಯಾರಿಸಲು, ಗೆಡ್ಡೆಗಳನ್ನು (" ತಿಂಗಳ ನಂತರ ಕೊಯಿಲು ಮಾಡಿದ) 6 7 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಬೇಕು. ನಂತರ ಗಡ್ಡೆಗಳಿಗೆ ಅಂಟಿಕೊಂಡಿರುವ ಇತರೆ ವಸ್ತುಗಳನ್ನು ತೆಗೆಯಲು ಮತ್ತು ಸ್ವಚ್ಛ ಮಾಡಲು ಗಡ್ಡೆಗಳನ್ನು ಉಜ್ಜಬೇಕು. ಸ್ವಚ್ಛ ಮಾಡಿದ ನಂತರ, ಗಡ್ಡೆಗಳನ್ನು ನೀರಿನಿಂದ ಹೊರತೆಗೆದು, ಗಡ್ಡೆಗಳ ಹೊರ ಸಿಪ್ಪೆಯನ್ನು ಚೂಪಾದ ತುದಿಗಳಿರುವ ಬಿದಿರಿನ ಕಡ್ಡಿಗಳ ಸಹಾಯದಿಂದ ತೆಗೆಯಬೇಕು. ಈ ರೀತಿ ಸಿಪ್ಪೆ ತೆಗೆಯುವಾಗ, ಹೊರ ಸಿಪ್ಪೆಯ ಕೆಳಗಿರುವ ತೈಲದ ಜೀವಕೋಶಗಳಿಗೆ ಹಾನಿಯಾಗದಂತೆ ಎಚ್ಚರಿಕೆ ವಹಿಸಬೇಕಾಗಿರುವುದರಿಂದ ಸಿಪ್ಪೆಯನ್ನು ಆಳವಾಗಿ ತೆಗೆಯಬಾರದು. ಸಿಪ್ಪೆ ತೆಗೆದ ಗಡ್ಡೆಗಳನ್ನು ನೀರಿನಿಂದ ತೊಳೆದು, ಸೂರ್ಯನ ಬಿಸಿಲಿನಲ್ಲಿ ಒಂದು ವಾರದವರೆಗೆ ಒಣಗಿಸಬೇಕು. ಒಣಗಿಸಿದ ಗಡ್ಡೆಗಳನ್ನು ಪರಸ್ಪರ ಉಜ್ಜುವುದರಿಂದ ಉಳಿದಿರುವ ಸಿಪ್ಪೆ ಅಥವಾ ಕೊಳೆಯನ್ನು ತೆಗೆಯಬೇಕು. ಬೆಳೆಸಿರುವ ತಳಿ ಮತ್ತು ಬೆಳೆ ಬೆಳೆದಿರುವ ಸ್ಥಳಗಳ ಮೇಲೆ ಅವಲಂಭಿಸಿ, ಹಸಿ ಶುಂಠಿಯ ತೂಕದ ಶೇಕಡಾ 19 - 25 ರಷ್ಟು ಒಣ ಶುಂಠಿ ಇಳುವರಿ ದೊರೆಯುತ್ತದೆ.
ನಾಟಿ ಮಾಡಿದ 170-180 ದಿನಗಳಲ್ಲಿ ಕೊಯಿಲು ಮಾಡಿದ ಹಸಿ ಶುಂಠಿಯನ್ನು (ಕಡಿಮೆ ನಾರಿನಂಶವನ್ನು ಹೊಂದಿದ) ಉಪ್ಪು ಶುಂಠಿ ತಯಾರಿಸಲು ಬಳಸಬಹುದು. ಎಳೆಯ ಗೆಡ್ಡೆಗಳನ್ನು (ಸ್ವಲ್ಪ ಭಾಗ ಮಿಥ್ಯಾಕಾಂಡದ ಸಹಿತ) ಸಂಪೂರ್ಣವಾಗಿ ತೊಳೆದು, ಶೇಕಡಾ ಒಂದು ಸಾಮರ್ಥ್ಯದ ಸಿಟ್ರಿಕ್ ಆಮ್ಲವನ್ನೊಳಗೊಂಡ ಶೇಕಡಾ 30 ಸಾಮರ್ಥ್ಯದ ಉಪ್ಪಿನ ದ್ರಾವಣದಲ್ಲಿ ನೆನೆಸಬೇಕು. 14 ದಿನಗಳ ನಂತರ ಇದು ಉಪಯೋಗಿಸಲು ಸಿದ್ದವಾಗುತ್ತದೆ ಮತ್ತು ಇದನ್ನು ಶೀತಲೀಕರಣ ಯಂತ್ರ (ರಿಫ್ರಿಜಿರೇಷನ್) ಅಥವಾ ಶೀತಲೀಕರಣ ಕೊಠಡಿಗಳಲ್ಲಿ ದಾಸ್ತಾನು ಮಾಡಬಹುದು.
ಬಿತ್ತನೆ ಗಡ್ಡೆಗಳನ್ನು ದಾಸ್ತಾನು (ಸಂಗ್ರಹ) ಮಾಡುವುದು
ಉತ್ತಮ ಮೊಳೆಯುವಿಕೆ ಪಡೆಯಲು, ಬಿತ್ತನೆ ಗೆಡ್ಡೆಗಳನ್ನು ನೆರಳಿನಲ್ಲಿರುವ ಗುಣಿಗಳಲ್ಲಿ ಜೋಪಾನವಾಗಿ ಸಂಗ್ರಹ ಮಾಡಬೇಕು. ಬೀಜಕ್ಕೋಸ್ಕರ, ರೋಗರಹಿತ ಗಿಡಗಳಿಂದ ದಪ್ಪನೆಯ, ಆರೋಗ್ಯವಾದ ಗಡ್ಡೆಗಳನ್ನು ಕೊಯಿಲು ಮಾಡಿದ ತಕ್ಷಣವೇ ಆಯ್ಕೆ ಮಾಡಿಕೊಳ್ಳಬೇಕು. ಈ ಉದ್ದೇಶಕ್ಕೆ, ಬೆಳೆಯು 6-8 ತಿಂಗಳು ವಯಸ್ಸಾದಾಗ, ಇನ್ನೂ ಹಸಿರಾಗಿರುವಾಗ ಹೊಲದಲ್ಲಿ ಆರೋಗ್ಯವಾದ, ರೋಗ ಮುಕ್ತವಾದ ಗಿಡಗಳನ್ನು ಗುರುತು ಮಾಡಬೇಕು. ಬಿತ್ತನೆ ಗಡ್ಡೆಗಳನ್ನು ಕ್ವಿನಾಲ್ ಫಾಸ್ (ಶೇಕಡಾ 0.075) ಮತ್ತು ಮ್ಯಾಂಕೋಜೆಬ್ (ಶೇಕಡಾ 0.3) ಗಳನ್ನೊಳಗೊಂಡ ದ್ರಾವಣದಲ್ಲಿ 30 ನಿಮಿಷಗಳ ಕಾಲ ಉಪಚರಿಸಿದ ನಂತರ ನೆರಳಿನಲ್ಲಿ ಒಣಗಿಸಬೇಕು. ಬಿತ್ತನೆ ಗಡ್ಡೆಗಳನ್ನು ಶೆಡ್‌ಗಳಲ್ಲಿ ಅನುಕೂಲಕರ ಅಳತೆಯ ಗುಣಿಗಳಲ್ಲಿ ಸಂಗ್ರಹಣೆ ಮಾಡಬೇಕು. ಗುಣಿಗಳ ಒಳಗೋಡೆಗಳನ್ನು ಸಗಣಿಯ ರಾಡಿಯಿಂದ ಬಳಿಯಬೇಕು. ಗುಣಿಗಳಲ್ಲಿ ಗಡ್ಡೆಗಳನ್ನು ಪದರ ಪದರವಾಗಿ ಚೆನ್ನಾಗಿ ಒಣಗಿದ ಮರಳು / ಮರದ ಪುಡಿಯೊಂದಿಗೆ ಹಾಕಬೇಕು.
No comments:
Post a Comment