ಹಣ್ಣುಗಳ ರಾಜ ಎಂದೇ ಕರೆಯಲಾಗುವ ಮಾವು ಭಾರತದ ಪ್ರಮುಖ ಹಣ್ಣಿನ ಬೆಳೆಯಾಗಿದೆ. ಇದರ ಹಣ್ಣುಗಳು ರುಚಿಕರವಾಗಿದ್ದು "ಎ" ಮತ್ತು "ಸಿ" ಜೀವಸತ್ವಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿವೆ. ಮಾವಿನ ಹಣ್ಣುಗಳನ್ನು ತಾಜಾ ರೂಪದಲ್ಲಿ ಮತ್ತು ಸಂಸ್ಕರಿಸಿದ ಪದಾರ್ಥಗಳ ರೂಪದಲ್ಲಿ ಉಪಯೋಗಿಸಬಹುದಾಗಿದೆ. ವಿದೇಶಗಳಲ್ಲಿ ಈ ಹಣ್ಣಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಹಣ್ಣು ಹಾಗೂ ಸಂಸ್ಕರಿಸಿದ ಪದಾರ್ಥಗಳನ್ನು ರಫ್ತು ಮಾಡಲಾಗುತ್ತಿದೆ.
ಮಣ್ಣು
ಮಾವಿನ ಬೆಳೆಯನ್ನು ವಿವಿಧ ರೀತಿಯ ಮಣ್ಣುಗಳಲ್ಲಿ ಬೆಳೆಯಬಹುದಾಗಿದೆ. ವಿಶೇಷವಾಗಿ ಆಳವಾದ, ಚೆನ್ನಾಗಿ ನೀರು ಬಸಿದು ಹೋಗುವಂತಹ ಮಣ್ಣು ಹೆಚ್ಚು ಸೂಕ್ತ. ಕೆಂಪುಗೋಡು ಮಣ್ಣು ಅತೀ ಸೂಕ್ತ. ಸವಳು, ಚೌಗು ಮತ್ತು ಬಿರುಸಾದ ಕೆಳ ಪದರಗಳನ್ನು ಹೊಂದಿದ ಭೂಮಿ ಮಾವು ಕೃಷಿಗೆ ಸೂಕ್ತವಲ್ಲ. ಕೋಲಾರ, ಧಾರವಾಡ ಹಾಗೂ ಬೆಳಗಾವಿ ಪ್ರದೇಶಗಳಲ್ಲಿರುವ ಕೆಂಪು ಮಣ್ಣು ವಿಶೇಷವಾಗಿ ಯೋಗ್ಯವಾದ ಮಣ್ಣಾಗಿದೆ.
ಹವಾಗುಣ
ಮತ್ತು
ನಾಟಿ
ಕಾಲ
ಈ ಬೆಳೆಯು ಉಷ್ಣವಲಯದ ಬೆಳೆಯಾಗಿದ್ದು, ತೇವಾಂಶ ಹಾಗೂ ಒಣಹವೆಯಿಂದ ಕೂಡಿದ ಎರಡೂ ಸನ್ನಿವೇಶಗಳಿಗೂ ಸೂಕ್ತವಾಗಿದೆ. ಆದರೆ, ಹೂ ಬಿಡುವ ಸಮಯದಲ್ಲಿ ಮಳೆ ಹಾಗೂ ಮೋಡಕವಿದ ವಾತಾವರಣವಿದ್ದಲ್ಲಿ, ಬೂದಿ ರೋಗ ಹಾಗೂ ಜಿಗಿಹುಳುವಿನ ಹಾವಳಿ ಹೆಚ್ಚು. ಜೂನ್-ಜುಲೈ ತಿಂಗಳುಗಳು ಮಾವು ಸಸಿಗಳನ್ನು ನಾಟಿ ಮಾಡಲು ಅತೀ ಸೂಕ್ತ.
ತಳಿಗಳು
i) ಅರೆಮಲೆನಾಡು ಮತ್ತು
ಒಣ
ಪ್ರದೇಶಗಳಿಗೆ
ಸೂಕ್ತವಾದ
ತಳಿಗಳು
1. ಬಾದಾಮಿ / ಆಪೂಸ್
(ಅಲ್ಫಾನ್ಸೆ)
ಇದು ಹೆಚ್ಚು ಜನಪ್ರಿಯವಾದ. ಮಧ್ಯಮ ಗಾತ್ರದ, ಉತ್ಕೃಷ್ಟ ಗುಣಮಟ್ಟದ ಹಣ್ಣು ಕೊಡುವ ತಳಿಯಾಗಿದ್ದು, ತಾಜಾ ಹಣ್ಣಾಗಿ ಇಲ್ಲವೇ ಸಂಸ್ಕರಣೆಗಾಗಿ ಉಪಯೋಗಿಸಬಹುದು. ದೇಶ ವಿದೇಶಗಳಲ್ಲಿ ಕೂಡ ಹೆಚ್ಚು ಜನಪ್ರಿಯವಾದ ಮತ್ತು ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇರುವ ತಳಿಯಾಗಿದೆ. ಇದರ ಹಣ್ಣುಗಳು ಆಕರ್ಷಕ ಹಳದಿ ಬಣ್ಣದಿಂದ ಕೂಡಿದ್ದು, ಭುಜಗಳ ಮೇಲೆ ಕೆಂಪು ವರ್ಣವನ್ನು ಕಾಣಬಹುದು. ಹಣ್ಣಿನ ಗುಣಮಟ್ಟ ಉತ್ಕೃಷ್ಟ (ಸಕ್ಕರೆ 17' ಬ್ರಿಕ್ಸ್) ಮತ್ತು ತಿರುಳು ಗಟ್ಟಿಯಾಗಿದ್ದು ನಾರಿನಿಂದ ಮುಕ್ತವಾಗಿದೆ. ಸಾಧಾರಣ ಇಳುವರಿ ಮತ್ತು ಎರಡು ವರ್ಷಕ್ಕೊಮ್ಮೆ ಅಧಿಕ ಇಳುವರಿ ಕೊಡುವ ತಳಿಯಾಗಿದೆ. ಈ ತಳಿಯ ಹಣ್ಣುಗಳಲ್ಲಿ 'ಡೊಂಜಿ ಟಿನ್ಯೂ' (spongy tissue) ಎಂಬ ಶಾರೀರಿಕ ಸಮಸ್ಯೆ ಇರುತ್ತದೆ. ಈ ತಳಿಯು ಹೆಚ್ಚು ಮಳೆ ಮತ್ತು ತೇವಾಂಶಗಳಿಂದ ಕೂಡಿದ ಅರೆಮಲೆನಾಡು ಪ್ರದೇಶಗಳಲ್ಲಿ ಬಹಳ ಚೆನ್ನಾಗಿ ಬೆಳೆಯುತ್ತದೆ.
2. ಐಶ್ವರ್ಯ
ಬಾದಾಮಿ ತಳಿಯಿಂದ ಆಯ್ಕೆಯಾದ ಸುಧಾರಿತ ತಳಿ. ಅಧಿಕ ಇಳುವರಿ ಕೊಡುವ ತಳಿಯಾಗಿದೆ (10.06 ಟನ್/ಹೆ), ಹಣ್ಣುಗಳ ಗಾತ್ರ ಸಾಧಾರಣ (228.10 ಗ್ರಾಂ), ನೋಡಲು ಆಕರ್ಷಕವಾಗಿದ್ದು, ಅಧಿಕ ರುಚಿ (ಸಕ್ಕರೆ ಅಂಶ 18.07ನೇ ಬ್ರಿಕ್ಸ್) ಮತ್ತು ಹಣ್ಣಿನ ಶೇಕಡಾ 75.4 ಭಾಗವು ತಿರುಳಿನಿಂದ ಕೂಡಿದೆ. ಈ ತಳಿಯ ಹಣ್ಣುಗಳು 'ಸೊಂಜಿ ಟಿನ್ಯೂ' ಶಾರೀರಿಕ ತೊಂದರೆಯಿಂದ ಮುಕ್ತವಾಗಿರುತ್ತವೆ.
3. ರಸಪುರಿ / ಕಲಮಿ
(ಪೈರಿ)
ಇದು ಬೇಗ ಕೊಯ್ಲಿಗೆ ಬರುವ ತಳಿಯಾಗಿದ್ದು, ಮಧ್ಯಮ ಗಾತ್ರದ (220 ಗ್ರಾಂ) ಹಣ್ಣುಗಳನ್ನು ಕೊಡುತ್ತದೆ. ಹಣ್ಣುಗಳು ರುಚಿಕರ ಹಾಗೂ ರಸಭರಿತವಾಗಿದ್ದು, ನಾರುರಹಿತ ತಿರುಳಿನಿಂದ ಕೂಡಿರುತ್ತವೆ.
4. ತೋತಾಪುರಿ (ಬೆಂಗಳೂರ)
ಇದು ಪ್ರತಿ ವರ್ಷ ನಿಯಮಿತವಾಗಿ ಮತ್ತು ತಡವಾಗಿ ಇಳುವರಿ ಕೊಡುವ ತಳಿಯಾಗಿದ್ದು, ದೊಡ್ಡ ಗಾತ್ರದ (440 ಗ್ರಾಂ) ಹಣ್ಣು ಹೊಂದಿರುತ್ತದೆ. ಆದರೆ ಹಣ್ಣಿನ ರುಚಿ ಇತರ ತಳಿಗಳಷ್ಟು ಉತ್ತಮವಾಗಿರುವದಿಲ್ಲ. ಇದರ ಹಣ್ಣುಗಳನ್ನು ಹೆಚ್ಚು ಕಾಲ ಕೆಡದಂತೆ ಇಡಬಹುದು. ಒಣ ಪ್ರದೇಶಗಳಲ್ಲೂ ಚೆನ್ನಾಗಿ ಬೆಳೆಯವ ಈ ತಳಿಯು ಸಂಸ್ಕರಣೆಗೆ ಹೆಚ್ಚಾಗಿ ಬಳಸಲ್ಪಡುತ್ತದೆ.
5. ಮಲಗೋವ
ಇದು ಕಡಿಮೆ ಸಂಖ್ಯೆಯ ಹಣ್ಣು ಕೊಡುವ ತಳಿಯಾಗಿದ್ದು, ದೊಡ್ಡ ಗಾತ್ರದ (450 ಗ್ರಾಂ) ಉತ್ತಮ ಗುಣಮಟ್ಟದ ರುಚಿಕರವಾದ ಹಣ್ಣುಗಳನ್ನು ಕೊಡುತ್ತದೆ.
6. ನೀಲಂ
ಇದು ತಡವಾಗಿ ಕೊಯ್ಲಿಗೆ ಬರುವ ತಳಿಯಾದರೂ ಪ್ರತಿ ವರ್ಷ ನಿಯಮಿತವಾಗಿ ಇಳುವರಿ ಕೊಡುತ್ತದೆ. ತಡವಾಗಿ ಮಾಗುವ ತಳಿಯಾದುದರಿಂದ ಓಟೆಕೊರಕ ಕೀಟದ ಬಾಧೆಗೆ ತುತ್ತಾಗುತ್ತದೆ. ಒಣ ಪ್ರದೇಶಗಳಲ್ಲಿ ಬೆಳೆಯಲು ಸೂಕ್ತವಾಗಿದೆ.
7. ಬೆನೆಶಾನ್ (ಬಂಗನಪಲ್ಲಿ)
ಇದು ಒಣ ಪ್ರದೇಶಗಳಲ್ಲಿ ಬೆಳೆಯಲು ಸೂಕ್ತ ತಳಿಯಾಗಿದ್ದು, ಹಣ್ಣಿನ ಗಾತ್ರ ದೊಡ್ಡದಾಗಿದ್ದು (400ಗ್ರಾಂ) ಗುಣಮಟ್ಟ ಉತ್ತಮವಾಗಿದೆ. ಈ ತಳಿಯ ಹಣ್ಣುಗಳಿಗೆ ರಫ್ತು ಬೇಡಿಕೆಯೂ ಸಹ ಇದೆ.
8. ದಶಹರಿ
ಈ ತಳಿಯು ಉತ್ತರ ಭಾರತದಲ್ಲಿ ಬಹಳ ಜನಪ್ರಿಯವಾಗಿದೆ. ಹಣ್ಣಿನ ತಿರುಳು ನಾರಿನಿಂದ ಮುಕ್ತವಾಗಿದ್ದು, ರುಚಿಕರವಾಗಿದ್ದು, ಸುವಾಸನೆಯಿಂದ ಕೂಡಿದೆ. ಹಣ್ಣಿಗೆ ಉತ್ತಮ ಬಾಳಿಕೆ ಕೂಡ ಇದೆ.
9. ಕೇಸರ್
ಇದು ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಹೆಚ್ಚು ಪ್ರಚಲಿತವಾದ ತಳಿಯಾಗಿದೆ. ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳ ವಾಣಿಜ್ಯ ತಳಿಯಾದ ಇದನ್ನು ಕರ್ನಾಟಕದಾದ್ಯಂತ ಸಮೃದ್ಧಿಯಾಗಿ ಬೆಳೆಯಬಹುದು. ಹಣ್ಣು ಆಕರ್ಷಕವಾಗಿದ್ದು ಎರಡೂ ಭುಜಗಳು ಒಂದೇ ಸಮನಾಗಿರುತ್ತವೆ. ಮಾಗಿದ ಹಣ್ಣುಗಳು ಹೊಳೆಯುವ ಹಳದಿಬಣ್ಣದಿಂದ ಕೂಡಿದ್ದು ಹೆಚ್ಚು ಆಕರ್ಷಕವಾಗಿರುತ್ತವೆ. ಹೆಚ್ಚು ಕಡಿಮೆ ಪ್ರತಿ ವರ್ಷವೂ ನಿಯಮಿತವಾದ ಇಳುವರಿಯನ್ನು ನಿರೀಕ್ಷಿಸಬಹುದು. ಇಳುವರಿ ಮತ್ತು ಗುಣಮಟ್ಟ ಉತ್ತಮವಾಗಿರುವದರಿಂದ ಮಾರುಕಟ್ಟೆಯಲ್ಲಿ ಈ ತಳಿಗೆ ಬೇಡಿಕೆ ಹೆಚ್ಚು.
10. ಖಾದರ್
ಇದು ಬಾದಾಮಿ/ಆಪೂಸ್ ಮಾವಿನ ತಳಿಯ ಆಯ್ಕೆಯಾಗಿದ್ದು, ಒಣ ಪ್ರದೇಶಕ್ಕೆ ಹೆಚ್ಚು ಸೂಕ್ತವಾಗಿದೆ.
11. ಪಂಚಧಾರ ಕಳಸ
ಇದು ರಸಭರಿತ ತಳಿಯಾಗಿದ್ದು, ಪೈರಿ ತಳಿಯ ಬದಲಾಗಿ ಇದನ್ನು ಬೆಳೆಯಬಹುದು. ಇದು ಪೈರಿ ತಳಿಗಿಂತ ಹೆಚ್ಚು ಇಳುವರಿ ಕೊಡುತ್ತದೆ.
ii) ಸಂಕರಣ ತಳಿಗಳು
1) ಮಲ್ಲಿಕಾ (ನೀಲಂ
x ದಶಹರಿ)
:
ಇದು ಸಾಧಾರಣದಿಂದ ಉತ್ತಮ ಇಳುವರಿ ಕೊಡುವ (15 ಟನ್ / ಹೆಕ್ಟೇರ್) ಸಂಕರಣ (ಹೈಬ್ರಿಡ್) ತಳಿಯಾಗಿದ್ದು, ಪ್ರತಿ ವರ್ಷ ನಿಯಮಿತ ಇಳುವರಿ ಕೊಡುವ ಗುಣಧರ್ಮವನ್ನು ಹೊಂದಿರುತ್ತದೆ. ಹಣ್ಣಿನ ಗಾತ್ರ ದೊಡ್ಡದಾಗಿದ್ದು (400-600 ಗ್ರಾಂ) ಇದರ ಸಿಪ್ಪೆ ತೊಗಲಿನಂತಿದ್ದು ಓಟೆ ಚಿಕ್ಕದಾಗಿರುತ್ತದೆ. ತಿರುಳು ಗಟ್ಟಿ, ರಸಭರಿತ ಮತ್ತು ಹೆಚ್ಚು ಸಿಹಿ (ಟಿ.ಎಸ್.ಎಸ್. 25 ಬ್ರಿಕ್ಸ್)ಯಾಗುತ್ತದೆ. ಈ ಹಣ್ಣನ್ನು ಹೆಚ್ಚು ಕಾಲ ಕೆಡದಂತೆ ಇಡಬಹುದಾಗಿದೆ.
2) ನೀಲ್ಗೊವ (ನೀಲಂ
X ಎರಮಲಗೋವಾ)
ಇದು ಉತ್ತಮ ಇಳುವರಿ ಕೊಡುವ ಸಂಕರಣ ತಳಿಯಾಗಿದೆ. ಹಣ್ಣು ಮಧ್ಯಮದಿಂದ ದೊಡ್ಡ ಗಾತ್ರ ಹೊಂದಿದ್ದು, ತಿರುಳು ನಾರು ರಹಿತವಾಗಿ ಗಟ್ಟಿಯಾಗಿದೆ. ಮಧ್ಯಮಗಾತ್ರದ ಓಟೆ ಹೊಂದಿದ್ದು, ಹಣ್ಣನ್ನು ಕೆಲ ದಿನಗಳವರೆಗೆ ಕೆಡದಂತೆ ಇಡಬಹುದು. ಇದು ಒಣ ಪ್ರದೇಶಗಳಿಗೆ ಯೋಗ್ಯ ತಳಿ.
3) ನೀಲೆತಾನ್ (ನೀಲಂ
X ಬೆನೆಶಾನ್)
ಇದು ಹೆಚ್ಚು ಇಳುವರಿ ಕೊಡುವ, ಒಣ ಪ್ರದೇಶಕ್ಕೆ ಸೂಕ್ತವಾದ ಹಾಗೂ ತಡವಾಗಿ ಇಳುವರಿ ಕೊಡುವ ಸಂಕರಣ ತಳಿಯಾಗಿದೆ.
4) ಆಮ್ರಪಾಲಿ (ದಶಹರಿ
* ನೀಲಂ)
ಇದು ಸಾಧಾರಣದಿಂದ ಉತ್ತಮ ಇಳುವರಿ ಕೊಡುವ ಸಂಕರಣ ತಳಿಯಾಗಿದ್ದು, ಉತ್ತಮ ಹಣ್ಣು ಪಡೆಯಬಹುದು. ಈ ತಳಿಯು ಹೆಚ್ಚು ಸಾಂದ್ರತೆಯಲ್ಲಿ ನಾಟಿ ಮಾಡಲು (High density planting) ಸೂಕ್ತವಾಗಿದೆ. ಹಣ್ಣುಗಳು ಕಡು ಕಿತ್ತಳೆ ಬಣ್ಣ ಹಾಗೂ ಮಧ್ಯಮ ಗಾತ್ರ ಹೊಂದಿರುತ್ತವೆ.
5) ರತ್ನ (ನೀಲಂ
x ಆಪೂಸ್)
ಹಣ್ಣಿನ ಗಾತ್ರ ಮಧ್ಯಮವಾಗಿದ್ದು ರುಚಿ ಬಹಳ ಚೆನ್ನಾಗಿರುತ್ತದೆ. ಇದು ಕರಾವಳಿ ಪ್ರದೇಶಕ್ಕೆ ಸೂಕ್ತವೆಂದು ಕಂಡುಬಂದಿದೆ.
iii) ಗುಡ್ಡಗಾಡು ಪ್ರದೇಶಗಳಿಗೆ
- ಬಾದಾಮಿ
- ರಸಪುರಿ
- ಮಲಗೋವ ಮತ್ತು
- ಮುಂಡಪ್ಪ (ದಕ್ಷಿಣ ಕನ್ನಡ ಜಿಲ್ಲೆಯ ಜನಪ್ರಿಯ ತಳಿ. ಹಣ್ಣಿನ ಗಾತ್ರ ದೊಡ್ಡದಾಗಿದ್ದು, ಚಿಕ್ಕ ಓಟೆ ಮತ್ತು ಉತ್ತಮ ಗುಣ ಹೊಂದಿರುತ್ತದೆ).
iv) ಕರಾವಳಿ ಪ್ರದೇಶಗಳಿಗೆ
- ಬಾದಾಮಿ
- ರಸಪುರಿ
- ನೀಲಂ ಮತ್ತು
- ಮುಂಡಪ್ಪ ಮತ್ತು
- ಕರಿಇಶಾಡ್ : ಬೇಗ ಇಳುವರಿ ಕೊಡುವ ತಳಿಯಾಗಿದ್ದು, ಕರಾವಳಿ ಪ್ರದೇಶ ಹಾಗೂ ಘಟ್ಟ ಪ್ರದೇಶಗಳಿಗೆ ಸೂಕ್ತವಾಗಿದೆ. ಆದರೆ ಹಣ್ಣುಗಳನ್ನು ಹೆಚ್ಚು ದಿನ ಶೇಖರಿಸಿ ಇಡಲಾಗುವುದಿಲ್ಲ.
- ಬೆನೆಟ್ - ಆಲ್ಪಾನ್ನೋ : ಇದು ಕರಾವಳಿಯ ಜನಪ್ರಿಯ ತಳಿಯಾಗಿದ್ದು, ಹಣ್ಣುಗಳು ಸಿಹಿಯಾಗಿದ್ದು ಮಧ್ಯಮ ಗಾತ್ರ ಹೊಂದಿವೆ.
- ಕಲಪಾಡಿ: ಗಿಡ್ಡವಾದ ತಳಿ. ಹಣ್ಣುಗಳು ಚಿಕ್ಕದಾಗಿದ್ದು ಮೂತಿ ಎದ್ದು ಕಾಣಿಸುವಂತಿರುತ್ತದೆ. ತಿರುಳು ಹೆಚ್ಚು ಸಿಹಿಯಾಗಿರುತ್ತದೆ.
V) ಉಪ್ಪಿನಕಾಯಿ ತಳಿಗಳು
ಅಪ್ಪಿಮಿಡಿ, ಆಥ್ಲೆಟ್, ಕೌಸಜಿಪಟೇಲ ಇವು ಉಪ್ಪಿನಕಾಯಿಗಾಗಿರುವ ಸೂಕ್ತವಾದ ತಳಿಗಳು.
ಬೇಸಾಯ ಸಾಮಗ್ರಿಗಳು
No comments:
Post a Comment