• "ಆರೋಗ್ಯಕರ ದೇಹ ಮತ್ತು ಆರೋಗ್ಯಕರ ಗ್ರಹಕ್ಕಾಗಿ ಸಾವಯವವನ್ನು ಬೆಳೆಯಿರಿ." • "ಸ್ವಚ್ಛ ಮತ್ತು ಹಸಿರನ್ನು ಸೇವಿಸಿ - ಸಾವಯವವನ್ನು ಆರಿಸಿ." • "ಹಣಕ್ಕಾಗಿ ಮಾತ್ರವಲ್ಲ, ಹಲವರ ಆರೋಗ್ಯಕ್ಕಾಗಿ ಸಾವಯವ ಕೃಷಿ." • "ಮಣ್ಣನ್ನು ಪೋಷಿಸಿ, ಆತ್ಮವನ್ನು ಪೋಷಿಸಿ - ಸಾವಯವವಾಗಿ ಬೆಳೆಯಿರಿ." • "ಆರೋಗ್ಯಕರ ಭೂಮಿ, ಆರೋಗ್ಯಕರ ಸಸ್ಯಗಳು, ಆರೋಗ್ಯಕರ ಜನರು." • "ನಿಮ್ಮ ರೈತನನ್ನು ತಿಳಿದುಕೊಳ್ಳಿ, ನಿಮ್ಮ ಆಹಾರವನ್ನು ತಿಳಿದುಕೊಳ್ಳಿ - ಸಾವಯವಕ್ಕೆ ಹೋಗಿ." • "ರಾಸಾಯನಿಕ-ಮುಕ್ತ ಮತ್ತು ಆರೋಗ್ಯಕರ - ಅದು ಸಾವಯವ ಭರವಸೆ." • "ಪ್ರಕೃತಿಯ ಉದ್ದೇಶದಂತೆ ಸಾವಯವ ಬೆಳೆ ಬಿತ್ತಿ, ಬೆಳೆಸಿ ಮತ್ತು ತಿನ್ನಿರಿ." • "ಸಾವಯವ: ಪ್ರಕೃತಿಗೂ ಒಳ್ಳೆಯದು, ನಿಮಗೂ ಇನ್ನೂ ಒಳ್ಳೆಯದು." • "ಭೂಮಿಯಿಂದ ಭೂಮಿಗೆ - ಸಾವಯವ ಕೃಷಿ." • "ಸಾವಯವವನ್ನು ಆರಿಸಿ, ಜೀವನವನ್ನು ಆರಿಸಿ." • "ಭೂಮಿಯನ್ನು ಸಂರಕ್ಷಿಸಿ, ಸಾವಯವ ಪದ್ಧತಿಗೆ ಹೋಗಿ." • "ಪೌಷ್ಠಿಕಾಂಶಕ್ಕಾಗಿ ಕ್ರಮ ಕೈಗೊಳ್ಳಿ - ಸಾವಯವ ಕೃಷಿಯನ್ನು ಬೆಂಬಲಿಸಿ." • "ಸುಸ್ಥಿರ ವಿಕಾಸಕ್ಕಾಗಿ ಸಾವಯವ ಕ್ರಾಂತಿಯಲ್ಲಿ ಸೇರಿ." • "ಈಗಲೇ ಕಾರ್ಯನಿರ್ವಹಿಸಿ, ಬುದ್ಧಿವಂತಿಕೆಯಿಂದ ಕೃಷಿ ಮಾಡಿ - ಸಾವಯವಕ್ಕೆ ಹೋಗಿ." • "ರಾಸಾಯನಿಕಗಳನ್ನು ಬಳಸಲು ನಿರಾಕರಿಸು, ಇಂದೇ ಸಾವಯವವನ್ನು ಆರಿಸಿಕೊಳ್ಳಿ!" • "ಭಯಪಡಬೇಡಿ, ಇದು ಸಾವಯವ!" • "ಸಾಂಪ್ರದಾಯಿಕ ಪದ್ಧತಿ ಸ್ವೀಕಾರಾರ್ಹ, ಸಾವಯವ ಪದ್ಧತಿ ಸುಸ್ಥಿರ." • "ವಿಷಕಾರಿಯನ್ನು ತಿರಸ್ಕರಿಸಿ. ಸಾವಯವವನ್ನು ಅಳವಡಿಸಿಕೊಳ್ಳಿ." • "ಶುದ್ಧ ಆಹಾರ ಬೇಕು - ಸಾವಯವ ಆಹಾರ ಬೇಕು." • "ನಮ್ಮ ಗ್ರಹವನ್ನು ಒಂದೊಂದೇ ಜಮೀನಿನಿಂದ ಉಳಿಸಿ - ಸಾವಯವವನ್ನು ಆರಿಸಿ." • "ಸಾವಯವ ಕೃಷಿ: ಭೂಮಿಯನ್ನು ಗುಣಪಡಿಸುವುದು, ಅದರ ಜನರಿಗೆ ಆಹಾರ ನೀಡುವುದು." • "ಉಸಿರಾಡುವ ಗ್ರಹಕ್ಕಾಗಿ ಸಾವಯವವಾಗಿ ಬೆಳೆಯಿರಿ." • "ಸಾವಯವ ಕೈಗಳಿಂದ ಭೂಮಿಯನ್ನು ಬೆಳೆಸಿ." • "ಹಸಿರು ಕೃಷಿ, ಶುದ್ಧ ಆಹಾರ - ಅದು ಸಾವಯವ ಜೀವನ." • "ಸಾವಯವ ಜೇನುಗೂಡುಗಳಿಂದ ಸಮುದಾಯಗಳು ಅಭಿವೃದ್ಧಿ ಹೊಂದುತ್ತವೆ." • "ಒಟ್ಟಾಗಿ, ನಾವು ಸಾವಯವವಾಗಿ ಆರೋಗ್ಯಕರ ಜಗತ್ತನ್ನು ಬೆಳೆಸಬಹುದು." • "ಸ್ಥಳೀಯ, ಸಾವಯವ ಮತ್ತು ಅಭಿವೃದ್ಧಿ ಹೊಂದುತ್ತಿರುವ - ಸಮುದಾಯ ಕೃಷಿ ಅತ್ಯುತ್ತಮವಾಗಿದೆ." • "ಸಾವಯವ ರೈತರು ಭೂಮಿಯ ರಕ್ಷಕರು - ಅವರನ್ನು ಬೆಂಬಲಿಸಿ." • "ಸಮುದಾಯದೊಂದಿಗೆ ಒಗ್ಗಟ್ಟಿನಿಂದ - ಸಾವಯವವಾಗಿ ಕೃಷಿ ಮಾಡೋಣ." • "ನಿಮ್ಮ ತಟ್ಟೆಯಲ್ಲಿ ಸಾವಯವ, ನೀವು ಮೆಚ್ಚಬಹುದಾದ ಆರೋಗ್ಯ." • "ನಿಮ್ಮ ಆರೋಗ್ಯವು ಒಂದು ಹೂಡಿಕೆ, ಖರ್ಚಲ್ಲ. ಸಾವಯವ ಪದ್ಧತಿಯನ್ನು ಅನುಸರಿಸಿ." • "ಬುದ್ಧಿವಂತಿಕೆಯಿಂದ ತಿನ್ನಿರಿ - ಆರೋಗ್ಯಕರ ನಾಳೆಗಾಗಿ ಸಾವಯವವನ್ನು ಆರಿಸಿ." • "ಶುದ್ಧ ಆಹಾರವು ಉತ್ತಮ ಮನಸ್ಥಿತಿಗೆ ಸಮಾನವಾಗಿದೆ - ಸಾವಯವ ಆಹಾರ ಸೇವಿಸಿ." • "ಬಲವಾದ ರೋಗನಿರೋಧಕ ಶಕ್ತಿಗಾಗಿ, ಸಾವಯವಕ್ಕೆ ಹೋಗಿ." • "ಸಾವಯವ ಅಭಿಮಾನಿಯಾಗಿರಿ." • "ಸಾವಯವ: ಏಕೆಂದರೆ ಪ್ರಕೃತಿಗೆ ಚೆನ್ನಾಗಿ ತಿಳಿದಿದೆ." • "ಹೊಸ ಎಲೆಯನ್ನು ತಿರುಗಿಸಿ, ಸಾವಯವ ಕವಲುಗಳನ್ನು ಬಳಸಿ." • "ಅದನ್ನು ನೈಜವಾಗಿಡಿ, ಸಾವಯವವಾಗಿಡಿ." • "ಸಾವಯವವನ್ನು ಕಚ್ಚಿ, ಆರೋಗ್ಯವನ್ನು ಕಚ್ಚಿ." • "ಸಾವಯವ ಕೃಷಿಯಿಂದ ಸುಸ್ಥಿರತೆ ಪ್ರಾರಂಭವಾಗುತ್ತದೆ." • "ಭವಿಷ್ಯವನ್ನು ಕೊಯ್ಲು ಮಾಡಿ - ಇಂದು ಸಾವಯವವಾಗಿ ಗಿಡ ನೆಡಿ." • "ಸುಸ್ಥಿರ, ಜವಾಬ್ದಾರಿಯುತ ಮತ್ತು ಸಾವಯವ." • "ಸುಸ್ಥಿರ ದೃಶ್ಯಕ್ಕಾಗಿ ಹಸಿರು ಬೆಳೆಸಿ, ಸಾವಯವ ಬೆಳೆಸಿ." • "ಬೀಜದಿಂದ ಮೇಜಿಗೆ, ಸುಸ್ಥಿರವಾಗಿ ಸ್ಥಿರ - ಅದು ಸಾವಯವ." down!

ನಾವು ಬೆಳೆಸುವ ಬೆಳೆಗೆ ಎಷ್ಟು ಪ್ರಮಾಣದ ಮಣ್ಣು ಬೇಕು?

  • ನಾವು ಬೆಳೆಸುವ ಬೆಳೆಗೆ ಎಷ್ಟು ಪ್ರಮಾಣದ ಮಣ್ಣು ಬೇಕೆಂದು ಲೆಕ್ಕ ಹಾಕುವ ವಿಧಾನ ನಮ್ಮಗಳಿಗೆ ಗೊತ್ತಿರಬೇಕು,ಮಣ್ಣಿಗೂ ಬೆಳೆಗೂ ಇರುವ ಸಂಬಂಧವನ್ನು ಅರಿತುಕೊಳ್ಳಬೇಕು.
  • ಬಿಸಿಲನ್ನು ಸಸ್ಯ/ಗಿಡಗಳ ಹಸಿರೆಲೆಗಳ ಮೂಲಕ ಸುಗ್ಗಿ/ಕುಯಿಲು(Sun Light Harvest) ಮಾಡಿದಾಗ ದೊರೆಯುವ ಜೀವರಾಶಿ(Biomass) ಬಳಸಿ ಫಲವಾತ್ತದ/ಮಡಿ/ಪೋಷಕ ಮಣ್ಣು ನಿರ್ಮಾಣ ಮಾಡಬೇಕು.ದಾಖಲೆ/ಗರಿಷ್ಠ ಇಳುವರಿಯನ್ನು ಪಡೆಯಬೇಕಾದರೆ ಮುಖ್ಯವಾಗಿ ನಾವು ನಮ್ಮ ಜಮೀನಿನ ಮೇಲೆ ಬೀಳುವ ಬಿಸಿಲನ್ನು ಪ್ರತಿ ದಿನ ಗರಿಷ್ಠ ಪ್ರಮಾಣದಲ್ಲಿ ಸುಗ್ಗಿ ಮಾಡಬೇಕು.
  • 01 ಚದರಡಿ ಜಾಗದಲ್ಲಿ ಪ್ರತಿ ದಿನ(08 ರಿಂದ 10 ಗಂಟೆಗಳ ಕಾಲ) ಬೀಳುವ ಬಿಸಿಲನ್ನು ಹಸಿರು ಎಲೆಗಳ ಮೂಲಕ ಸುಗ್ಗಿ ಮಾಡಿದಾಗ ಗಿಡದಲ್ಲಿ ಸುಮಾರು 3 ರಿಂದ 4 ಗ್ರಾಂ ಗ್ಲೂಕೋಸ್ ಶೇಖರಿಸಲ್ಪಾಡುತ್ತದೆ. ಇದನ್ನು ಒಣ ಸಾಮಗ್ರಿ (Dry matter) ಎಂದು ಕರೆಯುತ್ತೇವೆ.

01 ವರ್ಷಕ್ಕೆ ಉತ್ಪತ್ತಿಯಾಗುವ ಒಣ ಸಾಮಗ್ರಿ

365 ದಿನಗಳು *04 ಗ್ರಾಂ =1.5 ಕೆಜಿ/ಚದರಡಿ

-1.5 ಕೆಜಿ ಒಣ ಸಾಮಗ್ರಿ ಬಳಸಿ ಸುಮಾರು 600 ಗ್ರಾಂ ಉತ್ತಮ ದರ್ಜೆಯ ಕಂಪೋಸ್ಟ್ ತಯಾರಿ ಮಾಡಬಹುದು.

  • 01 ಚದರಡಿ ಮೇಲೆ ಬೀಳುವ ಬಿಸಿಲನ್ನು ಸುಗ್ಗಿ ಮಾಡಲು 600 ಗ್ರಾಂ ಕಳೆತ ಮಿಶ್ರಗೊಬ್ಬರ/ಕಂಪೋಸ್ಟ್/ ಹಸಿರೆಲೆ ಗೊಬ್ಬರ ಭೂಮಿಗೆ ಸೇರಿಸಬೇಕು.
  •  01 ಗುಂಟೆ (33*33=1089) ಸುಮಾರು 1000 ಚದರಡಿಯಲ್ಲಿ ಬಿಸಿಲನ್ನು ಸುಗ್ಗಿ ಮಾಡಿದಾಗ ದೊರೆಯುವ ಒಣ ಸಾಮಗ್ರಿ

1000 ಚದರಡಿ *1.5 ಕೆಜಿ =1500 ಕೆಜಿ

=600 ಕೆಜಿ ಕಂಪೋಸ್ಟ್ 

01 ಎಕರೆ =40 ಗುಂಟೆ *600 ಕೆಜಿ =24 ಟನ್

  • 01 ಎಕರೆಗೆ 24 ಟನ್ ಕಂಪೋಸ್ಟ್ ಅಥವಾ ಇದಕ್ಕೆ ಸರಿ ಸಮಾನ ಪ್ರಮಾಣದ ಹಸಿರೆಲೆ ಗೊಬ್ಬರ ಕೊಟ್ಟು ಫಲವತ್ತಾದ ಮಣ್ಣು ಸೃಷ್ಟಿಸಬೇಕು.ಇದನ್ನು ಮಣ್ಣಿಗೆ ಪ್ರಾರಂಭದಲ್ಲಿ ಒಮ್ಮೆ ಕೊಟ್ಟರೆ ಸಾಕು,ಮುಂದೆ ಬೆಳೆಯುವ ಬೆಳೆಗಳ ಅವಶೇಷಗಳನ್ನು (Crop Residues) ಮತ್ತೆ ಭೂಮಿಗೆ ಹಾಕುವುದರಿಂದ ಮುಂದಿನ ದಿನಗಳಲ್ಲಿ ಕಂಪೋಸ್ಟ್ ಕೊಡುವ ಅಗತ್ಯ ಇರುವುದಿಲ್ಲ.
  • ಮಣ್ಣಿನ ಒಟ್ಟು ಸಾವಯವ ಪದಾರ್ಥಗಳಲ್ಲಿ(ಲಿಗ್ನೋ ಪ್ರೊಟೀನ್) ಮೂರನೇ ಒಂದು(1/3) ಭಾಗದಷ್ಟು

ಖನಿಜೀಕರಣಗೊಂಡು(Mineralisation) ನಶಿಸಿ ಹೋಗುತ್ತದೆ, ನಾವು ಇಷ್ಟು ಪ್ರಮಾಣದ ಕಳೆತ ಸಾಮಗ್ರಿಯನ್ನು ಪ್ರತಿ ವರ್ಷ ಮಣ್ಣಿಗೆ ಕೊಡಬೇಕಾಗುತ್ತದೆ. ಆದ್ದರಿಂದ ಇದನ್ನು ತುಂಬಿಕೊಡಲು 100 ದಿನಗಳ ಅವಧಿಯ ಒಂದು ಮೇವು/ಧಾನ್ಯ ಬೆಳೆಗಳನ್ನು ಬೆಳೆದು ಉಳಿಕೆಯನ್ನು ಮಣ್ಣಿಗೆ ಸೇರಿಸುವುದು ಅಥವಾ ಹಸಿರೆಲೆ ಗೊಬ್ಬರ ಬೆಳೆದು ಸೇರಿಸುವುದು ಅಥವಾ 08 ಟನ್ ಕಂಪೋಸ್ಟ್ ಗೊಬ್ಬರ ನೀಡಿ ಮಣ್ಣಿನ ಕಾಯವನ್ನು ಕಾಪಾಡಿ ರಸಭರಿತ ಬೆಳೆ ಬೆಳೆಯಬಹುದು.

(ಮಾಹಿತಿ ಮೂಲ:ಶ್ರೀಪಾದ ದಬೋಲ್ಕರ್ ಅವರ 'Plenty for All' ಪುಸ್ತಕದಿಂದ)

No comments:

Post a Comment