ಎರೆಹುಳುಗಳನ್ನು ರೈತನ ಮಿತ್ರ ಎನ್ನುತ್ತೇವೆ. ಇವು ಮಣ್ಣನ್ನು ನೈಸರ್ಗಿಕವಾಗಿ ನಿರಂತರವಾಗಿ ಉಳುಮೆ ಮಾಡುತ್ತಿರುತ್ತವೆ. ಜೊತೆಗೆ ಅರ್ಧ ಕೊಳೆತ ಸಾವಯವ ತ್ಯಾಜ್ಯಗಳನ್ನು ಕರಗಿಸಿ ಉತ್ಕ್ರಷ್ಟ ದರ್ಜೆಯ ಗೊಬ್ಬರವನ್ನು ಉತ್ಪತ್ತಿ ಮಾಡುತ್ತವೆ. ಸಾಕಷ್ಟು ಉಪಯೋಗಕಾರಿ ಸೂಕ್ಷ್ಮಾಣುಜೀವಿಗಳು ಎರೆಹುಳುವಿನ ಅನ್ನನಾಳದಲಿರುವದರಿಂದ ಗೊಬ್ಬರದ ಗುಣಮಟ್ಟವು ಉತ್ತಮವಾಗಿರುತ್ತದೆ. ಆದರೇ ಇತ್ತೀಚಿನ ದಿನಗಳಲ್ಲಿ ಎರೆಹುಳುಗಳ ಸಂತತಿ ಸಾಕಷ್ಟು ಕ್ಷೀಣಿಸುತ್ತಿದೆ. ಇದರಿಂದ ಕೃತಕವಾಗಿ ಎರೆಹುಳುಗಳನ್ನು ತೊಟ್ಟಿಯಲ್ಲಿ ಸಾವಯವ ತ್ಯಾಜ್ಯಗಳ ಜೊತೆಗೆ ಸೇರಿಸಿ ಗೊಬ್ಬರದ ಜೊತೆ ಭೂಮಿಗೆ ಸೇರಿಸುವ ವಾಡಿಕೆಯಿದೆ. ಈ ರೀತಿಯ ತೊಟ್ಟಿಯನ್ನು ನಿರ್ಮಿಸಿ, ಅರೆಕೊಳೆತ ಸಾವಯವ ಸಂಯುಕ್ತಗಳು ತ್ಯಾಜ್ಯಗಳನ್ನು ಸೇರಿಸಿ, ಅರ್ಧ ಕೇ.ಜಿ ಯಷ್ಟು ಎರೆಹುಳು ಸೇರಿಸಿ.
ಎರೆಹುಳು ಏನು ಮಾಡುತ್ತೆ ಗೊತ್ತಾ?
ನಿಮಗೆ ಆಶ್ಚರ್ಯ ಆಗಬಹುದು, ಒಂದು ಅತ್ಯಂತ ಫಲವತ್ತಾದ ಜಮೀನಿನ ಕೆಳಗೆ ಒಂದು ಚದುರ ಭೂಮಿಯಲ್ಲಿ 16 ಎರೆಹುಳುಗಳು ಇರುತ್ತವೆ! ಮಣ್ಣಿನ ಅಡಿಯಲ್ಲಿ ಬಿಡುವಿಲ್ಲದೇ ದುಡಿಯುತ್ತಿರುತ್ತವೆ. ವಾರದ ರಜೆ, ಸಂಬಳ, ವಿಶೇಷ ಭತ್ಯೆ ಏನೂ ತಗೆದುಕೊಳ್ಳದೇ ನಮ್ಮ ಜಮೀನನ್ನು ಉಳುಮೆ ಮಾಡುತ್ತಿರುತ್ತವೆ.
ಒಂದು ಎರೆಹುಳು ಒಂದು ದಿನಕ್ಕೆ ತನ್ನ ದೇಹದ ತೂಕದ ಒಂದೂವರೆ ಪಟ್ಟು ಹೆಚ್ಚು ತೂಕದ ಮಣ್ಣನ್ನು ಅಗೆದು ಹೊರಹಾಕುತ್ತವೆ! ಒಂದು ಎಕರೆಯಲ್ಲಿ ಅಂದಾಜು ಒಂದು ಲಕ್ಷ ಎರೆಹುಳುಗಳು ಇದ್ದಾವೆ ಎಂದು ಲೆಕ್ಕ ಹಾಕಿದರೂ, ಅವುಗಳ ತೂಕ ಸುಮಾರು ಒಂದು ಟನ್. ಇಷ್ಟು ಹುಳುಗಳು ದಿನವೊಂದಕ್ಕೆ ಒಂದೂವರೆ ಟನ್‌ನಷ್ಟು ಮಣ್ಣನ್ನು ಅಗೆಯುತ್ತವೆ. ಹಾಗೆ ಮಣ್ಣು ತಿಂದು ಮಲವಿಸರ್ಜನೆ ಮಾಡಲು ಪ್ರತಿ ರಾತ್ರಿ ಒಂದು ಎರೆಹುಳು ಎಂಟು ಸಲ ಭೂಮಿಯ ಮೇಲ್ಭಾಗಕ್ಕೆ ಬರುತ್ತದೆ! ಪ್ರತಿ ಬಾರಿ ಅದು ಬೇರೆ ಬೇರೆ ದಾರಿಯಲ್ಲೇ ಹೊರಬರುತ್ತದೆ! ಹಾಗೆಯೇ ಬೇರೆ ಹಾದಿಯಲ್ಲಿ ಒಳಹೋಗುತ್ತದೆ!ಅಂದರೆ ಲೆಕ್ಕ ಹಾಕಿ,
ಒಂದು ರಾತ್ರಿ ಒಂದು ಎರೆಹುಳು ಭೂಮಿಗೆ 14 ರಿಂದ 18 ರಂಧ್ರಗಳನ್ನು ಕೊರೆಯುತ್ತದೆ. ಒಂದು ಅಡಿ ಜಾಗದಲ್ಲಿ 10 ಎರೆ ಹುಳುಗಳಿದ್ದರೆ ಅಲ್ಲಿ ಸುಮಾರು 180 ರಂಧ್ರಗಳಾಗುತ್ತವೆ!
600 ಕೋಟಿ ವರ್ಷಗಳಿಂದ ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿಗಳಲ್ಲೂ ಎರೆಹುಳು ಬದುಕುಳಿದು ತನ್ನ ಆಸ್ತಿತ್ವವನ್ನು ಕಾಯ್ದುಕೊಂಡಿದೆ. ಭೂಮಂಡಲದ 100 ಜೀವಜಂತುಗಳ ಪೈಕಿ ಅತ್ಯಂತ ಯಶಸ್ವಿ ಜೀವಿಯಾಗಿದೆ ಎಂದು ಸಮೀಕ್ಷೆಗಳು ತಿಳಿಸುತ್ತವೆ. ದೇಶಿ ಎರೆಹುಳು ಮಣ್ಣನ್ನು ತಿನ್ನುತ್ತಾ 15ರಿಂದ 25 ಅಡಿ ಆಳಕ್ಕೆ ಹೋಗಿ ಬಂದು ದಿನದ 24 ಗಂಟೆಯೂ ಅವಿಶ್ರಾಂತವಾಗಿ ದುಡಿಯುತ್ತದೆ. ಇದರಿಂದ ಮಣ್ಣಿನ ಮೂಲಕ ಭೂಮಿಯ ಒಳಭಾಗಕ್ಕೆ ಗಾಳಿ ಹರಿಯುತ್ತದೆ. ಗಿಡಗಳ ಬೇರಿಗೆ ನೀರು ಒಸರುತ್ತದೆ. ಎರೆಹುಳುವಿನ ಮಲ ನಮ್ಮ ಬೆಳೆಗಳಿಗೆ ಉತ್ಕೃಷ್ಟ ಗೊಬ್ಬರವೂ ಆಗುತ್ತದೆ.
ಹಾಗಾಗಿ ಯಾವಾಗಲೂ ಜಮೀನಿಗೆ ಬೆಂಕಿ ಇಡಬಾರದು, ಕೀಟನಾಶಕ, ಕಳೆನಾಶಕ ಅಥವ ಯಾವುದೇ ರಸಾಯನಿಕ ಬಳಸಬಾರದು ಇರೋದನ್ನು ಬೆಳಸಿಕೊಂಡು ಹೋಗಬೇಕು .ಎರೆಹುಳುವಿನ ಸಂತತಿ ಉಳಿಸಿ..
ಇಲ್ಲಿನ ಮಾದರಿಯಲ್ಲಿ ತೊಟ್ಟಿಯ ಸುತ್ತ ಎರೆಹುಳು ಭಕ್ಷಕಗಳ (ಇಲಿ, ಇರುವೆ, ಹಾವು, ಕೋಳಿ ಇತ್ಯಾದಿ) ಪ್ರವೇಶವನ್ನು ತಡೆಯಲು ತೊಟ್ಟಿಯ ಸುತ್ತ ನೀರಿನ ಗುಂಡಿಯನ್ನು ಮಾಡಲಾಗಿದೆ. ಈ ನೀರಿನಲ್ಲಿ ಅಜೋಲಾವನ್ನು ಸಹ ಸೇರಿಸಿದ್ದಾರೆ. ಅಜೋಲಾ ಒಂದು ನೈಸರ್ಗಿಕ ಸಾರಜನಕದ ಮೂಲ. ಇದನ್ನು ಹಸುಗಳಿಗೆ ಸಹ ಆಹಾರದ ಜೊತೆ ನೀಡುವದರಿಂದ ಹಾಲಿನ ಗುಣಮಟ್ಟ ಮತ್ತು ಪ್ರಮಾಣ ಹೆಚ್ಚಾಗುತ್ತದೆ.ಜೊತೆಗೆ ತೊಟ್ಟಿಯ ಸುತ್ತ ಹಸಿರೆಲೆ ಗೊಬ್ಬರಗಳನ್ನು ನೆಡುವದರಿಂದ ನಿಯಮಿತವಾಗಿ ಹಸಿರೆಲೆಗಳನ್ನು ಕತ್ತರಿಸಿ ತೊಟ್ಟಿಗೆ ಸೇರಿಸಿದರೆ ಬೇಗನೆ ಕೊಳೆತು ಗೊಬ್ಬರವಾಗುತ್ತದೆ. ಸಾಮಾನ್ಯವಾಗಿ ಗ್ಲೈರಿಸೀಡಿಯಾ ವನ್ನು ನೆಡುತ್ತಾರೆ. ಇದನ್ನು ಮೂರು ತಿಂಗಳಿಗೊಮ್ಮೆ ಕತ್ತರಿಸಬಹುದು.
ಇದರ ಜೊತೆಗೆ ನಾಟಿ ಬೀಜಗಳನ್ನು ನೆಡುವದರಿಂದ ದೇಶೀಯ ಬೀಜಗಳನ್ನು ಸಂರಕ್ಷಿಸಬಹುದು. ಬಳ್ಳಿಗಳನ್ನು ಸುಲಭವಾಗಿ ಹಬ್ಬಿಸಬಹುದು. ಮನೆಗೆ ಸಾಕಗುವಷ್ಟು ಕಾಯಿಪಲ್ಲೆಗಳನ್ನು ಸಹ ಬೆಳೆದುಕೊಳ್ಳಬಹುದು. ಬೀಜಗಳನ್ನು ಮಾರಾಟ ಮಾಡಬಹುದು.
ಇದರ ಜೊತೆಗೆ ಎರೆಹುಳು ತೊಟ್ಟಿಯಿಂದ ಎರೆಜಲವನ್ನು ಸಂಗ್ರಹಿಸಿ ಸಸ್ಯಬೆಳವಣಿಗೆಯ ಪ್ರಚೋದಕವಾಗಿ ಉಪಯೋಗಿಸಬಹುದು.
No comments:
Post a Comment